ದುಬಾರಿ ಸುಜುಕಿ ಸ್ವಿಫ್ಟ್ ಕಾರು ಬಿಡುಗಡೆ-ಬೆಲೆ ಎಷ್ಟು?

By Web Desk  |  First Published May 6, 2019, 6:30 PM IST

ಕಡಿಮೆ ಬೆಲೆ, ಗರಿಷ್ಠ ಮೇಲೇಜ್ ಕಾರಣಕ್ಕೆ ಸುಜುಕಿ ಸ್ವಿಪ್ಟ್ ದಾಖಲೆಯ ಮಾರಾಟ ಕಂಡಿದೆ. ಇದೀಗ ಸುಜುಕಿ ಸ್ವಿಫ್ಟ್ ದುಬಾರಿ ಕಾರು ಬಿಡುಗಡೆ ಮಾಡಿದೆ. ಈ ಸ್ಪೆಷಲ್ ಎಡಿಸನ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 


ನೆದರ್ಲೆಂಡ್(ಮೇ.06): ಭಾರತದಲ್ಲಿ ದಾಖಲೆಯ ಮಾರಾಟವಾಗಿರುವ ಹ್ಯಾಚ್‌ಬ್ಯಾಕ್ ಮಾರುತಿ ಸ್ವಿಫ್ಟ್ ಬೆಲೆ 4.99 ಲಕ್ಷ ರೂಪಾಯಿಂದ 8.86 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕಡಿಮೆ ಬೆಲೆ, ಅತ್ಯುತ್ತಮ ವಿನ್ಯಾಸ,  ಗರಿಷ್ಠ ಮೈಲೇಜ್‌ ಹೊಂದಿರುವ ಸ್ವಿಫ್ಟ್ ಕಾರು ವರ್ಷದ ಕಾರು ಪ್ರಶಸ್ಸಿ ಕೂಡ ಪಡೆದುಕೊಂಡಿದೆ. ಇದೀಗ ಅತ್ಯಂತ ದುಬಾರಿ ಬೆಲೆಯ ಸುಜುಕಿ ಸ್ವಿಫ್ಟ್ ಕಾರು ಬಿಡುಗಡೆಯಾಗಿದೆ.

Tap to resize

Latest Videos

ಇದನ್ನೂ ಓದಿ: ಇನೋವಾಗೆ ಪೈಪೋಟಿ- ಬಿಡುಗಡೆಯಾಗುತ್ತಿದೆ 7 ಸೀಟರ್ ಮಾರುತಿ ವ್ಯಾಗನ್ಆರ್!

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಟಾನ ಎಡಿಶನ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ ಬರೋಬ್ಬರಿ 23 ಲಕ್ಷ ರೂಪಾಯಿ. ದುಬಾರಿ ಸ್ವಿಫ್  ಸದ್ಯ 30 ಕಾರುಗಳು ಮಾತ್ರ ಮಾರಾಟಕ್ಕೆ ಲಭ್ಯವಿದೆ.  1.4- ಲೀಟರ್ ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು,  140 hp ಪವರ್ ಹಾಗೂ 230 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಗರಿಷ್ಟ ಸ್ಪೀಡ್  210 kmph.

ಇದನ್ನೂ ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!

ಸದ್ಯ ಈ ಕಾರು ನೆದರ್ಲೆಂಡ್‌ನಲ್ಲಿ ಮಾತ್ರ ಲಭ್ಯವಿದೆ. ಸಿಲ್ವರ್ ಕಲರ್‌ನಲ್ಲಿ ಈ ಕಾರು ಲಭ್ಯವಿದೆ. ಮುಂಭಾಗದ ಗ್ರಿಲ್ ಬದಿಯಲ್ಲಿ ರೆಡ್ ಹಾಗೂ ರೂಪ್ ಬ್ಲಾಕ್ ಕಲರ್‌ ನೀಡಲಾಗಿದ್ದು ಸ್ಪೋರ್ಟೀವ್ ಹಾಗೂ ಅಗ್ರಸ್ಸೀವ್ ಲುಕ್ ಹೊಂದಿದೆ. ಶೀಘ್ರದಲ್ಲೇ ಈ ನೂತನ ಸ್ವಿಫ್ಟ್ ಕಾರು ಭಾರತದಲ್ಲೂ ಬಿಡುಗಡೆಯಾಗಲಿದೆ.
 

click me!