ವರ್ಷಾಂತ್ಯಕ್ಕೆ ಟಯೋಟಾ ಆಫರ್‌ - 1 ಲಕ್ಷ ರೂಪಾಯಿ ರಿಯಾಯಿತಿ!

Published : Dec 26, 2018, 03:08 PM IST
ವರ್ಷಾಂತ್ಯಕ್ಕೆ  ಟಯೋಟಾ ಆಫರ್‌ - 1 ಲಕ್ಷ ರೂಪಾಯಿ ರಿಯಾಯಿತಿ!

ಸಾರಾಂಶ

ವರ್ಷಾಂತ್ಯದಲ್ಲಿ ಕಾರು, ಬೈಕ್‌ಗಳನ್ನು ಕೊಳ್ಳುವವರ ಸಂಖ್ಯೆ ಇಳಿಕೆಯಾಗುವುದು ಸಾಮಾನ್ಯ. ಆದರೆ ಟಯೋಟೋ ಕಿರ್ಲೊಸ್ಕರ್‌ ಮೋಟಾ​ರ್ಸ್ ಹೊಸ ಆಫರ್‌ ಘೋಷಣೆ ಮಾಡಿ ಕಾರ್‌ ಪ್ರಿಯರ ಸಂತಸ ಹೆಚ್ಚಿಸಿದೆ. ಅದೇನು ಗೊತ್ತೇ ಹೊಸ ಆಫರ್‌. ಇಲ್ಲಿದೆ ನೋಡಿ.

ನವದೆಹಲಿ(ಡಿ.26): ನ್ಯೂ ಇಯರ್‌ನಲ್ಲಿ ಎಲ್ಲಿ ನೋಡಿದರು ಆಫರ್‌ಗಳು ಇದ್ದೇ ಇರುತ್ತದೆ. ಅದರಂತೆ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯ ಕಡೆಯಿಂದಲೂ 2018ರ ವರ್ಷಾಂತ್ಯದಲ್ಲಿ ಗ್ರಾಹಕರಿಗೆ ಆಫರ್‌ ನೀಡಿದ್ದಾರೆ. ಟೊಯೊಟಾ ಕಂಪನಿಯ ಆಯ್ದ ಪ್ರಾಡಕ್ಟ್ಗಳಿಗೆ ಈ ಆಫರ್‌ ನೀಡಿದ್ದಾರೆ. ಇದು ಈ ತಿಂಗಳ ಕೊನೆಗೆ ಅಂದರೆ ಡಿಸೆಂಬರ್‌ 31ರ ವರೆಗೆ ಈ ಆಫರ್‌ಗಳು ಇರಲಿದೆ.

ಇದನ್ನೂ ಓದಿ: ಕಾರು, ಬಸ್ಸು, ಟ್ರಕ್‌ಗಳಿಗೆ ಹೊಸ ನಿಯಮ-2019ರಿಂದ ಜಾರಿ-ನಿಮಗಿದು ತಿಳಿದಿರಲಿ!

ಕ್ವಾಲಿಟಿ, ಕಂಫರ್ಟ್‌ ಹಾಗೂ ಸುರಕ್ಷತೆಯಲ್ಲಿ ಈಗಾಗಲೇ ಹೆಸರಾಗಿರುವ ಟೊಯೊಟಾ ಕಂಪನಿ ಈಗ ವರ್ಷಾಂತ್ಯಕ್ಕೆ ‘ಕಸ್ಟಮರ್‌ ಫಸ್ಟ್‌’ ಎಂಬ ಆಫರ್‌ ಹೊರ ತಂದಿದೆ. ಇದರಲ್ಲಿ ಬೈ ನೌ ಆ್ಯಂಡ್‌ ಪೇ ಇನ್‌ ಮಾರ್ಚ್ 2019 ಎಂಬ ಹೊಸ ಪ್ಲಾನ್‌ ತಂದಿದೆ. ಈಗ ಟೊಯೊಟಾದ ಆಯ್ದ ಮಾಡೆಲ್‌ ಕಾರ್‌ಗಳನ್ನು ಈಗ ಕೊಂಡುಕೊಂಡರೆ ಅದರ ಹಣವನ್ನು ಮಾರ್ಚ್ 2019ರಲ್ಲಿ ಪಾವತಿಸಬಹುದಾಗಿದೆ.

ಇದನ್ನೂ ಓದಿ: ಜಾವಾ ಮುಂಗಡ ಬುಕ್ಕಿಂಗ್‌, ಟೆಸ್ಟ್‌ ರೈಡ್ ಶುರು-ಇನ್ನೇಕೆ ತಡ!

ಈ ಆಫರ್‌ನಲ್ಲಿ ಹೊಸದಾಗಿ ಮಾರುಕಟ್ಟೆಗೆ ಲಾಂಚ್‌ ಮಾಡಿರುವ ಯಾರಿಸ್‌ ಕಾರ್‌ಗೆ 1 ಲಕ್ಷದ ವರೆಗಿನ ಬೆನಿಫೆಟ್‌ ಸಿಗಲಿದೆ. ಅದರಂತೆ ಕೊರೊಲ್ಲಾ ಆಲ್ಟಿಸ್‌ ಕಾರ್‌ಗೆ 1,10,000, ಫಾರ್ಚುನ್‌ ಕಾರ್‌ಗೆ 45,000 ರು. ವರೆಗೆ ಉಳಿತಾಯ ಮಾಡಬಹುದಾದ ಸ್ಕೀಂಗಳಿವೆ. ಇನ್ನು ಎಟಿಯೋಸ್‌ನಲ್ಲಿ 38 ಸಾವಿರ ರು, ಲಿವಾದಲ್ಲಿ 28 ಸಾವಿರ ರು.ಗಳ ಉಳಿತಾಯ ಮಾಡಬಹುದಾಗಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ