ಬಜಾಜ್ ಆಟೋ ಲಿಮಿಟೆಡ್ ತನ್ನ ಬಿಎಸ್6 ಶ್ರೇಣಿಯ RE ಮ್ಯಾಕ್ಸಿಮಾ ಮತ್ತು ಮ್ಯಾಕ್ಸಿಮಾ ಕಾರ್ಗೋ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡಿದೆ.
ಬೆಂಗಳೂರು(ಮಾ.16): ಬಜಾಜ್ ಆಟೋ ತನ್ನ RE, ಮ್ಯಾಕ್ಸಿಮಾ ಮತ್ತು ಮ್ಯಾಕ್ಸಿಮಾ ಬ್ರ್ಯಾಂಡ್‍ಗಳ ಬಿಎಸ್ 6 ವಿಭಾಗದ 14 ಬಗೆಯ ವಾಣಿಜ್ಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಬಿಎಸ್6 ತಂತ್ರಜ್ಞಾನದಲ್ಲಿ ಅತಿ ಹೆಚ್ಚು ಶ್ರೇಣಿಗಳಲ್ಲಿ ಲಭ್ಯವಿರುವ ತ್ರಿಚಕ್ರ ವಾಹನಗಳು ಇವಾಗಿವೆ. ಬಜಾಜ್ ಆಟೋ ತನ್ನ ಬದ್ಧತೆಯ ವಿಶ್ವಾಸಾರ್ಹತೆ ಮತ್ತು ಮೌಲ್ಯವನ್ನು ಉಳಿಸಿಕೊಂಡು ಬಿಎಸ್ 6 ಶ್ರೇಣಿಯ ವಾಹನಗಳನ್ನು ತಯಾರು ಮಾಡಿದೆ.
ಬಿಡುಗಡೆಯಾಯ್ತು ಆಕರ್ಷಕ, ಆರಾಮದಾಯಕ ಬಜಾಜ್ ಡೊಮಿನಾರ್ 250 ಬೈಕ್!
RE ಬ್ರ್ಯಾಂಡ್ ಇದೀಗ ಫ್ಯುಯೆಲ್ ಇಂಜೆಕ್ಷನ್ (ಎಫ್‍ಐ) ತಂತ್ರಜ್ಞಾನದೊಂದಿಗೆ 236 ಸಿಸಿ ಇಂಜಿನ್ ಅನ್ನು ಹೊಂದಿದೆ. ಮೂರು ಫ್ಯುಯೆಲ್ ಆಯ್ಕೆಗಳಾದ ಸಿಎನ್‍ಜಿ, ಎಲ್‍ಪಿಜಿ ಮತ್ತು ಪೆಟ್ರೋಲ್‍ನಲ್ಲಿ ಲಭ್ಯವಿವೆ. ಈ ಶ್ರೇಣಿಯ ವಾಹನಗಳು ಸುಧಾರಿತ ಪವರ್ ಮತ್ತು ಪಿಕಪ್ ಅನ್ನು ಹೊಂದಿದ್ದು, ಬಿಎಸ್6 ಮಾಲಿನ್ಯ ಮಾರ್ಗಸೂಚಿಗಳನ್ನು ಹೊಂದಿವೆ. ಮ್ಯಾಕ್ಸಿಮಾ ಬ್ರ್ಯಾಂಡ್‍ನಲ್ಲಿ ಇದೇ ಇಂಜಿನ್ ಇದ್ದು, ಬಿಎಸ್6 ಮಾಲಿನ್ಯ ಮಾರ್ಗಸೂಚಿಯನ್ನು ರೀ-ಕಾನ್‍ಫಿಗರ್ ಮಾಡಲಾಗಿದೆ. ಇದಲ್ಲದೇ, ಸ್ಥಿರವಾದ ಪವರ್ ಮತ್ತು ಪಿಕಪ್ ಅನ್ನು ಒಳಗೊಂಡಿದೆ. ಖಇ ಮತ್ತು ಮ್ಯಾಕ್ಸಿಮಾ ಬ್ರ್ಯಾಂಡ್‍ನ ಡೀಸೆಲ್ ಶ್ರೇಣಿಯ ವಾಹನಗಳು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ. ಇಜಿಆರ್ & 470 ಸಿಸಿ ಡೀಸೆಲ್ ಇಂಜಿನ್ ಅನ್ನು ಹೊಂದಿದೆ. ಈ ಎಲ್ಲಾ ಶ್ರೇಣಿಯ ವಾಹನಗಳಿಗೆ 3 ಪೂರ್ಣ ಪ್ರಮಾಣದ ಫ್ರೀ ಸರ್ವೀಸ್ ಇರಲಿದೆ. ಇದರಲ್ಲಿ ಲೇಬರ್, ಫಿಲ್ಟರ್ & ಆಯಿಲ್ ಚೇಂಜ್ ಇರಲಿದೆ. ಬಜಾಜ್ ಆಟೋ ಒಟ್ಟಾರೆ 3 ವ್ಹೀಲರ್ ವಿಭಾಗದಲ್ಲಿ 2019-20 ನೇ ಸಾಲಿನಲ್ಲಿ ಶೇ.58 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.
ಬಜಾಜ್ ಆಟೋ ಲಿಮಿಟೆಡ್- ಇಂಟ್ರಾಸಿಟಿ ಬಿಸಿನೆಸ್ ಯುನಿಟ್ ಜಂಟಿ ಅಧ್ಯಕ್ಷ ಸಮರ್‍ದೀಪ್ ಸುಬಂಧ್ ಅವರು ಮಾತನಾಡಿ, ``ಬಜಾಜ್ ಆಟೋ ತ್ರಿಚಕ್ರ ವಾಣಿಜ್ಯ ವಾಹನಗಳ ಕ್ಷೇತ್ರದಲ್ಲಿ ಖಇ ಪ್ಯಾಸೆಂಜರ್, ಮ್ಯಾಕ್ಸಿಮಾ ಪ್ಯಾಸೆಂಜರ್ ಮತ್ತು ಮ್ಯಾಕ್ಸಿಮಾ ಕಾರ್ಗೋದ ವಿಸ್ತಾರವಾದ ಶ್ರೇಣಿಯನ್ನು ಒಳಗೊಂಡಿದೆ. ಈ ಹೊಸ ಮಾದರಿಯ ವಾಹನಗಳು ಬಿಎಸ್6 ಮಾಲಿನ್ಯ ಮಾರ್ಗಸೂಚಿಗಳನ್ನು ಒಳಗೊಂಡಿವೆ. ನಮ್ಮ ವಿಶ್ವದರ್ಜೆಯ ಆರ್&ಡಿ ತಂಡವು ಬಿಎಸ್6 ಮಾರ್ಗಸೂಚಿಗಳನ್ವಯ ಗ್ರಾಹಕರಿಗೆ ಅತ್ಯುತ್ತಮವಾದ ರೀತಿಯಲ್ಲಿ ಅವರ ಹಣಕ್ಕೆ ತಕ್ಕಂತಹ ಮೌಲ್ಯವನ್ನು ನೀಡುವ ರೀತಿಯಲ್ಲಿ ವಾಹನಗಳನ್ನು ಅಭಿವೃದ್ಧಿಪಡಿಸಿzನೆ ನಮ್ಮ ಖಇ ಮತ್ತು ಮ್ಯಾಕ್ಸಿಮಾ ಶ್ರೇಣಿಯ ಹೊಸ ಬಿಎಸ್6 ಉತ್ಪನ್ನಗಳು ಮಾರುಕಟ್ಟೆಯಲ್ಲಿ ನಮ್ಮ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ ಎಂಬ ವಿಶ್ವಾಸ ನಮಗಿದೆ’’ ಎಂದು ತಿಳಿಸಿದರು.