ಗೊತ್ತಿಲ್ದೇ ಇರೋ ಟ್ರಾಫಿಕ್ ನಿಯಮ -ಅಪರಿಚಿತರಿಗೆ ಲಿಫ್ಟ್, ಕಾರಿನಲ್ಲಿ ಟಿವಿ ನಿಷೇಧ!

By Web Desk  |  First Published Feb 28, 2019, 4:00 PM IST

ಟ್ರಾಫಿಕ್ ನಿಯಮ ಪಾಲನೆಯಲ್ಲಿ ನಾವೆಲ್ಲ ಹಿಂದಿದ್ದೇವೆ. ಆದರೆ ಟ್ರಾಫಿಕ್‌ನಲ್ಲಿ ಹಲವು ನಿಯಮಗಳಿವೆ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. ಸಣ್ಣ ತಪ್ಪಿಗೂ ಭಾರಿ ದಂಡ ತೆರಬೇಕಾದ ಸಂದರ್ಭಗಳು ಎದುರಾಗಬಹುದು. ಇಲ್ಲಿದೆ ಗೊತ್ತಿಲ್ಲದೇ ಇರೋ ಟ್ರಾಫಿಕ್ ನಿಯಮಗಳು.
 


ಬೆಂಗಳೂರು(ಫೆ.28): ಭಾರತದಲ್ಲಿ ಟ್ರಾಫಿಕ್ ನಿಯಮಗಳ ಕುರಿತು ಸಾರ್ವಜನಿಕರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಿಗ್ನಲ್ ಜಂಪ್, ಇಂಡಿಕೇಟರ್ ಬಳಸದಿರುವುದು, ರಾಂಗ್ ಸೈಡ್ ವಾಹನ ಚಲಾಯಿಸುವುದು ಸೇರಿದಂತೆ ಪ್ರತಿ ದಿನ ಹಲವು ನಿಯಮಗಳನ್ನ ಉಲ್ಲಂಘಿಸುವವರ ಸಂಖ್ಯೆ ಹೆಚ್ಚು. ಪೊಲೀಸರು ಕಂಡೆರೆ ಸರಳ ಹಾಗೂ ಎಲ್ಲಾ ನಿಯಮ ಪಾಲಿಸೋ ರೀತಿ ಪೋಸ್, ಇಲ್ಲದಿದ್ದರೆ, ನಮ್ದೇ ರಾಜ್ಯ, ನಮ್ದೇ ದಾರಿ ಅನ್ನೋ ಡ್ರೈವ್. 

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

Latest Videos

undefined

ಭಾರತದಲ್ಲಿ ಟ್ರಾಫಿಕ್ ಹಲವು ನಿಯಮಗಳಿವೆ. ಒಂದೊಂದು ರಾಜ್ಯದಲ್ಲಿ ಕಟ್ಟು ನಿಟ್ಟಾಗಿ ಈ ನಿಯಮಗಳನ್ನ ಪಾಲಿಸುತ್ತಾರೆ. ಆದರೆ ಯಾವುದೇ ಸಂದರ್ಭದಲ್ಲೂ ಈ ನಿಯಮಗಳನ್ನ ಉಲ್ಲಂಘಿಸಿದರೆ ಪೊಲೀಸರು ದಂಡ ಹಾಕಲಿದ್ದಾರೆ. ಹೀಗಾಗಿ ಗೊತ್ತಿಲ್ಲದೇ ಇರೋ ಹೊಸ ನಿಯಮಗಳ ಕುರಿತು ಇಲ್ಲಿ ಹೇಳಲಾಗಿದೆ. ವಾಹನ ಚಲಾಯಿಸುವ ಪ್ರತಿಯೊಬ್ಬರು ಇದನ್ನು ತಿಳಿದುಕೊಳ್ಳಬೇಕು.

ಅಪರಿಚಿತರಿಗೆ ಲಿಫ್ಟ್
ಕಾರಿನಲ್ಲಿ ಅಪರಿಚಿತರಿಗೆ ಲಿಫ್ಟ್ ನೀಡುವಾಗ ಹಲವು ಬಾರಿ ಯೋಚಿಸಬೇಕು. ಕಾರಣ ಅಪರಿಚಿತರು ವಂಚಿಸುವು ಸಾಧ್ಯತೆ ಇದೆ. ಇಷ್ಟೇ ಅಲ್ಲ, ಅಪರಿಚಿತರಿಗೆ ಲಿಫ್ಟ್ ನೀಡಿದರೆ ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆ.  ಖಾಸಗಿ ವಾಹನವನ್ನು ಟ್ಯಾಕ್ಸಿ ರೀತಿಯಲ್ಲಿ ಬಳಸಿದ ಕಾರಣ ಕೇಸ್ ದಾಖಲಾಗುತ್ತೆ. ಇನ್ನು ಅಪರಿಚಿತರಿಂದ ಅಪಾಯ ಎದುರಾಗೋ ಸಾಧ್ಯತೆ ಇರೋದರಿಂದ ಈ ನಿಯಮ ರಾಜ್ಯಗಳಲ್ಲೂ ಪಾಲನೆಯಲ್ಲಿದೆ.

ಇದನ್ನೂ ಓದಿ: ತಾಯಿಗೆ 1.87 ಕೋಟಿ ರೂ ಕಾರು ಗಿಫ್ಟ್ ನೀಡಿದ ಸಲ್ಮಾನ್ - ದುಬಾರಿ ಕಾರಿನ ವಿಶೇಷತೆ ಇಲ್ಲಿದೆ!

ಪಾರ್ಕಿಂಗ್ ಅಡ್ಡಿ
ವಾಹನ ಪಾರ್ಕಿಂಗ್ ಮಾಡುವಾಗ ಎಚ್ಚರ ವಹಿಸುವುದು ಅಗತ್ಯ. ಪಾರ್ಕಿಂಗ್ ವೇಳೆ ಇತರ ವಾಹನಗಳನ್ನು ತೆಗೆಯಲು ಅಥವಾ ಬೇರೆ ವಾಹನಗಳ ಪಾರ್ಕ್ ಮಾಡು ಅವಕಾಶ ಮಾಡಿಕೊಡದೆ ಹಾಗೇ ಪಾರ್ಕ್ ಮಾಡುವುದು ಟ್ರಾಫಿಕ್ ನಿಯಮ ಉಲ್ಲಂಘನೆ. ಸರಳವಾಗಿ ಹೇಳುವುದಾದರೆ ಬೇಕಾಬಿಟ್ಟಿ ಪಾರ್ಕ್ ಮಾಡುವುದೂ ಟ್ರಾಪಿಕ್ ನಿಯಮ ಉಲ್ಲಂಘನೆ. ಹೀಗಾಗಿ 100 ರೂಪಾಯಿ ದಂಡ ಪಾವತಿಸಬೇಕಾಗುತ್ತೆ. ಜೊತೆ ಕೇಸ್ ಕೂಡ ದಾಖಲಾಗುತ್ತೆ.

ಪ್ರಥಮ ಚಿಕಿತ್ಸೆ ಕಿಟ್ ಕಡ್ಡಾಯ
ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್ ಕಡ್ಡಾಯವಾಗಿ ಇರಲೇಬೇಕು. ವಾಹನ ಹಳೇಯದಾಯಿತು, ಈ ಹಿಂದೆ ಬಳಿಸಿದ್ದೇವೆ ಅನ್ನೋ ಕಾರಣಗಳು ಒಪ್ಪುವುದಿಲ್ಲ. ಪ್ರಥಮ ಚಿಕಿತ್ಸೆ ಕಿಟ್ ಇಲ್ಲದಿದ್ದರೂ ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆ. ಇದಕ್ಕೆ 500 ರೂಪಾಯಿ ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ ನಿಯಮವಿದೆ.

ಇದನ್ನೂ ಓದಿ:ರೆಡ್ ಸಿಗ್ನಲ್ ದಾಟಿದರೆ ಏನಾಗುತ್ತೆ? - ರಸ್ತೆ ಸಾರಿಗೆ ಇಲಾಖೆ ಹೇಳಿದ ಸತ್ಯ!

ವಾಹನದಲ್ಲಿ ಟಿವಿ ಅಳವಡಿಕೆ
ಕಾರು ಅಥವಾ ಇತರ ವಾಹನಗಳ ಡ್ಯಾಶ್ ಬೋರ್ಡ್‌ನಲ್ಲಿ LED ಟಿವಿ ಅಳವಡಿಕೆ ಮಾಡುವುದು ಕೂಡ ಟ್ರಾಫಿಕ್ ನಿಯಮ ಉಲ್ಲಂಘನೆ. ಇದರಿಂದ ಚಾಲಕ ಡ್ರೈವಿಂಗ್ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಿಲ್ಲ. ಡ್ರೈವರ್ ಹಿಂಬದಿ ಟಿವಿ ಅಳವಡಿಕೆಗೆ ಅವಕಾಶವಿದೆ. ಆದರೆ ಡ್ಯಾಶ್‌ಬೋರ್ಡ್ ಹಾಗೂ ಮುಂಭಾಗದಲ್ಲಿ ಟಿವಿ ಅಳವಡಿಸುವಂತಿಲ್ಲ. ಇದಕ್ಕೆ 100 ರೂಪಾಯಿ ದಂಡ ಹಾಗೂ ಪ್ರಕರಣ ಕೂಡ ದಾಖಲಾಗುತ್ತೆ.

ಇತರರ ವಾಹನ ಬಳಕೆ
ಗೆಳೆಯರ ಅಥವಾ ಸಂಬಂಧಿಕರ ವಾಹನವನ್ನು ಅವರಿಗೆ ಅರಿವಿಲ್ಲದಂತೆ ಬಳಸುವುದು ಕೂಡ ಟ್ರಾಫಿಕ್ ನಿಯಮ ಉಲ್ಲಂಘನೆ. ಚೆನ್ನೈನಲ್ಲಿ ಈ ನಿಯಮ ಕಟ್ಟು ನಿಟ್ಟಾಗಿ ಜಾರಿಯಲ್ಲಿದೆ.  ಮಾಲೀಕರ ಅರಿವಿಲ್ಲದಂತೆ ವಾಹನವನ್ನು ಚಲಾಯಿಸಿದರೆ, ಅಥವಾ ಮಾಲೀಕರಲ್ಲಿ ಒಂದು ಸ್ಥಳ ಹೇಳಿ, ಬೇರೆಡೆಗೆ ಪ್ರಯಾಣಿಸಿದರೆ ಟ್ರಾಫಿಕ್ ನಿಯಮ ಉಲ್ಲಂಘನೆ. ಇದಕ್ಕೆ 3 ತಿಂಗಳ ಜೈಲು ಶಿಕ್ಷೆ ಹಾಗೂ 500 ರೂಪಾಯಿ ದಂಡ ಪಾವತಿಸಬೇಕು.

ಇದನ್ನೂ ಓದಿ: ಡ್ರೈವಿಂಗ್ ವೇಳೆ ಮೊಬೈಲ್ ಬಳಸುವವರಿಗೆ ವಿಶೇಷ ಪ್ರಕಟಣೆ!

ಎಂಜಿನ್ ಆಫ್ ಮಾಡದಿರುವುದು
ಪಾರ್ಕ್ ಮಾಡಿದಾಗ, ಅಥವಾ ಇನ್ಯಾವುದೇ ಸಂದರ್ಭದಲ್ಲಿ ಚಾಲಕ ಕಾರಿನಿಂದ ಇಳಿದು ಇತರ ಅವಶ್ಯಕತೆಗಾಗಿ ಹೋದಾಗ ಕಾರಿನ ಎಂಜಿನ್ ಆಫ್ ಮಾಡಲೇಬೇಕು. ಇಲ್ಲದಿದ್ದರೆ ಇಂಧನ ಉಳಿತಾಯ ಸಪ್ತಾಹಡಿ ಚಾಲಕನಿಗೆ 100 ರೂಪಾಯಿ ದಂಡ ವಿಧಿಸಲಾಗುತ್ತೆ.

ವಾಹನದಲ್ಲಿ ಧೂಮಪಾನ
ವಾಹನದಲ್ಲಿ ಧೂಮಪಾನ ಮಾಡುವುದು ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದೆ. ಒಂದು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ಕೇಸ್, ಇನ್ನೊಂದು ಧೂಮಪಾನದಿಂದ ಚಾಲಕನಿಗೆ  ಡ್ರೈವಿಂಗ್‌ನಲ್ಲಿ ಡ್ರೈವಿಂಗ್‌ನಲ್ಲಿ ಗಮನಕೇಂದ್ರಿಕರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎರಡು ಕೇಸ್ ದಾಖಲಾಗುತ್ತೆ. 

click me!