ಟಾಟಾ ಹರಿಯರ್ ಕಾರು ಬಿಡುಗಡೆ ದಿನಾಂಕ ಪ್ರಕಟ- ಇಮ್ಮಡಿಯಾಗಿದೆ ಕುತೂಹಲ

Published : Dec 24, 2018, 05:24 PM IST
ಟಾಟಾ ಹರಿಯರ್ ಕಾರು ಬಿಡುಗಡೆ ದಿನಾಂಕ ಪ್ರಕಟ- ಇಮ್ಮಡಿಯಾಗಿದೆ ಕುತೂಹಲ

ಸಾರಾಂಶ

ನೂತನ ಟಾಟಾ ಹರಿಯರ್ ಕಾರು ಬಿಡುಗಡೆ ಕುತೂಹಲ ಹೆಚ್ಚಾಗಿದೆ. ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿರುವ ಟಾಟಾ ಹರಿಯರ್ ಕಾರು, ಕಳೆದ ಆಕ್ಟೋಬರ್‌ನಲ್ಲಿ ಬುಕಿಂಗ್ ಆರಂಭಗೊಂಡಿತ್ತು. 

ನವದೆಹಲಿ(ಡಿ.24): ಟಾಟಾ ಹರಿಯರ್ SUV ಕಾರು ಬಿಡುಗಡೆ ದಿನಾಂಕ ಪ್ರಕಟಗೊಂಡಿದೆ. ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಕಾರು ಈಗಾಗಲೇ ಗ್ರಾಹಕರ ಕುತೂಹಲ ಡಬಲ್ ಮಾಡಿದೆ. ಜನವರಿ 23, 2019ರಂದು ಟಾಟ ಹರಿಯರ್ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮೂಲಕ ಜೀಪ್ ಕಂಪಾಸ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಟಾಟಾ ಹರಿಯರ್ ಬುಕಿಂಗ್ ಆರಂಭ- SUV ಇತರ ಕಾರಿಗಿಂತ ಹೇಗೆ ಭಿನ್ನ?

2018ರ ಅಕ್ಟೋಬರ್‌ನಲ್ಲಿ ಟಾಟಾ ಹರಿಯರ್ ಕಾರು ಬುಕಿಂಗ್ ಆರಂಭಗೊಂಡಿತು. 30,000 ರೂಪಾಯಿ ನೀಡಿ ಟಾಟಾ ಹರಿಯರ್ ಕಾರು ಬುಕಿಂಗ್ ಮಾಡೋ ಅವಕಾಶ ನೀಡಿತ್ತು. ಇನ್ನೊಂದೇ ತಿಂಗಳಲ್ಲಿ ಟಾಟಾ ಹರಿಯರ್ ಕಾರು ರಸ್ತೆಗಿಳಿಯಲಿದೆ. 

ಇದನ್ನೂ ಓದಿ: 30 ಸಾವಿರ ಪಾವತಿಸಿ ಟಾಟಾ ಹರಿಯರ್ ಕಾರು ಬುಕ್ ಮಾಡಿ!​​​​​​​

ನೂತನ ಟಾಟಾ ಹರಿಯರ್ ಕಾರು 2.0 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ವಿಶೇಷ ಅಂದರೆ ಇದು ಕ್ರಿಯೊಟೆಕ್ 2.0 ಎಂಜಿನ್. ಕ್ರಿಯೊಟೆಕ್ ರಾಕೆಟ್ ಎಂಜಿನ್‌ನಿಂದ ಸ್ಪೂರ್ತಿ ಪಡೆದು ಈ ಟಾಟಾ ಹರಿಯರ್ ಎಂಜಿನ್ ತಯಾರಿಸಲಾಗಿದೆ. 5 ಸೀಟರ್ ಹರಿಯರ್ ಕಾರು 140 ಬಿಹೆಚ್‌ಪಿ ಪವರ್ ಹೊಂದಿದ್ದರೆ, 7 ಸೀಟರ್ ಹರಿಯರ್ ಕಾರು 170 ಬಿಹೆಚ್‌ಪಿ ಪವರ್ ಹೊಂದಿದೆ. ಟಾಟಾ ಹೆಕ್ಸಾ ರೀತಿಯಲ್ಲೇ ಮಲ್ಟಿ ಡ್ರೈವ್ ಮೂಡ್ ತಂತ್ರಜ್ಞಾನ ಹೊಂದಿದೆ. 

ಇದನ್ನೂ ಓದಿ: 2018ರಲ್ಲಿ ಸಂಚಲನ ಮೂಡಿಸಿದ ಬೈಕ್-ಜಾವಾಗೆ ಮೊದಲ ಸ್ಥಾನ!

ನೂತನ ಟಾಟಾ ಹರಿಯರ್ ಕಾರು, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ. 12 ರಿಂದ 16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ