ಭಾರತದ ವಾಹನ ಕಂಪನಿಗಳಿಗೆ ಪ್ರತಿ ದಿನ 1,000 ದಿಂದ 1,200 ಕೋಟಿ ರೂ. ನಷ್ಟ!

By Suvarna News  |  First Published Mar 29, 2020, 9:54 PM IST

ಚೀನಾದಲ್ಲಿ ಕೊರೋನಾ ಹುಟ್ಟಿಕೊಂಡ ಬೆನ್ನಲ್ಲೇ ಭಾರತ ಸೇರಿದಂತೆ ವಿಶ್ವದ ಹಲವು ಆಟೋಮೊಬೈಲ್ ಕಂಪನಿಗಳು ಸಂಕಷ್ಟ ಆರಂಭಗೊಂಡಿತು. ಭಾರತ ಲಾಕ್‌ಡೌನ್ ಮೊದಲೇ ಬಹುತೇಕ ವಾಹನ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿತ್ತು. ಒಂದು ದಿನ ಉತ್ಪಾದನೆ ನಿಲ್ಲಿಸಿದರೆ ಭಾರತದ ಆಟೋಮೊಬೈಲ್ ಕಂಪನಿಗಳಿಗೆ ಆಗುವ ನಷ್ಟದ ವಿವರ ಇಲ್ಲಿದೆ


ನವದೆಹಲಿ(ಮಾ.29): ಕೊರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಭಾರತ ಲಾಕ್‌ಡೌನ್ ಮಾಡಿದ್ದಾರೆ. ಅಗತ್ಯ ವಸ್ತುಗಳು ಹಾಗೂ ತುರ್ತು ಹೊರತುಪಡಿಸಿದರೆ ಇನ್ಯಾವುದು ಲಭ್ಯವಿಲ್ಲ. ಭಾರತದಲ್ಲಿರುವ ಎಲ್ಲಾ ಆಟೋಮೊಬೈಲ್ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿದೆ. ಒಂದು ದಿನ ಉತ್ಪಾದನೆ ಸ್ಥಗಿತಗೊಂಡರೆ ಭಾರತದ ಕಂಪನಿಗಳಿಗೆ 1,000 ದಿಂದ 1,200 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ.

ಮಾರಾಟ ಮಾಡುವಂತಿಲ್ಲ,ಗಡುವು ವಿಸ್ತರಿಸಿಲ್ಲ ; ವಾಹನ ಡೀಲರ್ಸ್‌ಗೆ 12 ಸಾವಿರ ಕೋಟಿ ನಷ್ಟ!

Tap to resize

Latest Videos

undefined

ಇದು ಒಂದು ದಿನದ ಲೆಕ್ಕಾಚಾರ. 21 ದಿನ ಲಾಕ್‌ಡೌನ್ ಇರುವುದದಿಂದ ಆಟೋಮೊಬೈಲ್ ಕಂಪನಿಗಳು ಚೇತರಿಸಿಕೊಳ್ಳುವುದು ಕಷ್ಟ. ಕಳೆದ ವರ್ಷ ಮಾರಾಟ ಕುಸಿತದಿಂದ ಭಾರತೀಯ ಆಟೋಮೊಬೈಲ್ ಕಂಪನಿಗಳು ನಷ್ಟ ಅನುಭವಿಸಿತ್ತು. ಇಷ್ಟೇ ಅಲ್ಲ ಚೇತರಿಕೆಗೆ ಜಿಎಸ್‌ಟಿ ಕಡಿತಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ನಿರಾಕರಿಸಿತ್ತು. ಇತ್ತ ಎಲೆಕ್ಟ್ರಿಕ್ ವಾಹನಕ್ಕೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿರುವುದರಿಂದಲೂ ಇಂಧನ ವಾಹನ ಮಾರಾಟ ಕುಂಠಿತಗೊಳ್ಳುತ್ತಿದೆ.

21 ದಿನಗಳ ಬಳಿಕ ಆಟೋಮೊಬೈಲ್ ಕಂಪನಿಗಳು ಉತ್ಪಾದನೆ ಆರಂಭಿಸುವುದು ಕಷ್ಟ. ಎಪ್ರಿಲ್‌ನಲ್ಲಿ ಆಟೋಮೊಬೈಲ್ ಕಂಪನಿಗಳ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಕೊರೋನಾ ವೈರಸ್ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ದಶಕಗಳಷ್ಟು ಹಿಂದಕ್ಕೆ ತಳ್ಳಲ್ಪಟ್ಟಿದೆ. ಇದರಿಂದ ಚೇತರಿಕೆಗೆ ವಿಶೇಷ ಪ್ಯಾಕೇಜ್, ಜಿಎಸ್‌ಟಿ ಕಡಿತ ಸೇರಿದಂತೆ ಇತರ ಅನೂಕೂಲತೆ ಅಗತ್ಯವಿದೆ ಎಂದು ಆಟೋ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
 

click me!