40 ಸಾವಿರ ವ್ಯಾಗನ್R ಕಾರು ಹಿಂಪಡೆದ ಮಾರುತಿ!

By Web Desk  |  First Published Aug 23, 2019, 6:13 PM IST

ಮಧ್ಯಮ ವರ್ಗದ ಅತ್ಯುತ್ತಮ ಫ್ಯಾಮಿಲಿ ಕಾರು ಅನ್ನೋ ಹೆಗ್ಗಳಿಕೆಗೆ ಮಾರುತಿ ಸುಜುಕಿ ವ್ಯಾಗನ್R ಪಾತ್ರವಾಗಿದೆ. ಆದರೆ ದಿಢೀರ್ ಆಗಿ ಮಾರುತಿ  40,000 ಕಾರುಗಳನ್ನು ಹಿಂಪೆಡಿದಿದೆ.


ನವದೆಹಲಿ(ಆ.23): ಸಣ್ಣ ಕಾರು ವಿಭಾಗದಲ್ಲಿ ನೂತನ ಮಾರುತಿ ಸುಜುಕಿ ವ್ಯಾಗನ್R ಕಾರು ದಾಖಲೆ ಬರೆದಿದೆ. ಹೊಸ ವಿನ್ಯಾಸ, ಹೆಚ್ಚು ಸ್ಥಳಾವಕಾಶ, ಆಕರ್ಷಕ ಲುಕ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರನಲ್ಲಿದೆ. ಈ ಕಾರಿನಲ್ಲಿ 1.0 ಲೀಟರ್ ಪೆಟ್ರೋಲ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಲಭ್ಯವಿದೆ. ಪೆಟ್ರೋಲ್ ಟ್ಯಾಂಕ್‌ ಪೈಪ್‌ನಲ್ಲಿನ ದೋಷದಿಂದ ಬರೋಬ್ಬರಿ 40,000 ವ್ಯಾಗನ್R ಕಾರುಗಳನ್ನು ಮಾರುತಿ ಸುಜುಕಿ ಹಿಂಪಡೆದಿದೆ.

ಇದನ್ನೂ ಓದಿ: ಮಾರುತಿ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ!

Tap to resize

Latest Videos

undefined

15 ನವೆಂಬರ್ 2018 ರಿಂದ 12 ಆಗಸ್ಟ್ 2019 ವರೆಗಿನ ಮಾರುತಿ ಸುಜುಕಿ ವ್ಯಾಗನ್R 1.0 ಲೀಟರ್ ಕಾರನ್ನು ಕಂಪನಿ ಹಿಂಪಡೆದಿದೆ. ಪೆಟ್ರೋಲ್ ಟ್ಯಾಂಕ್ ಪೈಪ್ ದೋಷವಿರುವ ಕಾರು ಮಾಲೀಕರು ಹತ್ತಿರ ಸರ್ವೀಸ್ ಸ್ಟೇಷನ್‌ಗೆ ತೆರಳಿ ಉಚಿತವಾಗಿ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬುಹುದು. ಸಮಸ್ಯೆ ಕುರಿತು ಅರಿವಿಲ್ಲದ ಮಾಲೀಕರು  ಕೂಡ ಸೆಂಟರ್‌ಗೆ ತೆರಳಿ ಪರಿಶೀಲಿಸಿಕೊಳ್ಳಬಹುದು.

ಇದನ್ನೂ ಓದಿ: 11 ಸಾವಿರಕ್ಕೆ ಬುಕ್ ಮಾಡಿ ಮಾರುತಿ ಸುಜುಕಿ XL6 ಕಾರು!

ನೂತನ ವ್ಯಾಗನ್R ಕಾರಿನ ಬೆಲೆ 4.19  ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದ್ದು, ಟಾಪ್ ಮಾಡೆಲ್ ಬೆಲೆ 5.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).   ಕಳೆದ ವರ್ಷ ಇದೇ ರೀತಿಯ ಸಮಸ್ಯೆ ಮಾರುತಿ ಸ್ವಿಫ್ಟ್ ಹಾಗೂ ಮಾರುತಿ ಬಲೆನೋ ಕಾರಿನಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ 52,686 ಕಾರುಗಳನ್ನು ಮಾರುತಿ ಸುಜುಕಿ ಹಿಂಪಡೆಡಿತ್ತು. ಇಷ್ಟೇ ಅಲ್ಲ ಯಶಸ್ವಿಯಾಗಿ ಸಮಸ್ಯೆ ಪರಿಹರಿಸಿತ್ತು. ಇದೀಗ ಮತ್ತೆ ವ್ಯಾಗನ್R ಕಾರಿನ  ಸಮಸ್ಯೆ ಬಗೆಹರಿಸಲು ಮತ್ತೆ ಕಾರುಗಳನ್ನು ಗ್ರಾಹಕರಿಂದ ಪಡೆದಿದೆ.

click me!