ಮಾರುತಿ ಸುಜುಕಿ S ಪ್ರೆಸ್ಸೋ ಕಾರು ಬಿಡುಗಡೆ ದಿನಾಂಕ ಬಹಿರಂಗ!

By Web DeskFirst Published Sep 24, 2019, 8:22 PM IST
Highlights

ಮಾರುತಿ ಸುಜುಕಿ ಕಂಪನಿ ಇದೀಗ ನೂತನ ಸಣ್ಣ ಕಾರು ಬಿಡುಗಡೆ ಮಾಡುತ್ತಿದೆ. S ಪ್ರೆಸ್ಸೋ  ಸಣ್ಣ ಕಾರು  ಕಡಿಮೆ ಬೆಲೆ ಹಾಗೂ ಅತ್ಯುತ್ತಮ ಸೌಲಭ್ಯ ಹೊಂದಿದೆ. ನೂತನ ಕಾರಿನ ವಿವರ ಇಲ್ಲಿದೆ.

ನವದೆಹಲಿ(ಸೆ.24): ಭಾರತದ ವಾಹನ ಮಾರುಕಟ್ಟೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಮಾರುತಿ ಸುಜುಕಿ ಇದೀಗ ನೂತನ  S ಪ್ರೆಸ್ಸೋ  ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಮಾರುತಿ ಬ್ರೆಜ್ಜಾ ಕಾರಿನ ಮಿನಿ ವರ್ಶನ ಎಂದೇ ಪ್ರಖ್ಯಾತಿ ಪಡೆದಿರುವ  S ಪ್ರೆಸ್ಸೋ  ಕಾರು, ವ್ಯಾಗನ್R ರೇಂಜ್ ಕಾರಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಮಾರುತಿ, ಹ್ಯುಂಡೈ ಬೆಲೆ ಕಡಿತ, ಇನ್ಮುಂದೆ ಕಾರು ಖರೀದಿ ಅಗ್ಗ!

S ಪ್ರೆಸ್ಸೋ  ಕಾರು ಕ್ರಾಸ್‌ವೋರ್ ಕಾರಾಗಿದ್ದು, ಮಿನಿ SUV ಕಾರಿನ ಲುಕ್ ನೀಡಲಾಗಿದೆ. ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲು ಮಾರುತಿ ಮುಂದಾಗಿದೆ. ನೂತನ ಕಾರಿನ ಬೆಲೆ 3.50 ಲಕ್ಷ ರೂಪಾಯಿಂದ ಗರಿಷ್ಠ 5.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ: ಆಟೋ ಮಾರಟ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಬಜಾಜ್; ನಿಟ್ಟುಸಿರು ಬಿಟ್ಟ ಕೇಂದ್ರ!

ನೂತನ ಕಾರು ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಕಾರು ಪ್ರಿಯರ ಕುತೂಹಲ ಹೆಚ್ಚಿಸಿದೆ.  S ಪ್ರೆಸ್ಸೋ  ಕಾರು 3,5,65mm ಉದ್ದ, 1,520mm ಅಗಲ ಹಾಗೂ  1,564mm ಎತ್ತರ ಹೊಂದಿದೆ.  ಇನ್ನು ವೀಲ್ಹ್ ಬೇಸ್ 2,380mm. ಕಾರಿನ ಕರ್ಬ್ ತೂಕ 726 kg.

ಇದನ್ನೂ ಓದಿ: S ಕ್ರಾಸ್ ಕಾರಿಗೆ ಬಂಪರ್ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ S ಪ್ರೆಸ್ಸೋ  ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಗರಿಷ್ಠ 68 PS ಪವರ್ ಹಾಗೂ 90 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  5-ಸ್ವೀಡ್ ಮ್ಯಾನ್ಯುಯೆಲ್ ಹಾಗೂ 5-speed AMT ಟ್ರಾನ್ಸ್‌ಮಿಶನ್ ಹೊಂದಿದೆ.  1.0-ಲೀಟರ್ BS6 ಎಮಿಶನ್ ಎಂಜಿನ್ ಹೊಂದಿದೆ.


 

click me!