ಶುರುವಾಯ್ತು ಪೈಪೋಟಿ; ಭಾರತಕ್ಕೆ ಬರುತ್ತಿದೆ ಚೀನಾದ ಹವಲ್ ಕಾರು!

By Suvarna News  |  First Published Jan 1, 2020, 9:23 PM IST

2020 ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸತನ ನೀಡಲಿದೆ. ಕಾರಣ ಈ ವರ್ಷ ಹಲವು ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಇದರ ಜೊತೆ ಚೀನಾ ಮೂಲಕ ಕಾರುಗಳು ಭಾರತಕ್ಕೆ ಎಂಟ್ರಿಕೊಡುತ್ತಿದೆ. ಇದೀಗ ಚೀನಾದ ಜನಪ್ರಿಯ ಕಾರು ಕಂಪನಿ ಭಾರತದಲ್ಲಿ ಮೊದಲ ಕಾರು ಬಿಡುಗಡೆಗೆ ನಿರ್ಧರಿಸಿದೆ.


ನವದೆಹಲಿ(ಜ.01): ಹೊಸ ವರ್ಷದಲ್ಲಿ ಹೊಸ ಹೊಸ ಬ್ರ್ಯಾಂಡ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಭಾರತದಲ್ಲಿ ಹವಲ್ ಬ್ರ್ಯಾಂಡ್ ಕಾರು ಪರಿಚಯಿಸಲು ಮುಂದಾಗಿದೆ. ಚೀನಾ ಮೂಲದ ಬ್ರಿಟೀಷ್ ಕಾರು ಎಂಜಿ ಹೆಕ್ಟರ್ ಭಾರತದಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಗ್ರೇಟ್ ವಾಲ್ ಮೋಟಾರ್ಸ್ ಹವಲ್ ಬ್ರ್ಯಾಂಡ್ ಕಾರು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ: ಟಾಟಾ ಮೋಟಾರ್ಸ್ ಕ್ರಾಂತಿ; ಬಿಡುಗಡೆಯಾಗಲಿದೆ 12 ಹೊಸ ಕಾರು!

Tap to resize

Latest Videos

undefined

ಗ್ರೇಟ್ ವಾಲ್ ಮೋಟಾರ್ಸ್  ಭಾರತದಲ್ಲಿ ಘಟಕ ಪ್ರಾರಂಭಿಸಲು ಮುಂದಾಗಿದೆ. ಈ ಮೂಲಕ ಕಿಯೋ ಮೋಟಾರ್ಸ್ ರೀತಿಯಲ್ಲೇ ಭಾರತದಲ್ಲೇ ಕಾರು ಉತ್ಪಾದನೆಗೆ ಮುಂದಾಗಿದೆ. ಚೀನಾದಲ್ಲಿ ಹವಲ್ ಕಾರುಗಳಾದ e H4, H6 ಹಾಗೂ H9 ಅತ್ಯಂತ ಜನಪ್ರಿಯ SUV ಕಾರುಗಳಾಗಿವೆ. ಇದೇ ಕಾರು ಕೊಂಚ ಬದಲಾಣೆಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಟಾಟಾ ಅಲ್ಟ್ರೋಝ್ to ಡಿಫೆಂಡರ್: 2020ರಲ್ಲಿ ಬಿಡುಗಡೆಯಾಗಲಿರುವ ಕಾರು ಲಿಸ್ಟ್!

ಹವಲ್ H4 ಕಾರು ಹ್ಯುಂಡೈ ಕ್ರೆಟಾಗಿಂತ ದೊಡ್ಡದಿದೆ. ಬದಿಯಿಂದ ನೋಡಿದರೆ ಜೀಪ್ ಕಂಪಾಸ್ ರೀತಿ ಕಾಣುತ್ತದೆ. 2021ರಲ್ಲಿ ಹವಲ್  H4 ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಕಾರು 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 170hp ಪವರ್ ಹೊಂದಿದೆ. ಭಾರತದಲ್ಲಿ ಇದೇ ಕಾರು 1.3 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪರಿಚಯಿಸಲು ನಿರ್ಧರಿಸಲಾಗಿದೆ.

ಜೀಪಿಗೆ 50ನೇ ವರ್ಷದ ಹುಟ್ಟು ಹಬ್ಬ; ಗ್ರಾಮಕ್ಕೆ ಸಿಹಿ ಹಂಚಿದ ಮಾಲೀಕ!

ಕಾರಿನ ತಂತ್ರಜ್ಞಾನ ಹಾಗೂ ಆಕರ್ಷಕ ಲುಕ್‌ನಲ್ಲಿ ಚೀನಾ ಹೆಚ್ಚು ಮುತುವರ್ಜಿ ವಹಿಸಲಿದೆ. ಹೀಗಾಗಿ ಭಾರತದಲ್ಲಿ ಮತ್ತೊಂದು ಆಕರ್ಷಕ ಕಾರು ಬಿಡುಗಡೆಯಾಗಲಿದೆ. ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲಿರುವ ಗ್ರೇಟ್ ವಾಲ್ ಮೋಟಾರ್ಸ್, ಭಾರತದಲ್ಲಿನ ಕಾರುಗಳಿಗೆ ಪೈಪೋಟಿ ನೀಡಲಿದೆ.


 

click me!