ಹೊಸ ಅವತಾರದಲ್ಲಿ TVS Nಟಾರ್ಕ್ 125 ಬೈಕ್ ಬಿಡುಗಡೆ!

Published : May 07, 2019, 05:19 PM IST
ಹೊಸ ಅವತಾರದಲ್ಲಿ TVS Nಟಾರ್ಕ್ 125 ಬೈಕ್ ಬಿಡುಗಡೆ!

ಸಾರಾಂಶ

 TVS Nಟಾರ್ಕ್ 125 ಸ್ಕೂಟರ್ ಇದೀಗ ಡ್ರಮ್ ಬ್ರೇಕ್ ವೇರಿಯೆಂಟ್‌‌ನಲ್ಲೂ ಲಭ್ಯವಿದೆ. ನೂತನ ಸ್ಕೂಟರ್ ಬೆಲೆ ಡಿಸ್ಕ್ ವೇರಿಯೆಂಟ್‌ಗಿಂತ 1648 ರೂಪಾಯಿ ಕಡಿಮೆ. ಈ  ಸ್ಕೂಟರ್ ವಿಶೇಷತೆ ಏನು? ಇಲ್ಲಿದೆ.

ಚೆನ್ನೈ(ಮೇ.07): TVS ಕಂಪನಿಯ Nಟಾರ್ಕ್ ಸ್ಕೂಟರ್ ದಾಖಲೆಯ ಮಾರಾಟ ಕಾಣುತ್ತಿದೆ. ಎಂಟ್ರಿ ಲೆವನ್ TVS Nಟಾರ್ಕ್ 125 ಸ್ಕೂಟರ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ನೂತನ ಬೈಕ್ ಡ್ರಮ್ ಬ್ರೇಕ್ ವೇರಿಯೆಂಟ್ ಬಿಡುಗಡೆ ಮಾಡಿದೆ. ಇದು ಫ್ರಂಟ್ ಡಿಸ್ಕ್ ಬ್ರೇಕ್ ಸ್ಕೂಟರ್‌ಗಿಂತ 1648 ರೂಪಾಯಿ ಕಡಿಮೆಯಾಗಿದೆ.

ಇದನ್ನೂ ಓದಿ:ಹೊಸ ಮೈಲಿಗಲ್ಲು ಸ್ಥಾಪಿಸಿದ ಹೊಂಡಾ ಡಿಯೋ ಸ್ಕೂಟರ್!

TVS Nಟಾರ್ಕ್ ಬೇಸ್ ವೇರಿಯೆಂಟ್‌ನಲ್ಲಿ ಫ್ರಂಟ್ ಹಾಗೂ ರೇರ್ 130mm ಡ್ರಂ ಬ್ರೇಕ್ ಹೊಂದಿದೆ. ಇನ್ನು ಇತರ ವೇರಿಯೆಂಟ್‌ಗಳಲ್ಲಿ 220mm ಡಿಸ್ಕ್ ಬ್ರೇಕ್ ಲಭ್ಯವಿದೆ. TVS Nಟಾರ್ಕ್  125 ಬೈಕ್  124.8 cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9.27 bhp ಪವರ್ ಹಾಗೂ 10.5 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ:ಬಜಾಜ್‌ನಿಂದ ಹೊಸ ಆಫರ್- ಡೊಮಿನಾರ್ 400 ಬೈಕ್ ಬೆಲೆ ಕಡಿತ!

TVS Nಟಾರ್ಕ್ 125 ಸ್ಕೂಟರ್ ಬೆಲೆ 58,252 ರೂಪಾಯಿ(ಎಕ್ಸ್ ಶೋ ರೂಂ).  TVS Nಟಾರ್ಕ್ 125 ಸ್ಕೂಟರ್, ಹೊಂಡಾ ಗ್ರೆಝಿಯಾ, ಎಪ್ರಿಲಿಯಾ SR 125 ಹಾಗೂ ಸುಜುಕಿ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಪ್ರತಿಸ್ಪರ್ಧಿಯಾಗಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ