ನವದೆಹಲಿ (ಅ.01): ಕೋವಿಡ್ (Covid) ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಚಾಲನಾ ಪರವಾನಿಗೆ (DL), ನೋಂದಣಿ ಪ್ರಮಾಣ ಪತ್ರ (Registration Certificate) ಹಾಗೂ ಪರ್ಮಿಟ್ ಸೇರಿದಂತೆ ವಾಹನಗಳ ದಾಖಲೆಗಳ ಮಾನ್ಯತಾ ಅವಧಿಯನ್ನು ಕೇಂದ್ರ ಸರ್ಕಾರ 2021, ಅ.31ರವರೆಗೆ ವಿಸ್ತರಿಸಿದೆ.
ಗುರುವಾರ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ‘ದೇಶದ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಎಲ್ಲಾ ದಾಖಲೆಗಳ ಅವಧಿಯನ್ನು ವಿಸ್ತರಿಸಲಾಗಿದೆ.
ಗಾಡಿ ಖರೀದಿಸಿದವರಿಗೆ ದಾಖಲೆ ಇಲ್ಲ, ಕೊಟ್ಟವರಿಗೆ ಹಣ ಬಂದಿಲ್ಲ! ಊರುಬಿಟ್ಟ ಮಧ್ಯವರ್ತಿ!
ಲಾಕ್‌ಡೌನ್ (Lockdown) ಕಾರಣದಿಂದ ಮಾನ್ಯತೆಯನ್ನು ನವೀಕರಿಸಲು ಸಾಧ್ಯವಾಗದಿದ್ದ ಕಾರಣ 2020ರ ಫೆ.1ರಿಂದ ಅವಧಿ ಕೊನೆಗೊಳ್ಳುವ ದಾಖಲೆಗಳನ್ನು 2021,ಅ.31ವರೆಗೆ ಮಾನ್ಯ ಎಂದು ಪರಿಗಣಿಸಲಾಗುವುದು’ ಎಂದು ತಿಳಿಸಿದೆ.
ಫೆಕ್ಸ್-ಇಂಧನ ಕಾರು ಉತ್ಪಾದನೆ
ದೇಶವನ್ನು ಪೆಟ್ರೋಲ್ (petrol) ಹಾಗೂ ಡೀಸೆಲ್ (Diesel) ಬಳಕೆಯಿಂದ ಮುಕ್ತ ಮಾಡಲು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕಾರು ಉತ್ಪಾದನಾ ಕಂಪನಿಗಳು ಫೆಕ್ಸ್-ಇಂಧನದ (Flex fuel engine) ಎಂಜಿನ್ ಉಳ್ಳ ವಾಹನ ಉತ್ಪಾದನೆ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಎಲ್ಲವೂ ಅಂದುಕೊಂಡತೆ ಆದರೆ ಇದು ದೇಶದಲ್ಲಿ ವಾಯುಮಾಲಿನ್ಯ ತಡೆಗಟ್ಟುವಲ್ಲಿ ಬಹುದೊಡ್ಡ ಉಪಕ್ರಮವಾಗಲಿದೆ.
ಮಿಡ್‌ಸೈಜ್ SUV ಆಸ್ಟರ್ ಪರಿಚಯಿಸಿದ ಎಂಜಿ ಹೆಕ್ಟರ್!
ಫ್ಲೆಕ್ಸ್ ಇಂಧನ ಅಥವಾ ಫ್ಲೆಕ್ಸಿಬಲ್ ಇಂಧನವೆಂದರೆ ಪೆಟ್ರೋಲ್ ಮತ್ತು ಎಥೆನಾಲ್ ಅಥವಾ ಮೆಥೆನಾಲ್ ಸೇರಿಸಿ ತಯಾರಿಸಿದ ಇಂಧನ.
ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!
‘ಇನ್ನು ಮೂರರಿಂದ ನಾಲ್ಕು ತಿಂಗಳಲ್ಲಿ ನಾನೊಂದು ಆದೇಶ ಹೊರಡಿಸುವವನಿದ್ದೇನೆ. ಈ ಬಗ್ಗೆ ಈಗಾಗಲೇ ನಿರ್ಧಾರವಾಗಿದೆ. ಆದೇಶದಲ್ಲಿ, ಬಿಎಂಡಬ್ಲ್ಯು (BMW), ಮರ್ಸಿಡಿಸ್‌ನಿಂದ ಹಿಡಿದು ಟಾಟಾ (TATA), ಮಹಿಂದ್ರಾವರೆಗೆ ದೇಶದಲ್ಲಿರುವ ಪ್ರತಿಯೊಂದು ಕಾರು ಉತ್ಪಾದಕ ಕಂಪನಿಯೂ ಫ್ಲೆಕ್ಸ್ ಎಂಜಿನ್ ಕಾರುಗಳನ್ನು ಉತ್ಪಾದನೆ ಮಾಡುವುದು ಕಡ್ಡಾಯವಾಗಲಿದೆ. ಬಜಾಜ್ ಹಾಗೂ ಟಿವಿಎಸ್ ಕಂಪನಿಗಳಿಗೆ ಈಗಾಗಲೇ ಅವರ ವಾಹನಗಳಲ್ಲಿ ಫ್ಲೆಕ್ಸ್ ಎಂಜಿನ್ ಅಳವಡಿಸಲು ಹೇಳಿದ್ದೇನೆ. ಅದನ್ನು ಮಾಡುವವರೆಗೂ ನನ್ನಲ್ಲಿಗೆ ಬರಬೇಡಿ ಎಂದೂ ಹೇಳಿದ್ದೇನೆ’ ಎಂದು ಗಡ್ಕರಿ ಹೇಳಿದರು.
‘ನನಗೊಂದು ಆಸೆಯಿದೆ. ನನ್ನ ಜೀವಮಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ ನಿಲ್ಲಬೇಕು. ಅದಕ್ಕೆ ಬದಲಿಯಾಗಿ ರೈತರು (Farmers) ತಮ್ಮ ಉತ್ಪನ್ನವಾದ ಎಥೆನಾಲ್ ನೀಡಬೇಕು. ಅದನ್ನು ಬಳಸಿ ವಾಹನಗಳು ಓಡಬೇಕು’ ಎಂದೂ ಅವರು ಶುಕ್ರವಾರ ಪುಣೆಯಲ್ಲಿ ಮೇಲ್ಸೇತುವೆಯೊಂದಕ್ಕೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.
ಟೋಯಿಂಗ್ ನಿಯಮಗಳು
ಪೊಲೀಸ್ರು ಅನುಸರಿಸಬೇಕಾದ ಟೋಯಿಂಗ್ ನಿಯಮಗಳು
* ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು
* ಓರ್ವ ಎಎಸ್‌ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು.
* ಟೋಯಿಂಗ್ ಆಪರೇಷನ್ಗೂ ಮುನ್ನ ಮೈಕ್ ಮೂಲಕ ಅನೌನ್ಸ್ ಮಾಡಬೇಕು.
* ವಾಹನದ ನಾಲ್ಕೂ ಭಾಗದಿಂದ ಫೋಟೋ ಕ್ಲಿಕ್ಕಿಸಬೇಕು.
* ಟೋಯಿಂಗ್ ಮಾಡುವ ಮುನ್ನವೇ ಮಾಲೀಕ ಬಂದ್ರೆ ನೋ ಪಾರ್ಕಿಂಗಿಗೆ ದಂಡ ವಿಧಿಸಬೇಕು.
* ಟೋಯಿಂಗ್ ವಾಹನಕ್ಕೆ ಹಾಕಿದ ಬಳಿಕ ಬಂದ್ರೆ ಟೋಯಿಂಗ್ ಚಾರ್ಜ್ ಪಾವತಿಸಬೇಕು.
*ಟೋಯಿಂಗ್ ಮಾಡಿದ ವಾಹನಗಳನ್ನ ನಿಲ್ಲಿಸುವ ಜಾಗದಲ್ಲಿ ಸಂಚಾರಿ ಸಿಬ್ಬಂದಿ ಇರಬೇಕು.