ಟೊಯೊಟಾ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್ ಟೀಸರ್ ಬಿಡುಗಡೆ!

By Suvarna News  |  First Published Jan 2, 2020, 4:10 PM IST

ಟೊಯೊಟಾ ಇನೋವಾ ಕ್ರೈಸ್ಟಾ ಕಾರಿನ ಪ್ರತಿಸ್ಪರ್ಧಿಯಾಗಿ ಕಿಯಾ ಕಾರ್ನಿವಲ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಕಿಯಾ ಮೋಟಾರ್ಸ್ ನೂತನ ಕಾರು ಇದೀಗ ಇನೋವಾ ಸೇರಿದಂತೆ  MPV  ಕಾರುಗಳಿಗೆ ನಡುಕು ಹುಟ್ಟಿಸಿದೆ. ಕಾರ್ನಿವಲ್ ಕಾರಿನ ವಿವರ ಇಲ್ಲಿದೆ.


ಅನಂತಪುರಂ(ಜ.02): ಭಾರತದಲ್ಲಿ MPV ವಾಹನ ವಿಭಾಗದಲ್ಲಿ ಟೊಯೊಟಾ ಇನೋವಾಗೆ ಪ್ರತಿಸ್ಪರ್ಧಿಯಾಗಿ ಕೆಲ ಕಾರುಗಳು ಬಿಡುಗಡೆಯಾಗಿದೆ. ಆದರೆ ಯಾವುದೂ ಕೂಡ ಇನೋವಾ ಕಾರಿಗೆ ಸವಾಲು ಒಡ್ಡಲಿಲ್ಲ. ಇದೀಗ ಕಿಯಾ ಮೋಟಾರ್ಸ್ ನೂತನ ಇನೋವಾ ಕ್ರೈಸ್ಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಕಾರ್ನಿವಲ್ 
ಅನಂತಪುರಂ(ಜ.02): ಭಾರತದಲ್ಲಿ MPV ಕಾರು ಬಿಡುಗಡೆಯಾಗುತ್ತಿದೆ. 

Tap to resize

Latest Videos

undefined

ಇದನ್ನೂ ಓದಿ: ಕಿಯಾ ಸೆಲ್ಟೋಸ್ ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ!

ಕಿಯೋ ಮೋಟಾರ್ಸ್ ಕಂಪನಿಯ ಸೆಲ್ಟೋಸ್ ಕಾರು ಗರಿಷ್ಠ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. ಸೆಲ್ಟೋಸ್ ಯಶಸ್ಸಿನ ಬೆನ್ನಲ್ಲೇ ಕಾರ್ನಿವಲ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಕಾರ್ನಿವಲ್ ಕಾರಿನ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲೇ ಪ್ರತಿಸ್ಪರ್ಧಿ ಇನೋವಾಗೆ ನಡುಕ ಹುಟ್ಟಿಸಿದೆ.

 

ಇದನ್ನೂ ಓದಿ: 2019ರಲ್ಲಿ ಮಿಂಚಿದ SUV ಕಾರು ಲಿಸ್ಟ್; ಅಗ್ರಸ್ಥಾನದಲ್ಲಿ ವೆನ್ಯು, ಸೆಲ್ಟೋಸ್!.

ವಿಡಿಯೋದಲ್ಲಿ ಕಾರ್ನಿವಲ್ ಕಾರು ಇನೋವಾ ಪ್ರತಿಸ್ಪರ್ಧಿ ಮಾತ್ರವಲ್ಲ, ಲಕ್ಸುರಿ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಲಿದೆ. ವಿಡಿಯೋದಲ್ಲಿ ಕಾರಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ರೇರ್ ಸೀಟ್ ಹಾಗೂ ಡ್ಯುಯೆಲ್ ಪ್ಯಾನಲೆ ಎಲೆಕ್ಟ್ರಿಕ್ ಸನ್‌ರೂಫ್ ವಿವರ ನೀಡಲಾಗಿದೆ. 

ಇದನ್ನೂ ಓದಿ: 3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

ಸುರಕ್ಷತೆಗೂ ಗರಿಷ್ಠ ಆದ್ಯತೆ ನೀಡಲಾಗಿದೆ. ಏರ್‌ಬ್ಯಾಗ್,  ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD(ಎಲೆಕ್ಟ್ರಾನಿಕ್ ಬ್ರೇಕ್‌ ಫೋರ್ಸ್ ಡಿಸ್ಟ್ರಿಬ್ಯೂಶನ್, ಹಾಗೂ ESP(ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ) ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

ಕಿಯಾ ಕಾರ್ನಿವಲ್ ಕಾರು 2.2 ಲೀಟರ್ e-VGT  ಡೀಸೆಲ್ ಎಂಜಿನ್ ಹೊಂದಿದ್ದು, 199 Bhp ಪವರ್ ಹಾಗೂ 441 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 3.3 ಲೀಟರ್ ಪೆಟ್ರೋಲ್ ಎಂಜಿನ್,  276 Bhp ಪವರ್ 336 Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. ಕಾರ್ನಿವಲ್ ಕಾರಿನ ಬೆಲೆ ಟೊಯೊಟಾ ಕ್ರೈಸ್ಟಾ ಕಾರಿಗೆ ಪೈಪೋಟಿ ನೀಡುವಂತಿರಲಿದೆ ಎಂದು ಕಿಯೋ ಹೇಳಿದೆ.  

ಜನವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!