ಮಾರುತಿ ಬ್ರಿಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಹೀಂದ್ರ ಸಂಸ್ಥೆ ಹೊಸ ಕಾರನ್ನ ಬಿಡುಗಡೆ ಮಾಡುತ್ತಿದೆ. ಬ್ರಿಜಾ ಸೇರಿದಂತೆ ಇತರ SUV ಕಾರುಗಳಿಂಕ ಕಡಿಮೆ ಬೆಲೆ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಈ ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಕುರಿತ ವಿವರ ಇಲ್ಲಿದೆ.
ಬೆಂಗಳೂರು(ನ.10): ಭಾರತದ SUV ಕಾರು ಮಾರುಕಟ್ಟೆಯಲ್ಲಿ ಮೋಡಿ ಮಾಡಿದ ಮಾರುತಿ ವಿಟಾರ ಬ್ರಿಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಹೀಂದ್ರ ಸಂಸ್ಥೆ ನೂತನ ಮಹೀಂದ್ರ s201 ಕಾರನ್ನ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಮಾರುತಿ ಬ್ರಿಜಾ ಕಾರಿನ ಸೆಡ್ಡು ಹೊಡೆಯಲು ಸಜ್ಜಾಗಿದೆ.
ಸಬ್ 4 ಮೀಟರ್ SUV ಕಾರು ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಇದರ ಬೆಲೆ 6 ರಿಂದ 12 ಲಕ್ಷ ರೂಪಾಯಿ ಒಳಗಿರಲಿದೆ. 2016ರ ಆಟೋ ಎಕ್ಸ್ಪೋದಲ್ಲಿ ಈ ಕಾರನ್ನ ಪ್ರದರ್ಶಿಸಲಾಗಿತ್ತು. 1.5 ಲೀಟರ್ ಡೀಸೆಲ್, 122ps, 300nm ಟಾರ್ಕ್ ಉತ್ಪಾದಿಸಬಲ್ಲ ಎಂಜಿನ್ ಹೊಂದಿದೆ.
undefined
ಡೀಸೆಲ್ ಮಾತ್ರವಲ್ಲ ಪೆಟ್ರೋಲ್ ಎಂಜಿನ್ ಕಾರು ಕೂಡ ಲಭ್ಯವಿದೆ. 1.2 ಲೀಟರ್, 3 ಸಿಲಿಂಡರ್ ಎಂಜಿನ್ ಪವರ್ ಹೊಂದಿರಲಿದೆ. ರೇರ್ ಡಿಸ್ಕ್ ಕೂಡ ಇದರ ವಿಶೇಷತೆ. ಡ್ಯುಯೆಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಸನ್ ರೂಫ್ ಸೇರಿದಂತೆ ಹೆಚ್ಚುವರಿ ಫೀಚರ್ಸ್‌ಗಳು ಇರಲಿವೆ.
ಮಾರುತಿ ಬ್ರಿಜಾ, ಫೋರ್ಟ್ ಇಕೋ ಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ ನೂತನ ಕಾರನ್ನ ಬಿಡುಗಡೆ ಮಾಡುತ್ತಿದೆ. ಇಷ್ಟೇ ಅಲ್ಲ ಇತರ ಎಲ್ಲಾ SUV ಕಾರಿಗಿಂತ ಕಡಿಮೆ ಬೆಲೆಯಲ್ಲಿ ಕಾರು ಲಭ್ಯವಿದೆ. 2019ರ ಆರಂಭದಲ್ಲೇ ನೂತನ ಮಹೀಂದ್ರ s201 ಕಾರು ಬಿಡುಗಡೆಯಾಗಲಿದೆ.