ದೆಹಲಿ ವಾಯು ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರ ಮತ್ತೆ ಸಮ ಹಾಗೂ ಬೆಸ ಸಂಖ್ಯೆ ವಾಹನ ಸ್ಕೀಮ್ ಜಾರಿಗೊಳಿಸಲು ಮತ್ತೆ ಚಿಂತನೆ ನಡೆಸಿದೆ. ಕಳೆದ ಬಾರಿ ಅರ್ಧಕ್ಕೆ ಕೈಬಿಟ್ಟ ಈ ನಿರ್ಧಾರವನ್ನ ಆಪ್ ಸರ್ಕಾರ ಮತ್ತೆ ತರೋ ಮೂಲಕ ಮಾಲಿನ್ಯ ನಿಯಂತ್ರಿಸಲು ಮುಂದಾಗಿದೆ.
ದೆಹಲಿ(ಡಿ.31): ದೆಹಲಿ ವಾಯು ಮಾಲಿನ್ಯ ಮೀತಿ ಮೀರಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ವರದಿ ಪ್ರಕಾರ, ದೆಹಲಿಯ 16 ಕಡೆಗಳಲ್ಲಿ ಮಾಲಿನ್ಯ ಮೀತಿ ಮೀರಿದ್ದು(ವೆರಿ ಬ್ಯಾಡ್), 22 ಕಡೆಗಳಲ್ಲಿ ಬ್ಯಾಡ್ ಹಾಗೂ 7 ಕಡೆಗಳಲ್ಲಿ ಅಪಾಯದ ಮಟ್ಟ ತಲುಪಿದೆ.
ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕ್ಲಾಸಿಕ್ ಬೈಕ್ ಯಾವುದು?
undefined
ಕಳೆದ ಒಂದು ವರ್ಷದಿಂದ ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಮಗಳನ್ನ ಕೈಗೊಳ್ಳುತ್ತಿದ್ದರೂ ಯಾವುದು ಪರಿಣಾಮಕಾರಿಯಾಗುತ್ತಿಲ್ಲ. ಇದೀಗ ದೆಹಲಿ ಸರ್ಕಾರ ಮತ್ತೆ ವಾಹನ ಓಡಾಟದ ಸಮ-ಬೆಸ ಸಂಖ್ಯೆ ಸ್ಕೀಮ್ ಜಾರಿಗೆ ತರಲು ಚಿಂತಿಸಿದೆ.
ಇದನ್ನೂ ಓದಿ: ಗುಡ್ ಬೈ 2018: ಈ ವರ್ಷ ಬಿಡುಗಡೆಯಾದ ಟಾಪ್ 6 ದುಬಾರಿ ಕಾರು!
ಕಳೆದ ವರ್ಷ ಜಾರಿಗೆ ತರವಾದ ಸಮ-ಬೆಸ ಸಂಖ್ಯೆ ವಾಹನ ಸ್ಕೀನ್ ಟೀಕೆಗೂ ಗುರಿಯಾಗಿತ್ತು. ಈ ಸ್ಕೀಮ್ ಪ್ರಕಾರ, ವಾಹನದ ನಂಬರ್ ಸಮ ಸಂಖ್ಯೆಯಿಂದ ಅಂತ್ಯವಾಗೋ ವಾಹನಗಳಿಗೆ ವಾರದಲ್ಲಿ ನಿರ್ದಿಷ್ಠ ದಿನಗಳು, ಇನ್ನು ಬೆಸ ಸಂಖ್ಯೆಯಿಂದ ಅಂತ್ಯವಾಗೋ ವಾಹನಗಳಿಗೆ ನಿರ್ದಿಷ್ಟ ದಿನದಲ್ಲಿ ಮಾತ್ರ ಓಡಾಟ ನಡೆಸಬೇಕು.
ಇದನ್ನೂ ಓದಿ: ನ್ಯಾನೋಗಿಂತ ಮೊದಲು ಭಾರತದಲ್ಲಿತ್ತು 12ಸಾವಿರ ರೂಪಾಯಿ ಮೀರಾ ಕಾರು!
ಮಿತಿ ಮೀರಿದ ವಾಹನಗಳೂ ಕೂಡ ದೆಹಲಿ ಮಾಲಿನ್ಯಕ್ಕೆ ಪ್ರಮುಖ ಕಾರಣ. ಆದರೆ ಬೆಸ ಹಾಗೂ ಸಮ ಸಂಖ್ಯೆ ಸ್ಕೀಮ್ ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ. ಕೈಗಾರಿಕೆ ಸೇರಿದಂತೆ ಇತರ ಅಂಶಗಳೂ ಕೂಡ ದೆಹಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗುತ್ತಿದೆ.