ಎಪ್ರಿಲ್ ತಿಂಗಳಲ್ಲಿ SUV ಕಾರು ಮಾರಾಟದ ವಿವರ ಬಹಿರಂಗವಾಗಿದೆ. ಜನರು ನೆಚ್ಚಿನ ಕಾರು ಯಾವುದು? ಯಾವ ಕಾರು ಯಾವ ಸ್ಥಾನದಲ್ಲಿದೆ. ಇಲ್ಲಿದೆ ಸಂಪೂರ್ಣ ವಿವರ.
ನವದೆಹಲಿ(ಮೇ.06): ಭಾರತದಲ್ಲೀಗ SUV ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪ್ರತಿ ಕಾರು ಕಂಪನಿಗಳು ಸಬ್ ಕಾಂಪಾಕ್ಟ್ ಸೇರಿದಂತೆ ಹಲವು SUV ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಸಬ್‌ಕಾಂಪಾಕ್ಟ್ SUV ಕಾರುಗಳ ಪೈಕಿ ಮಾರುತಿ ಬ್ರೆಜಾ ಕಾರು ದಾಖಲೆಯ ಮಾರಾಟ ಕಾಣುತ್ತಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಹಲವು ಕಾರುಗಳು ಮಾರುಕಟ್ಟೆಯಲ್ಲಿದೆ.
ಇದನ್ನೂ ಓದಿ: ದುಬಾರಿ ಸುಜುಕಿ ಸ್ವಿಫ್ಟ್ ಕಾರು ಬಿಡುಗಡೆ-ಬೆಲೆ ಎಷ್ಟು?
ಎಪ್ರಿಲ್ ತಿಂಗಳಲ್ಲಿ ಮಾರಾಟಾದ SUV ಕಾರುಗಳ ಲಿಸ್ಟ್ ಬಿಡುಗಡೆಯಾಗಿದೆ. ಮಾರ್ಚ್ ತಿಂಗಳಲ್ಲಿ 2ನೇ ಸ್ಥಾನದಲ್ಲಿದ್ದ ಟಾಟಾ ನೆಕ್ಸಾನ್ ಕಾರು ಎಪ್ರಿಲ್ ತಿಂಗಳಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಇದೀಗ ನೆಕ್ಸಾನ್ ಸ್ಥಾನವನ್ನು ಮಹೀಂದ್ರ XUV300 ಆಕ್ರಮಿಸಿಕೊಂಡಿದೆ.
ಎಪ್ರಿಲ್‌ನಲ್ಲಿ ಮಾರಾಟವಾಗಿ ಟಾಪ್ 5 XUV ಕಾರು:
ಕಾರು | ಎಪ್ರಿಲ್ 2019 |
ಮಾರುತಿ ಬ್ರೆಜಾ | 11,785 |
ಮಹೀಂದ್ರXUV300 | 4,200 |
ಟಾಟಾ ನೆಕ್ಸಾನ್ | 3,976 |
ಫೋರ್ಡ್ ಇಕೋಸ್ಪೋರ್ಟ್ | 3,191 |
ಹೊಂಡಾ WRV | 1,604 |