
ನವದೆಹಲಿ(ಡಿ.31): ಹೊಸ ವರ್ಷದ ಸಂಭ್ರಮದಲ್ಲಿರುವವರಿಗೆ ಮತ್ತೊಂದು ಸಿಹಿ ಸುದ್ದಿ. ಟೊಯೊಟಾ ಸಂಸ್ಥೆ ಶೀಘ್ರದಲ್ಲೇ ಸುಪ್ರ ಸೂಪರ್ ಕಾರು ಬಿಡುಗಡೆ ಮಾಡಲಿದೆ. ಜನವರಿ 14, 2019ರಂದು ಹೊಸ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 2018ರಲ್ಲಿ ಸಂಚಲನ ಮೂಡಿಸಿದ ಬೈಕ್-ಜಾವಾಗೆ ಮೊದಲ ಸ್ಥಾನ!
ಬಿಡುಗಡೆಗೂ ಮುನ್ನವೇ ಟೊಯಾಟ ಸುಪ್ರ ಕಾರಿನ ಫೋಟೋ ಲೀಕ್ ಆಗಿದೆ. ಸ್ಪೋರ್ಟ್ಸ್ ಕಾರು ಭಾರತದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎನ್ನಲಾಗುತ್ತಿದೆ. 2014ರ ಮೋಟಾರ್ ಶೋನಲ್ಲಿ ಟೊಯೊಟಾ FT1 ಕಾನ್ಸೆಪ್ಟ್ ಪರಿಚಯಿಸಲಾಗಿತ್ತು. ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ಕಾರು ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ವೆಸ್ಪಾ, ಎಪ್ರಿಲಿಯಾ 150 ABS,125 CBS ಸ್ಕೂಟರ್ ಬಿಡುಗಡೆ!
3.0 ಲೀಟರ್, ಸಿಕ್ಸ್ ಸಿಲಿಂಡರ್ ಎಂಜಿನ್, 380bhp ಪವರ್ ಹೊಂದಿರುವ ನೂತನ ಸುಪ್ರಾ 1500 ಕೆಜಿ ತೂಕವಿದೆ. ನೂತನ ಕಾರಿನ ಬೆಲೆ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆಡಿಲ ಟಿಟಿ, BMW M2,ಜಾಗ್ವಾರ್ F-ಟೈಪ್, ನಿಸಾನ್ GT-R ಕಾರುಗಳಿಗೆ ಪೈಪೋಟಿ ನೀಡಲಿದೆ.