ಕಿಚನ್, ಬಾಥ್‌ರೂಂ, ಟಾಯ್ಲೆಟ್; ಈ ಇನೋವಾ ಕಾರಿನಲ್ಲಿ ಎಲ್ಲವೂ ಇದೆ!

By Suvarna News  |  First Published Oct 13, 2020, 3:51 PM IST

ಅಡುಗೆ ಕೋಣೆ, ಬೆಡ್ ರೂಂ, ಬಾಥ್ ರೂಂ, ಟಾಯ್ಲೆಟ್ ಎಲ್ಲವೂ ಈ ಇನೋವಾ ಕಾರಿನಲ್ಲಿದೆ. ಒಂದು ಸಣ್ಣ ಮನೆಯಂತೆ ಕಾರನ್ನು ಪರಿವರ್ತಿಸಲಾಗಿದೆ. ಪ್ರವಾಸ ತೆರಳುವರಿಗೆ ಈ ಇನೋವಾ ಕಾರು ಸೂಕ್ತವಾಗಿದೆ. ಹೀಗೆ ಕಾರನ್ನೇ ಮನೆಯಂತೆ ಬದಲಾಯಿಸಿದ ಹಾಗೂ ಈ ಕಾರಿನ ವಿಶೇಷತೆಗಳ  ಕುರಿತ ಮಾಹಿತಿ ಇಲ್ಲಿದೆ.
 


ಮನಾಲಿ(ಅ.13): ಸೆಲೆಬ್ರೆಟಿಗಳು ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ತಮ್ಮ ವ್ಯಾನಿಟಿ ವ್ಯಾನ್ ಮಾಡಿಫಿಕೇಶನ್ ಮಾಡಿಸಿಕೊಳ್ಳುತ್ತಾರೆ. ದೊಡ್ಡ ವಾಹನವನ್ನು ತಮಮಗೆ ಬೇಕಾದ ರೀತಿಯಲ್ಲಿ ಡೈನಿಂಗ್ ರೂಂ, ವಿಶ್ರಾಂತಿ ಕೊಠಡಿ, ಮೇಕ್ ಅಪ್ ರೂಂ, ಟಾಯ್ಲೆಟ್, ಬಾತ್‌ರೂಂ ಸೇರಿದಂತೆ ಎಲ್ಲವೂ ಈ ವ್ಯಾನಿಟಿ ವ್ಯಾನ್‌ನಲ್ಲಿರುತ್ತೆ. ಆದರೆ ಇದೀಗ  ಟೊಯೋಟಾ ಇನೋವಾ ಕಾರನ್ನೇ ಸಣ್ಣ ಮನೆಯನ್ನಾಗಿ ಪರಿವರ್ತಿಲಾಗಿದೆ.

Latest Videos

undefined

ಎಲೆಕ್ಟ್ರಿಕ್ ವಾಹನ ಖರೀದಿಸುವವರ ಖಾತೆಗೆ ಸಬ್ಸಿಡಿ ಹಣ; ಸರ್ಕಾರ ಮಹತ್ವದ ನಿರ್ಧಾರ!...

ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹೊಟೆಲ್ ಉದ್ಯಮ ನಡೆಸುತ್ತಿರುವ ಕೇರಳ ಅದ್ಬುಕಾ ಈ ಇನೋವಾ ಕಾರಿನ ಹಿಂದಿನ ಸಾಹಸಿ. ಪ್ರವಾಸಿ ತಾಣಾಗಿರುವ ಮನಾಲಿಯಲ್ಲಿ ಹೊಟೆಲ್ ನಡೆಸುತ್ತಿರುವ ಅಬ್ದುಕಾ ಸ್ವತಃ ಕುಟುಂಬದೊಂದಿಗೆ ಪ್ರವಾಸ ತೆರಳುವಾಗಿ ಯಾವುದೇ ಚಿಂತೆಯಿಲ್ಲದೆ ಪ್ರಯಾಣ ಮಾಡಲು ಇನೋವಾ ಕಾರನ್ನು ಮನೆಯಂತೆ ಮಾಡಿಫೈ ಮಾಡಲಾಗಿದೆ.

ಮೋಟಾರು ವಾಹನ ಕಾಯ್ದೆ: ಮೊಬೈಲ್ ಬಳಕೆಗೆ ಅವಕಾಶ ಆದರೆ ಷರತ್ತು ಅನ್ವಯ!

ಇನೋವಾ ಕಾರಿನ ಒಳಭಾಗದ ವಿನ್ಯಸ ಸಂಪೂರ್ಣ ಬದಲಾಯಿಸಲಾಗಿದೆ. ಕಾರಿನ ಒಳಬಾಗದಲ್ಲಿ ಮಲಗುವ  ಕೋಣೆ ಮಾಡಲಾಗಿದೆ. ಇನ್ನು ಹಿಂಭಾಗದಲ್ಲಿ ಅಡುಗೆ ಕೋಣೆ ಕೂಡ ಇದೆ. ಸ್ಟೌ ಮೂಲಕ ಯಾವುದೇ ತಿನಿಸು ತಯಾರಿಸಿ ಸೇವಿಸಬಹುದು. ಇನ್ನು ಪ್ರವಾಸದ ವೇಳೆ ಬಹುತೇಕರಿಗೆ ಕಾಡುವ ಅತೀ ದೊಡ್ಡ ಸಮಸ್ಯೆ ಟಾಯ್ಲೆಟ್. ಹೀಗಾಗಿ ಈ ಕಾರಿನಲ್ಲಿ ಟಾಯ್ಲೆಟ್ ವ್ಯವಸ್ಥೆ ಕೂಡ ಇದೆ.

 

ಮಾಡಿಫಿಕೇಶನ್ ಬಳಿಕ ಇನೋವಾ ಕಾರಿನ ಸಂಖ್ಯೆ 5. ಹಿಂಭಾಗದಲ್ಲಿ ರಾಕ್ ರೀತಿ ಎಳೆದರೆ ಕಿಚನ್ ರೂಂ ತೆರೆದುಕೊಳ್ಳುತ್ತದೆ. ಟಾಯ್ಲೆಟ್ ಕೂಡ ಇದೇ ರೀತಿ ವ್ಯವಸ್ಥೆ ಮಾಡಲಾಗಿದೆ. ಕಾರಿನೊಳಗೆ 40 ಲೀಟರ್ ನೀರು ಶೇಖರಣೆಗೊಳ್ಳುವ ಹಾಗೂ ಕಾರಿಗೆ ಹೊಂದಿಕೊಳ್ಳುವ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಪೈಪ್ ಮೂಲಕ ಕಿಚನ್  ಹಾಗೂ ಟಾಯ್ಲೆಟ್‌ಗೆ ನೀರು ಸಪ್ಲೈ ಮಾಡಲಾಗಿದೆ.

ರಾತ್ರಿ ವೇಳೆ ಅಡುಗೆ ಅಥವಾ ಇತರ ಯಾವುದೇ ಕಾರ್ಯಕ್ಕೆ ಅಡಚಣೆಯಾಗದ ರೀತಿ ಬ್ಯಾಟರಿ ಹಾಗೂ ಇನ್ವರ್ಟರ್ ಮೂಲಕ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಡೇರಿ ರೀತಿಯ ಬಾತ್‌ರೂಂ ವ್ಯವಸ್ಥೆ ಮಾಡಲಾಗಿದ್ದು, ಕಾರಿನಿಂದ ತೆಗೆದು ಹೊರಭಾಗದಲ್ಲಿ ಫಿಕ್ಸ್ ಮಾಡಿ ಸ್ನಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮುತುವರ್ಜಿ ವಹಿಸಿ, ಡಿಸೈನ್ ಮಾಡಿ ನೂತನ ಮಾಡಿಫಿಕೇಶನ್ ಮಾಡಲಾಗಿದೆ. ಇದೀಗ ಅಬ್ದುಕಾ ಪ್ರವಾಸಕ್ಕೆ ರೆಡಿಯಾಗಿದ್ದಾರೆ. 

click me!