ಲಾಕ್‌ಡೌನ್ ನಡುವೆ ನೂತನ ಹ್ಯುಂಡೈ ವರ್ನಾ ಫೇಸ್‌ಲಿಫ್ಟ್ ಕಾರು ಬಿಡುಗಡೆ!

By Suvarna News  |  First Published Mar 30, 2020, 2:51 PM IST

ಕೊರೋನಾ ವೈರಸ್ ಆತಂಕ, ಭಾರತ ಲಾಕ್‌ಡೌನ್ ನಡುವೆ ಸದ್ದಿಲ್ಲದೆ ಹ್ಯುಂಡೈ ಇಂಡಿಯಾ ನೂತನ ವರ್ನಾ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. ಹೊಸತನ, ಎಂಜಿನ್ ಅಪ್‌ಗ್ರೇಡ್, ಹೊಸ ಫೀಚರ್ಸ್ ಹಾಗೂ ಆಕರ್ಷಕ ಬೆಲೆಯೊಂದಿಗೆ ನೂತನ ಕಾರು ಬಿಡುಗಡೆಯಾಗಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 


ನವದೆಹಲಿ(ಮಾ.30): ಕೊರೋನಾ ವೈರಸ್ ಭೀತಿ, ಲಾಕ್‌ಡೌನ್ ಆದೇಶಗಳ ನಡುವೆ ಇಹ್ಯುಂಡೈ ವರ್ನಾ ಫೇಸ್‌ಲಿಫ್ಟ್ ಕಾರು ಸದಿದ್ದಿಲ್ಲದೆ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ನೂತನ ವರ್ನಾ ಕಾರಿನ ಬೆಲೆ 9.30 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇನ್ನು 25,000 ರೂಪಾಯಿ ನೀಡಿ ನೂತನ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಕರೋನಾ ವೈರಸ್ ಕಾರಣ ಸದ್ಯ ಆನ್‌ಲೈನ್ ಮೂಲಕ ಮಾತ್ರ ಬುಕಿಂಗ್ ಅವಕಾಶವಿದೆ. ಇನ್ನು ಕಾರು ಡೆಲಿವರಿ ಕೂಡ ಲಾಕ್‌ಡೌನ್ ಬಳಿಕ ಕೈಸೇರಲಿದೆ.

25 ಸಾವಿರಕ್ಕೆ ಬುಕ್ ಮಾಡಿ ಹ್ಯುಂಡೈ ಕ್ರೆಟಾ ಕಾರು!.

Latest Videos

undefined

ನೂತನ ಹ್ಯುಂಡೈ ವರ್ನಾ ಕಾರು 5 ಟ್ರಿಮ್ ಲೆವೆಲ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.  S, S+, SX, SX(O) & SX(O) Turbo ಆಯ್ಕೆಗಳು ಲಭ್ಯವಿದೆ.

ಹ್ಯುಂಡೈ ವರ್ನಾ ವೇರಿಯೆಂಟ್ ಹಾಗೂ ಬೆಲೆ(ಎಕ್ಸ್ ಶೋ ರೂಂ, ನವದೆಹಲಿ)
1.5 MPI MT S  = 930,585 ರೂಪಾಯಿ
1.5 MPI MT SX = 10,70,389 ರೂಪಾಯಿ
1.5 MPI IVT SX ಮೆಟಾಲಿಕ್ = 11,95,389 ರೂಪಾಯಿ
1.5 MPI MT SX(O) ಮೆಟಾಲಿಕ್ = 12,59,900 ರೂಪಾಯಿ
1.5 MPI IVT SX(O) ಮೆಟಾಲಿಕ್ = 13,84,900 ರೂಪಾಯಿ
1.0 Turbo GDI DCT SX(O) ಮೆಟಾಲಿಕ್ = 13,99,000 ರೂಪಾಯಿ
1.5 CRDi MT S+ ಮೆಟಾಲಿಕ್ = 10,65,585 ರೂಪಾಯಿ
1.5 CRDi MT SX ಮೆಟಾಲಿಕ್ =  10,65,585 ರೂಪಾಯಿ

ನೂತನ ಕಾರಿನಲ್ಲೂ ತನ್ನ ಸಿಗ್ನೇಚರ್ ಸ್ಟೈಲ್ ಕಾಸ್ಕೇಡಿಂಗ್ ಕ್ರೂಮ್ ಗ್ರಿಲ್, ಹೊಸ ಸ್ಟೈಲೀಶ್ LED ಹೆಡ್‌ಲ್ಯಾಂಪ್ಸ್, ಡೈಮಂಡ್ ಕಟ್ ಆಲೋಯ ವೀಲ್ಹ್, ನೂತನ ORVMs, ಸಿಲ್ವರ್ ಡೂರ್ ಹ್ಯಾಂಡಲ್ಸ್, ಹೊಸ LED ಟೈಲ್‌ಲ್ಯಾಂಪ್ಸ್, ಹೊತನ ಅಳವಡಿಸಿಕೊಂಡಿರುವ ರೇರ್ ಬಂಪರ್ ಹೊಂದಿದೆ.

2020 ವರ್ನಾ ಫೇಸ್‌ಲಿಫ್ಟ್ ಕಾರು 4,440mm ಉದ್ದ, 1,729mm ಅಗಲ,  ಹಾಗೂ 1,475mm ಎತ್ತರ ಹೊಂದಿದೆ. .ಕಾರಿನ ವೀಲ್ಹ್ ಬೇಸ್ 2,600mm ಆಗಿದೆ.  ನೂತನ ಕಾರು 6 ಬಣ್ಣಗಳಲ್ಲಿ ಲಭ್ಯವಿದೆ. ಫೈರಿ ರೆಡ್, ಟೈಟಾನ್ ಗ್ರೆ, ಸ್ಟ್ಯಾರಿ ನೈಟ್, ಟೈಫೂನ್ ಸಿಲ್ವರ್, ಪೊಲಾರ್ ವೈಟ್ ಹಾಗೂ ಫ್ಯಾಂಟಮ್ ಬ್ಲಾಕ್ ಕಲರ್ಸ್ ಲಭ್ಯವಿದೆ. 

ನೂತನ ಕಾರು 1.5-ಲೀಟರ್  MPi ಪೆಟ್ರೋಲ್ , 1.0 ಕಪ್ಪಾ Turbo GDi ಪೆಟ್ರೋಲ್ ಹಾಗೂ  1.5-ಲೀಟರ್  U2 CRDi ಡೀಸೆಲ್ ಎಂಜಿನ್ ಆಯ್ಕೆಗಳಿವೆ.  ಪೆಟ್ರೋಲ್ ಎಂಜಿನ್‌ಗಳು ಕ್ರಮವಾಗಿ 113 bhp ಪವರ್ ಹಾಗೂ 144Nm ಪೀಕ್ ಟಾರ್ಕ್ ಹಾಗೂ   118 bhp ಪವರ್ ಹಾಗೂ  172Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಮಾರ್ಥ್ಯ ಹೊಂದಿದೆ, ಡೀಸೆಲ್ ಎಂಜಿನ್ 113 bhp ಪವರ್ ಹಾಗೂ  250Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

click me!