ನೆದರ್ಲೆಂಡ್ಸ್; 2020ರಲ್ಲಿ ಟ್ರಾಫಿಕ್ ದಂಡ ಮತ್ತೆ ಏರಿಕೆ!

By Web Desk  |  First Published Oct 5, 2019, 9:12 PM IST

ಭಾರತದಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸೆ.1 ರಿಂದ ಹೊಸ ಟ್ರಾಪಿಕ್ ದಂಡ ದೇಶದೆಲ್ಲೆಡೆ ಜಾರಿಯಾಗಿದೆ. ದಂಡ ಮೊತ್ತ 10 ಪಟ್ಟು ಹೆಚ್ಚಿಸಲಾಗಿದೆ. ಇದೀಗ ನೆದರ್ಲೆಂಡ್‌ನಲ್ಲಿ ಮುಂದಿನ ವರ್ಷದ ಆರಂಭದಿಂದ ಟ್ರಾಫಿಕ್ ದಂಡ ಮೊತ್ತ ಏರಿಕೆ ಮಾಡಲಾಗುತ್ತಿದೆ.


ನೆದರ್ಲೆಂಡ್ಸ್(ಅ.05): ಭಾರತದಲ್ಲಿ ಟ್ರಾಫಿಕ್ ದಂಡ ದುಬಾರಿಯಾಗಿದೆ. ಸೆ.01ರಿಂದ ಹೊಸ ಟ್ರಾಫಿಕ್ ನಿಯಮ ಜಾರಿಯಾಗಿದೆ. ಇದೀಗ ನೆದರ್ಲೆಂಡ್ಸ್‌ನಲ್ಲಿ 2020ರ ಆರಂಭದಿಂದ ಟ್ರಾಫಿಕ್ ದಂಡ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಕನಿಷ್ಠ 10 ಯರೋ(777 ರೂಪಾಯಿ) ಪ್ರತಿ ನಿಯಮ ಉಲ್ಲಂಘನೆ ದಂಡದಲ್ಲಿ ಹೆಚ್ಚಳವಾಗಲಿದೆ 

ಇದನ್ನೂ ಓದಿ: ಕೊನೆಗೂ ಟ್ರಾಫಿಕ್ ದಂಡ ಇಳಿಕೆ: ಯಾವುದಕ್ಕೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್

Tap to resize

Latest Videos

ನೆದರ್ಲೆಂಡ್ಸ್‌ನಲ್ಲಿ ಟ್ರಾಫಿಕ್ ದಂಡದ ಮೊತ್ತ ಏರಿಕೆ ಮಾಡಿರುವುದು ಇದೇ ಮೊದಲಲ್ಲ. ಹಲವು ಬಾರಿ ನೆದರ್ಲೆಂಡ್ಸ್ ಸರ್ಕಾರ ದಂಡದ ಮೊತ್ತ ಏರಿಕೆ ಮಾಡಿದೆ. ಓವರ್ ಸ್ಪೀಡ್‌ನಲ್ಲಿ ವಾಹನ ಚಲಾಯಿಸಿದರೆ ನೆದರ್ಲೆಂಡ್‌ನಲ್ಲಿ ಗರಿಷ್ಠ ದಂಡ ಪಾವತಿಸಬೇಕು. ಓವರ್ ಸ್ವೀಡ್ ನಿಯಮ ಉಲ್ಲಂಘನೆಗೆ 431 ಯುರೋ(33,518 ರೂಪಾಯಿ) ದಂಡ ಹಾಕಲಾಗುತ್ತಿದೆ. 2020ರಲ್ಲಿ ಇದು ದುಪ್ಪಟ್ಟಾಗಲಿದೆ.

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್: ದಂಡದ ಸಂಪೂರ್ಣ ಪಟ್ಟಿ ಇಲ್ಲಿದೆ

ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಿದರೆ 240 ಯುರೋ(18,663 ರೂಪಾಯಿ) ದಂಡ ಹಾಕಲಾಗುತೆ. ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿದರೆ ಹಾಗೂ ಸೀಟ್ ಬೆಲ್ಟ್ ನಿಯಮ ಉಲ್ಲಂಘನೆಗೆ 140 ಯುರೋ (10,887 ರೂಪಾಯಿ) ದಂಡ. ನೋ ಪಾರ್ಕಿಂಗ್, ಅನಗತ್ಯ ಹಾಗೂ ಕರ್ಕಶ ಹಾರ್ನ್ ಬಳಕೆಗೆ 390 ಯುರೋ(30,328 ರೂಪಾಯಿ) ದಂಡ ಹಾಕಲಾಗುತ್ತೆ. ಡ್ರಂಕ್ ಅಂಡ್ ಡ್ರೈವ್ ನಿಯಮ ಉಲ್ಲಂಘನೆಗೆ ನೆದರ್ಲೆಂಡ್‌ನಲ್ಲಿ 10,887 ರೂಪಾಯಿ ದಂಡ ಹಾಕಲಾಗುತ್ತೆ.

click me!