ಟಿವಿಎಸ್ ಮೋಟಾರ್ ಕಂಪನಿ ನೂತನ BS6 ಎಂಜಿನ್ XL100 ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ದೇಶದಲ್ಲಿರುವ ಅತ್ಯಂತ ಕಡಿಮೆ ಬೆಲ ದ್ವಿಚಕ್ರ ವಾಹನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ XL100 ಅಪ್‌ಡೇಟೆಡ್ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿರುವ ನೂತನ ಮೊಪೆಡ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಚೆನ್ನೈ(ಮಾ.21): ನೂತನ ಎಮಿಶನ್ ನಿಯಮದಂತೆ ಟಿವಿಎಸ್ ಮೋಟಾರ್ XL100 ದ್ವಿಚಕ್ರ ವಾಹನ ಮಾರುಕಟ್ಟೆ ಪ್ರವೇಶಿಸಿದೆ. ಸಾಮಾನ್ಯ ಜನರಿಗೆ ಕೈಗೆಟುಕ ದರದ ಈ ವಾಹನ ಭಾರತದಲ್ಲಿ ಅತ್ಯಂತ ಜನಪ್ರಿಯ ವಾಹನವಾಗಿದೆ. ರೈತರು, ಕಾರ್ಮಿಕರು, ಉದ್ಯೋಗಿಗಳು, ಮಹಿಳೆಯರು ಸೇರಿದಂತ ಬಹುತೇಕರು ಈ ವಾಹನ ಉಪಯೋಗಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ TVS ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಗಡ್ಕರಿ!
ಟಿವಿಎಸ್ XL100 ದ್ವಿಚಕ್ರ ವಾಹನ ಭಾರತದ ಅತ್ಯಂತ ಕಡಿಮೆ ಬೆಲೆ ವಾಹನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. BS6 ಎಂಜಿನ್ XL100 ದ್ವಿಚಕ್ರ ವಾಹನ ಬೆಲೆ 43,890 ರೂಪಾಯಿಂದ ಆರಂಭವಾಗುತ್ತಿದ್ದು, ಗರಿಷ್ಠ ಬೆಲೆ 45,450 ರೂಪಾಯಿ(ಎಕ್ಸ್ ಶೋರೂಂ). ಸದ್ಯ ಮಾರುಕಟ್ಟೆಯಲ್ಲಿರುವ BS4 XL100 ದ್ವಿಚಕ್ರ ವಾಹನ ಬೆಲೆಗಿಂತ 3,850 ರೂಪಾಯಿ ದುಬಾರಿಯಾಗಿದೆ.
ಆಧುನಿಕ ತಂತ್ರಜ್ಞಾನದೊಂದಿಗೆ TVS ಅಪಾಚೆ ಬೈಕ್ ಬಿಡುಗಡೆ!
BS6 ಎಂಜಿನ್ XL100 ದ್ವಿಚಕ್ರ ವಾಹನ 99.7cc ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 4.4 bhp ಪವರ್ ಹಾಗೂ 6.5Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. ಈ ದ್ವಿಚಕ್ರವಾಹನ ಗರಿಷ್ಠ ಲೋಡ್ ಹೊತ್ತೊಯ್ಯಬಲ್ಲ ಸಾಮಾರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ ಹಳ್ಳಿ ಹಳ್ಳಿಗಳಲ್ಲಿ ಈ ದ್ವಿಚಕ್ರ ವಾಹನ ಹೆಚ್ಚು ಬಳಕೆಯಾಗುತ್ತಿದೆ.