ಪ್ರವಾಹ ಪ್ರದೇಶದಲ್ಲಿನ TVS ಮೋಟಾರ್ ಗ್ರಾಹಕರಿಗೆ ಕಂಪನಿ ವಿಶೇಷ ಕೊಡುಗೆ ಘೋಷಿಸಿದೆ. ಈ ಮೂಲಕ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ನೂತನ ಕೊಡುಗೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಆ.23): ದೇಶದಲ್ಲಿನ ಮಳೆ ಹಾಗೂ ಪ್ರವಾಹ ಸಂತ್ರಸ್ಥರಿಗೆ TVS ಮೋಟಾರ್ ಸಹಾಯ ಹಸ್ತ ಚಾಚಿದೆ. ಕರ್ನಾಟಕ ನೆರೆ ಸಂತ್ರಸ್ತರಿಗೆ TVS ಮೋಟಾರ್ 1 ಕೋಟಿ ರೂಪಾಯಿ ನೀಡಿದೆ. ಇದೀಗ ದೇಶದಾದ್ಯಂತ ಪ್ರವಾಹಕ್ಕೆ ಸಿಲುಕಿ ತತ್ತರಿಸಿರುವ TVS ಗ್ರಾಹಕರಿಗೆ ಕಂಪನಿ ಭರ್ಜರಿ ಆಫರ್ ಘೋಷಿಸಿದೆ. ಈ ಮೂಲಕ ಸಂತ್ರಸ್ತರಿಗೆ ಹೊಸ ಆಶಾಕಿರಣವಾಗಿದೆ.
ಇದನ್ನೂ ಓದಿ: ನೆರೆ ಪರಿಹಾರಕ್ಕೆ TVS ಮೋಟಾರ್ಸ್ 1 ಕೋಟಿ ರೂ ಪರಿಹಾರ!
undefined
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿದಂತೆ ನೇರೆ ಪೀಡೀತ ಪ್ರದೇಶದ ಸುಮಾರು 1 ಲಕ್ಷ TVS ಗ್ರಾಹಕರಿಗೆ ಕಂಪನಿ ಭರ್ಜರಿ ಆಫರ್ ಘೋಷಿಸಿದೆ. ನೆರೆಯಿಂದ ಹಾಳಾದ TVS ಸ್ಕೂಟರ್ ಸರ್ವೀಸ್ ಮಾಡುವ ಗ್ರಾಹಕರಿಗೆ ಸಂಪೂರ್ಣವಾಗಿ ಲೇಬರ್ ಚಾರ್ಜ್ ಉಚಿತವಾಗಿ ನೀಡಲಿದೆ. ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿದ TVS ಬೈಕ್, ಸ್ಕೂಟರ್ ಸರಿಪಡಿಸಲು ಕಂಪನಿ ಯಾವುದೇ ಲೇಬರ್ ಚಾರ್ಜ್ ಪಡೆಯುತ್ತಿಲ್ಲ. ಬೈಕ್ ಬಿಡಿಭಾಗಗಳು ಹಾಳಾಗಿದ್ದಲ್ಲಿ ಅವುಗಳ ಚಾರ್ಜ್ ಮಾತ್ರ ಮಾಡಲಿದೆ. ಒಂದು ವೇಳೆ ಬಿಡಿಭಾಗ ಸರಿಯಿದ್ದರೆ, ಯಾವುದೇ ಶುಲ್ಕವಿಲ್ಲದೆ TVS ಸರ್ವೀಸ್ ಮಾಡಲಿದೆ.
ಇದನ್ನೂ ಓದಿ: ಇನ್ಮುಂದೆ ಎಥೆನಾಲ್ ಬೈಕ್; ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ಗುಡ್‌ಬೈ!
ಎಂಜಿನ್ ಒಳಗೆ ನೀರು ಹೋಗಿದ್ದಲ್ಲಿ ಉಚಿತವಾಗಿ ಕ್ಲೀನ್ ಮಾಡಿ ವಾಹನವನ್ನು ಸರಿಪಡಿಸಿ ಕೊಡಲಿದೆ. ಸರ್ವೀಸ್ ಸ್ಟೇಶನ್‌ನಿಂದ 20 ಕಿ.ಮಿ ವ್ಯಾಪ್ತಿ ಒಳಗೆ ವಾಹನವನ್ನು ಕಂಪನಿ ಉಚಿಕವಾಗಿ ಟೋ ಮಾಡಿಕೊಂಡು ತರಲಿದೆ. ಕೆಲ ಬಿಡಿ ಭಾಗಗಳು ಉಚಿತವಾಗಿ ಸಿಗಲಿದೆ. ಈ ಮೂಲಕ ನೆರೆ ಪ್ರವಾಹಕ್ಕೆ ತುತ್ತಾದ ಗ್ರಾಹಕರಿಗೆ ಟಿವಿಎಸ್ ಸಹಾಯ ನೆರವಾಗಲಿದೆ.