ಫಾಸ್ಟ್ಯಾಗ್ ಕಡ್ಡಾಯದ ಬಳಿಕ ಪ್ರತಿ ದಿನ ಟೋಲ್ ಕುರಿತ ಸುದ್ದಿಗಳು ಹೆಚ್ಚು ಸಂಚಲನ ಮೂಡಿಸುತ್ತಿದೆ. ಟೋಲ್ ಪಾವತಿಯನ್ನು ಕೇಂದ್ರ ಸರ್ಕಾರ ಡಿಜಿಟಲೀಕರಣ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಎಕ್ಸ್‌ಪ್ರೆಸ್ ಹೈವೇ ಟೋಲ್ ಬೆಲೆ ಹೆಚ್ಚಳ ಮಾಡಲಾಗಿದೆ.
ಮುಂಬೈ(ಫೆ.27): ಟೋಲ್ ಪಾವತಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಿದ ಬೆನ್ನಲ್ಲೇ ಟೋಲ್ ಬೆಲೆ ಹೆಚ್ಚಳ ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೈವೇ ಟೋಲ್ ಬೆಲೆ ಹೆಚ್ಚಳ ನಿರ್ಧಾರವನ್ನು ಮಹಾರಾಷ್ಟ್ರಯ ರಾಜ್ಯ ರಸ್ತೆ ಅಭಿವೃದ್ದಿ ನಿಗಮ (MSRDC) ಮಾಡಿದೆ.
ಫಾಸ್ಟ್ಯಾಗ್ ನಡೆಯಲ್ಲ ಹಣ ಕಟ್ಟು; ಪ್ರಶ್ನಿಸಿದ ಕಾರು ಚಾಲಕನ ಮೇಲೆ ಹಲ್ಲೆ!
ಎಪ್ರಿಲ್ 1, 2020ರಿಂದ ನೂತನ ದರ ಜಾರಿಗೆ ಬರಲಿದೆ ಎಂದು MSRDC ಹೇಳಿದೆ. ಪ್ರತಿ ವಾಹನಗಳ ವಿಭಾಗದಲ್ಲಿ ಬೆಲೆ ಹೆಚ್ಚಳ ಮಾಡಲಾಗಿದೆ. ಕನಿಷ್ಠ 40 ರೂಯಿಯಿಂದ ಗರಿಷ್ಠ 280 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.
ಫಾಸ್ಟ್ಯಾಗ್ ವ್ಯವಸ್ಥೆ ಬಂದ ಬಳಿಕ ಟೋಲ್‌ಗಳಲ್ಲಿ ಕಾಯುವಿಕೆ ಹೆಚ್ಚಳ!
ಕಾರು, ವ್ಯಾನ್, SUV, MPV ಕಾರುಗಳಾದ ಲೈಟ್ ಮೋಟಾರ್ ಟೋಲ್ ಶುಲ್ಕ 230 ರೂಪಾಯಿಂದ 270 ರೂಪಾಯಿಗೆ ಏರಿಸಲಾಗಿದೆ. ಮಿನಿ ಬಸ್‌ಗೆ 355 ರೂಪಾಯಿಂದ 420 ರೂಪಾಯಿ ಏರಿಸಲಾಗಿದೆ. ಟ್ರಕ್ಸ್(2 ಎಕ್ಸಲ್) ಟೋಲ್ ಶುಲ್ಕವನ್ನು 493 ರೂಪಾಯಿಂದ 580 ರೂಪಾಯಿಗೆ ಏರಿಕೆ ಮಾಡಲಾಗಿದೆ. ಬಸ್ ಶುಲ್ಕವನ್ನು 675 ರೂಪಾಯಿಂದ 797 ರೂಪಾಯಿಗೆ ಏರಿಲಾಗಿದೆ. ಟ್ರಕ್ಸ್(2ಕ್ಕಿಂತ ಹೆಚ್ಚು ಏಕ್ಸಲ್) ಶುಲ್ಕ 1168 ರೂಪಾಯಿಂದ 1380 ರೂಪಾಯಿಗೆ ಹೆಚ್ಚಿಸಲಾಗಿದೆ. ಕ್ರೇನ್ ಹಾಗೂ ಮಲ್ಟಿ ಎಕ್ಸಲ್ ವಾಹನಗಳ ಶುಲ್ಕವನ್ನು 1555 ರೂಪಾಯಿಯಿಂದ 1835 ರೂಪಾಯಿಗೆ ಹೆಚ್ಚು ಮಾಡಲಾಗಿದೆ.