ಟಿವಿಎಸ್ ಮೋಟಾರ್ ನೂತನ ಅಪಾಚೆ RTR ಬೈಕ್ ಬಿಡುಗಡೆ ಮಾಡಿದೆ. BS6 ಎಂಜಿನ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಚೆನ್ನೈ(ನ.27): ಭಾರತದ ಅತೀ ದೊಡ್ಡ ಮೋಟಾರ್ ಕಂಪನಿ TVS ಇದೀಗ 2020ರ ಅಪಾಚೆ ಬೈಕ್ ಲಾಂಚ್ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ BS-VI ಎಂಜಿನ್ ಅಪ್‌ಗ್ರೇಡ್‌ನೊಂದಿಗೆ TVS ಅಪಾಚೆ RTR 200 4V ಹಾಗೂ TVS ಅಪಾಚೆ RTR 160 4V ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಟಿವಿಎಸ್ ಮೋಟಾರ್ ಕಂಪನಿಯ ಮೊದಲ BS-VI ಎಂಜಿನ್ ವಾಹನ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.
undefined
ಇದನ್ನೂ ಓದಿ: ಮಧ್ಯಮ ವರ್ಗದ ಡಾರ್ಲಿಂಗ್ ಟಿವಿಎಸ್ ರೇಡಿಯೋನ್!
ನೂತನ ಅಪಾಚೆ RTR ಬೈಕ್ ಆಕರ್ಷಕ ಗ್ರಾಫಿಕ್ಸ್ ಹಾಗೂ ಕ್ಲಾ ಸ್ಟೈಲ್ LED ಹೆಡ್‌ಲ್ಯಾಂಪ್ಸ್ ಹೊಂದಿದೆ. ನೂತನ LED ಬೆಳಕಿನ ಮೂಲಕ ರಾತ್ರಿಯಲ್ಲೂ ಸ್ಪಷ್ಟತೆ ಸಿಗಲಿದೆ. ವಿಶೇಷ ಅಂದರೆ ಈ ಬೈಕ್ ರೇಸ್ ಟ್ಯೂನ್ ಫ್ಯೂಯೆಲ್ ಇಂಜೆಕ್ಟ್ RT-Fi ಟೆಕ್ನಾಲಜಿ ಹೊಂದಿದೆ. ಈ ತಂತ್ರಜ್ಞಾನದಿಂದ ಬೈಕ್ ಎಂಜಿನ್ ರೇಸ್ ಅನುಭವ ನೀಡಲಿದೆ.
ಇದನ್ನೂ ಓದಿ: ಇನ್ಮುಂದೆ ಎಥೆನಾಲ್ ಬೈಕ್; ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ಗುಡ್‌ಬೈ!
TVS ಅಪಾಚೆ RTR 200 4V ಬೈಕ್, 197.75cc ಸಿಂಗಲ್ ಸಿಲಿಂಡಡರ್, 4 ಸ್ಟ್ರೋಕ್, 4 ವೇಲ್ವ್, ಆಯಿಲ್ ಕೂಲ್ಡ್ ಎಂಜಿನ್ ಮೋಟಾರ್ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಬೈಕ್, 20.5 PS ಪವರ್(@ 8500 RPM) UEIT 16.8 Nm ಪೀಕ್ ಟಾರ್ಕ್(@7500 RPM) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ TVS Nಟಾರ್ಕ್ 125 ಸ್ಕೂಟರ್ ಬಿಡುಗಡೆ!
TVS ಅಪಾಚೆ RTR 160 4V ಬೈಕ್ 159.7 cc, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, 4 ವೇಲ್ವ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ. 16.02 PS ಪವರ್( @8250 RPM) ಹಾಗೂ 14.12 Nm ಪೀಕ್ ಟಾರ್ಕ್(@ 7250 RPM) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆ ಲಭ್ಯವಿದೆ.
ನೂತನ ಅಪಾಚೆ ಬೈಕ್ ಬೆಲೆ ವಿವರ(ಎಕ್ಸ್ ಶೋ ರೂಂ ದೆಹಲಿ)
TVS ಅಪಾಚೆ RTR 200 4V - DC – Rs. 124,000
TVS ಅಪಾಚೆ RTR 160 4V (disc) – Rs. 103,000
TVS ಅಪಾಚೆ RTR 160 4V (drum) – Rs. 99,950