ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಲವು ಆಟೋಮೊಬೈಲ್ ಕಂಪನಿಗಳು ಸರ್ಕಾರದ ಜೊತೆ ಕೈಜೋಡಿಸಿದೆ. ಇದೀಗ ಟಿವಿಎಸ್ ಮೋಟಾರ್ ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಈ ಮೂಲಕ ಟಿವಿಎಸ್ ಗ್ರೂಪ್ ಒಟ್ಟು 55 ಕೋಟಿ ರೂಪಾಯಿ ನೀಡಿದೆ.
ಚೆನ್ನೈ(ಮಾ.30): ಕೊರೋನಾ ವೈರಸ್ ಹರಡದಂತೆ ತಡೆಯಲು, ಸೋಂಕಿತರ ಚಿಕಿತ್ಸೆ ಹಾಗೂ ದೇಶದಲ್ಲಿನ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ಆಟೋಮೊಬೈಲ್ ಕಂಪನಿಗಳು, ಸಂಘ ಸಂಸ್ಥೆಗಳು, ಸೆಲೆಬ್ರೆಟಿಗಳು ದೇಣಿಗೆ ನೀಡುತ್ತಿದ್ದಾರೆ. ಇದೀಗ ಟಿವಿಎಸ್ ಮೋಟಾರ್ ಕೈಜೋಡಿಸಿದೆ. ಈಗಾಗಲೇ ಟಿವಿಎಸ್ ಮೋಟಾರ್ ಅಂಗ ಸಂಸ್ಥೆ ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್ 30 ಕೋಟಿ ರೂಪಾಯಿ ನೀಡಿದೆ. ಇದರ ಬೆನ್ನಲ್ಲೇ ಟಿವಿಎಸ್ ಮೋಟಾರ್ 25 ಕೋಟಿ ರೂಪಾಯಿ ನೀಡಿದೆ.
COVID-19 ಪರಿಹಾರ ನಿಧಿಗೆ 1000 ಕೋಟಿ ನೀಡಿದ ಟಾಟಾ ಸನ್ಸ್; ಇದು ಗರಿಷ್ಠ ದೇಣಿಗೆ!..
ಕೊರೋನಾ ವೈರಸ್ ರೋಗದಿಂದ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ವೈರಸ್ ಹತೋಟಿಗೆ ತರಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗ ೊಳ್ಳುತ್ತಿದೆ. ಇದೀಗ ದೇಶದ ಜನರು ಕೂಡ ಸರ್ಕಾರದ ಜೊತೆ ನಿಲ್ಲಬೇಕು. ಈ ಮೂಲಕ ಎಲ್ಲರೂ ಜೊತೆಯಾಗಿ ವೈರಸ್ ವಿರುದ್ಧ ಹೋರಾಡಬೇಕು ಎಂದು ಟಿವಿಎಸ್ ಮೋಟಾರ್ ಚೇರ್ಮೆನ್ ವೇಣು ಶ್ರೀನಿವಾಸನ್ ಹೇಳಿದ್ದಾರೆ.
ಪಿಎಂ ಪರಿಹಾರ ನಿಧಿಗೆ ದೇಣಿಗೆ ಜೊತೆಗೆ ಟಿವಿಎಸ್ ಮೋಟಾರ್ ಕಂಪನಿ 10 ಲಕ್ಷ ಮಾಸ್ಕ್ ತಯಾರಿಸುತ್ತಿದೆ. ಮೆಡಿಕಲ್ ಸಲಕರಣೆಗಳನ್ನು ಉತ್ಪಾದಿಸಲು ಮುಂದಾಗಿದೆ. ಇನ್ನು ಹೊಸೂರಿನಲ್ಲಿರುವ ಟಿವಿಎಸ್ ಮೋಟಾರ್ ಉದ್ಯೋಗಿಗಳ ಕಿಚನ್‌ನಲ್ಲಿ ಪೊಲೀಸರು, ಆಸ್ಪತ್ರೆ ಸಿಬ್ಬಂದಿಗಳಿಗೆ ಆಹಾರ ತಯಾರಿಸಿ ವಿತರಿಸಲಾಗುತ್ತಿದೆ. ಈ ಮೂಲಕ ಟಿವಿಎಸ್ ಮೋಟಾರ್ ಕೋವಿಡ್-19 ಹೋರಾಟಕ್ಕೆ ತನ್ನೆಲ್ಲಾ ಸಹಕಾರ ನೀಡುತ್ತಿದೆ.