ಬೆಂಗಳೂರು ಮೂಲದ ಎದರ್ ಎನರ್ಜಿ ಕಂಪನಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಎರಡು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡ ಮಾಡಿರುವ ಎದರ್, 3ನೇ ಸ್ಕೂಟರ್ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲು ತುದಿಗಾಲಲ್ಲಿ ನಿಂತಿದೆ.
ಬೆಂಗಳೂರು(ನ.26): ಎಲಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಅತ್ಯಂತ ಯಶಸ್ವಿಯಾಗಿರುವ ಎದರ್ ಎಲೆಕ್ಟ್ರಿಕ್ ಇದೀಗ ಹೊಸ ಸ್ಕೂಟರ್ ಬಿಡುಗಡೆಗ ಸಜ್ಜಾಗಿದೆ. ಬೆಂಗಳೂರು ಮೂಲಕ ಎದರ್ ಎಲೆಕ್ಟ್ರಿಕ್, 450 ಹಾಗೂ 340 ಎರಡು ವೇರಿಯೆಂಟ್ ಸ್ಕೂಟರ್ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಸದ್ಯ ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಲಭ್ಯವಿರುವ ಎದರ್, ಹೊಸ ಸ್ಕೂಟರ್‌ನೊಂದಿಗೆ ಸಾಮ್ರಾಜ್ಯ ವಿಸ್ತರಿಸುತ್ತಿದೆ.
undefined
ಇದನ್ನೂ ಓದಿ: ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ; ಇಲ್ಲಿದೆ ನೂತನ ದರ ಪಟ್ಟಿ!
ನೂತನ ಎದರ್ ಎಲೆಕ್ಟ್ರಿಕ್ ಸ್ಕೂಟರ್ , ಇತ್ತೀಚೆಗೆ ಬಿಡುಗಡೆಯಾದ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಿಂತ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿದೆ. ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.12 ಲಕ್ಷ ರೂಪಾಯಿ. ನೂತನ ಎದರ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಎದರ್ 450 ಎಲೆಕ್ಟ್ರಿಕ್ ಸ್ಕೂಟರ್ ಬಲೆ 1.15 ಲಕ್ಷ ರೂಪಾಯಿ.
ಇದನ್ನೂ ಓದಿ: ಬೆಂಗಳೂರಲ್ಲಿ ಲೀಸ್‌ಗೆ ಸಿಗಲಿದೆ ಎದರ್ ಎಲೆಕ್ಟ್ರಿಕ್ ಸ್ಕೂಟರ್!
ಎದರ್ ಎಲೆಕ್ಟ್ರಿಕ್ ನೂತನ ಸ್ಕೂಟರ್ 2020ರಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ. ಎದರ್ ಸ್ಕೂಟರ್ ಕಂಪನಿಗೆ ಹೀರೋ ಮೋಟಾರ್ ಬಂಡವಾಳ ಹಾಕಿದೆ. ಎರಡು ನಗರಗಳಿಂದ ಎದರ್ ಎಲೆಕ್ಟ್ರಿಕ್ ಸ್ಕೂಟರ್ 35 ನಗರಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಮೊದಲ ಭಾಗವಾಗಿ ಮುಂಬೈ, ಪುಣೆ, ಡೆಲ್ಲಿ, ಕೋಲ್ಕತಾ ಹಾಗೂ ಅಹಮ್ಮದಾಬಾದ್ ನಗರಗಳಿಗೆ ವಿಸ್ತಾರಗೊಳ್ಳಲಿದೆ.
ಸದ್ಯ ಭಾರತದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಎದರ್ ಸ್ಕೂಟರ್ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿದೆ.