ಕೊರೋನಾ ವೈರಸ್ ಎಲ್ಲಾ ಉದ್ಯಮಗಳಿಗೆ ತೀವ್ರ ಹೊಡೆತ ನೀಡಿದೆ. 2018ರಲ್ಲಿ ಆರ್ಥಿಕತ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ ನಷ್ಟ ಅನುಭವಿಸಿದ್ದ ಆಟೋಮೊಬೈಲ್ ಕಂಪನಿಗಳಿಗೆ ಇದೀಗ ಕೊರೋನಾ ವೈರಸ್ ಇನ್ನಿಲ್ಲದಂತೆ ಕಾಡುತ್ತಿದೆ. ಇದರ ನಡುವೆ ಸುಪ್ರೀಂ ಕೋರ್ಟ್ BS6 ಎಂಜಿನ್ ಗಡುವು ಸಮೀಪಿಸುತ್ತಿದೆ. ಹೀಗಾಗಿ ಹ್ಯುಂಡೈ ಕಾರುಗಳ ಮೇಲೆ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.
ನವದೆಹಲಿ(ಮಾ.21); ಕೊರೋನಾ ವೈರಸ್‌ನಿಂದಾಗ ಎಲ್ಲಾ ವ್ಯವಹಾರಗಳು ಬಂದ್ ಆಗಿವೆ. ಅತೀ ಹೆಚ್ಚು ಹೊಡೆತ ಬಿದ್ದಿರುವುದು ಆಟೋಮೊಬೈಲ್ ಇಂಡಸ್ಟ್ರಿಗೆ. ಚೀನಾದಲ್ಲಿ ಕೊರೋನಾ ವೈರಸ್ ಹರಡಲು ಆರಂಭವಾದಗಲೇ ಆಟೋಮೊಬೈಲ್ ಕಂಪನಿಗಳು ನಷ್ಟ ಅನುಭವಿಸತೊಡಗಿತು. ಇದರ ಬೆನ್ನಲ್ಲೇ BS6 ಎಂಜಿನ್ ಕಡ್ಡಾಯ ಮಾಡಿರುವುದರಿಂದ ಆಟೋಮೊಬೈಲ್ ಕಂಪನಿಗಳು ಸ್ಟಾಕ್ ಕ್ಲೀಯರೆನ್ಸ್‌ಗೆ ಭರ್ಜರಿ ಡಿಸ್ಕೌಂಟ್ ನೀಡಿದೆ
25 ಸಾವಿರಕ್ಕೆ ಬುಕ್ ಮಾಡಿ ಹ್ಯುಂಡೈ ಕ್ರೆಟಾ ಕಾರು!
undefined
ಎಪ್ರಿಲ್ 1, 2020ರಿಂದ ಮಾರಾಟವಾಗುವ ಎಲ್ಲಾ ನೂತನ ವಾಹನಗಳು BS6 ಎಮಿಶನ್ ಎಂಜಿನ್ ಹೊಂದಿರಬೇಕು. ಸದ್ಯ ಭಾರತದಲ್ಲಿ BS4 ಎಂಜಿನ್ ನಿಯಮ ಚಾಲ್ತಿಯಲ್ಲಿದೆ. ಬಹುತೇಕ ಎಲ್ಲಾ ವಾಹನಗಳು BS6 ಎಂಜಿನ್ ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಿದೆ. ಸದ್ಯ ಸ್ಟಾಕ್ ಇರುವ ವಾಹನಗಳ ಕ್ಲೀಯರೆನ್ಸ್‌ಗಾಗಿ ಹ್ಯುಂಡೈ ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ.
ಹೊಸ ಸ್ಟೈಲ್, ಹೆಚ್ಚು ಫೀಚರ್ಸ್, ನೂತನ ಹ್ಯುಂಡೈ i20 ಕಾರು ಬಿಡುಗಡೆಗೆ ರೆಡಿ!.
ಹ್ಯುಂಡೈ ವಾಹನಗಳ ಡಿಸ್ಕೌಂಟ್ ವಿವರ ಇಲ್ಲಿದೆ(BS4 ಎಂಜಿನ್)
ಹ್ಯುಂಡೈ ಸ್ಯಾಂಟ್ರೋ BS4 ಪೆಟ್ರೋಲ್ ಕಾರಿಗೆ 55,000 ರೂಪಾಯಿ ಡಿಸ್ಕೌಂಟ್
ಹ್ಯುಂಡೈ ಗ್ರ್ಯಾಂಡ್ i10 ಹಾಗೂ ಗ್ರ್ಯಾಂಡ್ i10 ನಿಯೋಸ್ ಪೆಟ್ರೋಲ್ ಕಾರಿಗೆ 75,000 ರೂಪಾಯಿ
ಹ್ಯುಂಡೈ ಎಕ್ಸೆಂಟ್ ಡೀಸೆಲ್ ಕಾರಿಗೆ 95,000 ರೂಪಾಯಿ ಡಿಸ್ಕೌಂಟ್
ವರ್ನಾ,ಕ್ರೆಟಾ, ಪೆಟ್ರೋಲ್,ಡೀಸೆಲ್ ಕಾರಿಗೆ 95,000 ದಿಂದ 1.15 ಲಕ್ಷ ರೂ
ಟಕ್ಸನ್ ಹಾಗೂ ಎಲಾಂಟ್ರ ಕಾರಿಗೆ ಗರಿಷ್ಠ 2.5 ಲಕ್ಷ ರೂಪಾಯಿ ಡಿಸ್ಕೌಂಟ್
ಡಿಸ್ಕೌಂಟ್ ಆಫರ್ ರಾಜ್ಯದಿಂದ ರಾಜ್ಯಕ್ಕೆ ಹಾಗೂ ನಗರಗಳಲ್ಲಿ ವ್ಯತ್ಯಾಸವಾಗಲಿದೆ. ಡಿಸ್ಕೌಂಟ್ ಮಾಹಿತಿಗಾಗಿ ಸಮೀಪದ ಡೀಲರ್ ಬಳಿ ವಿಚಾರಿಸಿ.