ಅಶೋಕ್ ಲೇಲ್ಯಾಂಡ್ ಘನ ವಾಹನ ಕಂಪನಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಮಾರಾಟ ಕುಸಿತದ ಕಾರಣ ಕಂಪನಿ ತನ್ನ ಎಲ್ಲಾ ಉತ್ಪಾದಕ ಘಟಗಳನ್ನು 15 ದಿನಗಳ ವರೆಗೆ ಸ್ಥಗಿತಗೊಳಿಸಿದೆ.
ನವದೆಹಲಿ(ಅ.05): ಮಾರುಕಟ್ಟೆಯಲ್ಲಿ ವಾಹನ ಖರೀದಿ ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಯಾದ ಅಶೋಕ್ ಲೇಲ್ಯಾಂಡ್ ತನ್ನೆಲ್ಲಾ ಘಟಕಗಳಲ್ಲಿ 15 ದಿನಗಳವರೆಗೂ ಉತ್ಪಾದನೆ ಸ್ಥಗಿತಗೊಳಿಸಿದೆ. ವಾಹನ ಖರೀದಿ ಬೇಡಿಕೆ ಮತ್ತು ಉತ್ಪಾದನೆಯನ್ನು ಸರಿದೂಗಿಸಲು ಅ.2 ರಿಂದ 15 ರವರೆಗೂ ತನ್ನೆಲ್ಲಾ ಘಟಕಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಿದೆ.
ಇದನ್ನೂ ಓದಿ: ಟಾಟಾ ಟಿಯಾಗೋ Wizz ಕಾರು ಲಾಂಚ್; ಬೆಲೆ ಕೇವಲ 5.40 ಲಕ್ಷ!
ವಾಹನೋದ್ಯಮ ಭಾರೀ ನಷ್ಟಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ಉತ್ಪಾದನೆ ನಿಲ್ಲಿಸುತ್ತಿವೆ. ಇದೇ ರೀತಿ ಅಶೋಕ್ ಲೇಲ್ಯಾಂಡ್ ಕೂಡ 15 ದಿನ ಉತ್ಪಾದನೆ ಸ್ಥಗಿತಗೊಳಿಸಿದೆ. ಕಳೆದ ತಿಂಗಳು ಚೆನ್ಮೈನ ಅಶೋಕ್ ಲೇಲ್ಯಾಂಡ್ 16 ದಿನ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ: ಮೋದಿ ಕನಸಿಗೆ ಕೈಜೋಡಿಸಿದ ಟೊಯೊಟಾ, ಮಹೀಂದ್ರ!
ಸಾಲು ಸಾಲು ಹಬ್ಬಗಳಿದ್ದರೂ ವಾಹನ ಖರೀದಿಯಲ್ಲಿ ಯಾವುದೇ ಏರಿಕೆ ಕಾಣುತ್ತಿಲ್ಲ. ಅಶೋಕ್ ಲೇಲ್ಯಾಂಡ್ ವಾಹನ ಮಾರಾಟ ಶೇಕಡಾ 55 ರಷ್ಟು ಇಳಿಕೆ ಕಂಡಿದೆ. ಅಶೋಕ್ ಲೇಲ್ಯಾಂಡ್ ಮಾತ್ರವಲ್ಲ, ಟಾಟಾ ಮೋಟಾರ್ಸ್ ಘನ ವಾಹನಗಳ ಮಾರಾಟದಲ್ಲೂ ಇಳಿಕೆಯಾಗಿದೆ. ಟಾಟಾ ಮೋಟಾರ್ಸ್ ಶೇಕಡಾ 47 ರಷ್ಟು ಮಾರಾಟ ಇಳಿಕೆಯಾಗಿದೆ.