ಹೊಂಡಾ ಹೊಚ್ಚ ಹೊಸ ಹಾರ್ನೆಟ್ 2.0 ಬೈಕ್ ಬಿಡುಗಡೆ ಮಾಡಿದೆ. ಹೆಚ್ಚುವರಿ ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕಡಿಮೆ ಬೆಲೆಯಲ್ಲಿ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಆ.27): ಹೊಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಹೊಚ್ಚ ಹೊಸ ಹಾರ್ನೆಟ್ 2.0 ಬೈಕ್ ಬಿಡುಗೆಡೆ ಮಾಡಿದೆ. 184cc, ಸಿಂಗಲ್ ಸಿಲಿಂಡರ್, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 17.03 bhp ಪವರ್ ಹಾಗೂ 16.1NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ.
TVS ಅಪಾಚೆ ಪ್ರತಿಸ್ಪರ್ಧಿ, ಹೊಂಡಾ X-Blade ಬೈಕ್ ಬಿಡುಗಡೆ!
ಹಾರ್ನೆಟ್ 2.0 ಬೈಕ್ ಬುಕಿಂಗ್ ಕೂಡ ಆರಂಭಗೊಂಡಿದೆ. ಸೆಪ್ಟೆಂಬರ್‌ನಲ್ಲಿ ಬೈಕ್ ಗ್ರಾಹಕರ ಕೈ ಸೇರಲಿದೆ. ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹಾಗೂ ಇಕೋ ಟೆಕ್ನಾಲಜಿ ಹೊಂದಿರುವ ನೂತನ ಬೈಕ್ ಗ್ರಾಹಕರ ಆಕರ್ಷಿಸಲಿದೆ ಅನ್ನೋದು ಹೊಂಡಾ ವ್ಯವಸ್ಥಾಪಕ ನಿರ್ದೇಶ ಹಾಗೂ ಸಿಇಒ ಅತ್ಸುಶಿ ಒಗಾಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ
ಪೆಟಲ್ ಡಿಸ್ಕ್, ಸಿಂಗಲ್ ಚಾನೆಲ್ ABS, LCD ಇನ್ಸ್ಟ್ರಮೆಂಟಲ್ ಕನ್ಸೋಲ್, LED ಲೈಟಿಂಗ್, LED ಟೈಲ್ ಲೈಟ್ ಹಾಗೂ LED ಟರ್ನ್ ಇಂಡಿಕೇಟರ್ ಹೊಂದಿದೆ. 3 ವರ್ಷ ಸ್ಟಾಂಡರ್ಡ್ ವಾರೆಂಟ್ ಹಾಗೂ 3 ವರ್ಷ ವಿಸ್ತರಿಸಿದ ವಾರೆಂಟಿ ಸೇರಿದಂತೆ ಒಟ್ಟು 6 ವರ್ಷಗಳ ವಾರೆಂಟಿ ಸಿಗಲಿದೆ.
ಹೊಂಡಾ ಹಾರ್ನೆಟ್ ಬೈಕ್ ಬೆಲೆ 1.26 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಹೊಂಡಾ ಹಾರ್ನೆಟ್ 2.0 ಬೈಕ್, ಟಿವಿಎಸ್ ಅಪಾಚೆ RTR 200 ಹಾಗೂ ಬಜಾಜ್ NS 200 ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.