ಭಾರತೀಯ ಸಂಶೋಧಕರಿಂದ ಲಿಥಿಯಂ ಸಲ್ಫರ್ ಬ್ಯಾಟರಿ ಸಂಶೋಧನೆ; 1,600 ಕಿ.ಮೀ ಮೈಲೇಜ್!

By Suvarna News  |  First Published Aug 27, 2020, 6:41 PM IST

ಎಲೆಕ್ಟ್ರಿಕ್ ವಾಹಗಳು ಭಾರತದಲ್ಲಿ ಕೊಂಚ ದುಬಾರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಎಲೆಕ್ಟ್ರಿಕ್ ವಾಹನ ಬ್ಯಾಟರಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಸದ್ಯ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಎಲಕ್ಟ್ರಿಕ್ ವಾಹನದಲ್ಲಿ ಬಳಕೆ ಮಾಡಲಾಗುತ್ತಿದೆ. ಇದು ಸರಾಸರಿ 400 ಕಿ.ಮೀ ಮೈಲೇಜ್ ನೀಡಲಿದೆ. ಆದರೆ ಭಾರತೀಯ ವಿಶ್ವವಿದ್ಯಾಲಯದ ಫ್ರೋಫೆಸರ್ ತಂಡ ಹೊಸ ಎಲೆಕ್ಟ್ರಿಕ್ ವಾಹನ ಬ್ಯಾಟರಿ ಸಂಶೋಧನೆ ಮಾಡಿದ್ದಾರೆ. ಇದು ಸರಿಸುಮಾರು 1,600 ಕಿ.ಮೀ ಮೈಲೇಜ್ ನೀಡಲಿದೆ. 


ನವದೆಹಲಿ(ಆ.27): ಭಾರತ ಸೇರಿದಂತೆ ವಿಶ್ವದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು ನೀಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಅತ್ಯಂತ ಮುಖ್ಯ. ಅತ್ಯುತ್ತಮ ಬ್ಯಾಟರಿ ಮೂಲಕ ಗರಿಷ್ಟ ಮೈಲೇಜ್ ಪಡೆದುಕೊಳ್ಳಬಹುದು. ಲಿಥಿಯಂ-ಐಯಾನ್ ಬ್ಯಾಟರಿ ಮೂಲಕ ಒಂದು ಬಾರಿ ಚಾರ್ಜ್ ಮಾಡಿದರೆ ಸರಾಸರಿ 400 ಕಿ.ಮಿ ಮೈಲೇಜ್ ಪಡೆಯಬಹುದು. ಆದರೆ ಶಿವ್ ನಾಡರ್ ವಿಶ್ವವಿದ್ಯಾಲಯ ಹಾಗೂ ಎಮಿನೆನ್ಸ್ ಶಿಕ್ಷಣ ಸಂಸ್ಥೆ ಜಂಟಿಯಾಗಿ ಲಿಥಿಯಂ ಸಲ್ಫರ್ ಬ್ಯಾಟರಿ ಸಂಶೋಧನೆ ಮಾಡಿದೆ.

ಒಂದು ಚಾರ್ಜ್‌ಗೆ 1,026 ಕಿ.ಮೀ ಮೈಲೇಜ್: ದಾಖಲೆ ಬರೆದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು!

Latest Videos

undefined

ಕೆಮೆಸ್ಟ್ರಿ ಫ್ರೋಫೆಸರ್ ಡಾ. ಬಿಮಲೇಶ್ ಲೋಕಬ್ ಸತತ 5 ವರ್ಷಗಳಿಂದ ಬ್ಯಾಟರಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಇದೀಗ ಭರ್ಜರಿ ಯಶಸ್ಸು ಸಿಕ್ಕಿದೆ. ಪರಿಸರಕ್ಕೆ ಪೂರಕವಾದ, ಕಡಿಮೆ ಬೆಲೆಯಲ್ಲಿ ಉತ್ಪಾದನೆ ಮಾಡಬಹುದಾದ ಬ್ಯಾಟರಿ ಸಂಶೋಧನೆ ಮಾಡಿದ್ದಾರೆ. ಇವರ ಸಂಶೋಧನೆ ಇದೀಗ ಭಾರತದಲ್ಲಿನ ಎಲೆಕ್ಟ್ರಿಕ್ ವಾಹನದಲ್ಲಿ ಮಹತ್ತರ ಬದಲಾವಣೆ ತರುವ ಸಾಧ್ಯತೆ ಇದೆ.

1,600 ಕಿ.ಮೀ ಮೈಲೇಜ್; XP-1 ಹೈಡ್ರೋಜನ್ ಎಲೆಕ್ಟ್ರಿಕ್ ಸೂಪರ್ ಕಾರು ಅನಾವರಣ!

ಲಿಥಿಯಂ ಸಲ್ಫರ್ ಬ್ಯಾಟರಿಯ ಪ್ರಮುಖ ಆಕರ್ಷಣೆ ಇದು ನೀಡುವ ಮೈಲೇಜ್ ರೇಂಜ್. ಸಂಪೂರ್ಣ ಚಾರ್ಜ್ ಮಾಡಿದರೆ ಈ ಬ್ಯಾಟರಿ ಬರೋಬ್ಬರಿ 1,600 ಕಿ.ಮೀ ಮೈಲೇಜ್ ನೀಡಲಿದೆ. ಸದ್ಯ ಲಭ್ಯವಿರುವು ಲಿಥಿಯಂ -ಐಯಾನ್ ಬ್ಯಾಟರಿ ಕಾರುಗಳು ನೀಡುವ ಮೈಲೇಜ್ ಗರಿಷ್ಠ ಮೈಲೇಜ್ 450 ರಿಂದ 500. 

ಈ ನೂತನ ಲಿಥಿಯಂ ಸಲ್ಫರ್ ಬ್ಯಾಟರಿ ಬಳಸಿದರೆ ಒಂದುು ಬಾರಿ ಚಾರ್ಜ್ ಮಾಡಿ ಬೆಂಗಳೂರಿನಿಂದ ಮುಂಬೈ ಹಾಗೂ ಮುಂಬೈನಿಂದ ಬೆಂಗಳೂರಿಗೆ  ಪ್ರಯಾಣಿಸಬುಹುದು. ಸದ್ಯ ಬ್ಯಾಟರಿ ಸಂಶೋಧನೆ ಮುಂದುವರಿಸಲಾಗಿದ್ದು, ಮತ್ತಷ್ಟು ಶಕ್ತಿ ಶಾಲಿ ಹೆಚ್ಚು ಮೈಲೇಜ್ ನೀಡಬಲ್ಲ ಬ್ಯಾಟರಿ ಆವಿಷ್ಕರಿಸಲು ನಿರ್ಧರಿಸಲಾಗಿದೆ. 

click me!