ಟೊಯೊಟಾ ಗ್ಲಾಂಝಾ G MT ಕಾರು ಬಿಡುಗಡೆ; ಬೆಲೆ 6.98 ಲಕ್ಷ!

By Web Desk  |  First Published Oct 5, 2019, 8:37 PM IST

ಟೊಯೊಟಾ ಗ್ಲಾಂಝಾ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದೆ. ಎಂಟ್ರಿ ಲೆವೆಲ್ ಕಾರು ಬಿಡುಗಡೆ ಮಾಡಿರುವು ಟೊಯೊಟಾ, ಈ ಹಿಂದಿನ ಕಾರಿಗಿಂತ 24,000 ರೂಪಾಯಿ ಕಡಿತಗೊಳಿಸಿದೆ. 


ನವದೆಹಲಿ(ಅ.05): ಮಾರುತಿ ಸುಜುಕಿ ಬಲೆನೊ ಕಾರು ಈಗಾಗಲೇ ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಟೊಯೊಟಾ ಗ್ಲಾಂಝಾ ಕಾರಾಗಿ ಬಿಡುಗಡೆಯಾಗಿದೆ. ಬೆಲೆನೊ ಮಾಡಿದ ಮಾಡಿದ ಮೋಡಿ ಗ್ಲಾಂಝಾ ಮಾಡಿಲ್ಲ ಅನ್ನೋದು ತಳ್ಳಿ ಹಾಕುವಂತಿಲ್ಲ. ಇದೀಗ ಗ್ಲಾಂಝಾ G MT  ವೇರಿಯೆಂಟ್ ಕಾರು ಬಿಡುಗಡೆಯಾಗಿದೆ. ಬೇಸ್ ಲೆವೆಲ್ ಕಾರಿನ ಬೆಲೆ 6.98 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಮೋದಿ ಕನಸಿಗೆ ಕೈಜೋಡಿಸಿದ ಟೊಯೊಟಾ, ಮಹೀಂದ್ರ!

Tap to resize

Latest Videos

undefined

ಎಂಟ್ರಿ ಲೆವೆಲ್ ಕಾರಾಗಿರುವ ಗ್ಲಾಂಝಾ G MT ಕಾರು ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರಾಗಿದೆ. ಈ ಹಿಂದೆ ಗ್ಲಾಂಝಾ  G MT(ಹೈಬ್ರಿಡ್) ಕಾರು ಬಿಡುಗಡೆಯಾಗಿದೆ. ಈ ಕಾರಿಗಿಂತ ನೂತನ ಬಿಡುಗಡೆಯಾಗಿರುವ G MT(ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್) ಕಾರಿನ ಬೆಲೆ 24,000 ರೂಪಾಯಿ ಕಡಿಮೆ.

ಇದನ್ನೂ ಓದಿ: ರೇಂಜ್ ರೋವರ್ ಬದಲು ಟೊಯೊಟಾ, ಪ್ರಧಾನಿ ಮೋದಿ ಕಾರು ಬದಲಾವಣೆ!

ನೂತನ ಕಾರು 1.2 ಲೀಟರ್ VVT ಪೆಟ್ರೋಲ್ ಎಂಜಿನ್ ಹೊಂದಿದ್ದು,  BS6 ನಿಯಮ ಪಾಲಿಸಿದೆ. 1197 cc, 4 ಸಿಲಿಂಡರ್ಹೊಂದಿರು ಗ್ಲಾಂಝಾ G MT  82 bhp ಪವರ್ ಹಾಗೂ 113 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  5- ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ   21.01 ಕಿ.ಮಿ ಮೈಲೇಜ್ ನೀಡಲಿದೆ. 

ಟೊಯೊಟಾ ಗ್ಲಾಂಝಾ ಕಾರಿನಲ್ಲಿ CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು  G ಹಾಗೂ V ಟ್ರಿಮ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 

click me!