ಭಿನ್ನವಾಗಿ ಮಕ್ಕಳ ದಿನಾಚರಣೆ; ಹೋಂಡಾ ಡಿಜಿಟಲ್ ರಸ್ತೆ ಸುರಕ್ಷತಾ ಅಭಿಯಾನ!

By Suvarna NewsFirst Published Nov 13, 2020, 3:59 PM IST
Highlights

ಹೋಂಡಾದ ಡಿಜಿಟಲ್ ರಸ್ತೆ ಸುರಕ್ಷತಾ ಅಭಿಯಾನವು, ದೇಶದಾದ್ಯಂತ 17 ನಗರಗಳಲ್ಲಿನ 50 ಶಾಲೆಗಳ ಚಿಣ್ಣರಲ್ಲಿ ಅರಿವು ಮೂಡಿಸಲಿದೆ. ಹಿರಿಯರಿಗೆ ಚಿಣ್ಣರಿಂದ ಮಾರ್ಗದರ್ಶನ; ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಸಂಬಂಧ ತಮ್ಮ ಕುಟುಂಬದ ಸದಸ್ಯರಿಗೆ ಮಕ್ಕಳಿಂದಲೇ ಮಾರ್ಗದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗುರುಗ್ರಾಂ(ನ.13): ಮಕ್ಕಳ ದಿನಾಚರಣೆಯನ್ನು ವಿಶೇಷ ಹಾಗೂ ಭಿನ್ನವಾಗಿ ಆಚರಿಸಲು ಹೊಂಡಾ ಸಜ್ಜಾಗಿದೆ.  ಇಂದಿನ ಮಕ್ಕಳೇ ಭವಿಷ್ಯದ ಭಾರತವನ್ನು ರೂಪಿಸಲಿದ್ದಾರೆ ಎನ್ನುವುದರಲ್ಲಿ ಬಲವಾದ ನಂಬಿಕೆ ಇರಿಸಿರುವ ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಈ ವರ್ಷದ (2020) ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದೆ. ರಸ್ತೆಗಳಲ್ಲಿ ಸಂಚರಿಸುವ ‘ಪ್ರತಿಯೊಬ್ಬರಿಗೂ ಸುರಕ್ಷತೆ’ ಒದಗಿಸುವ ಕಾಳಜಿಯ ತನ್ನ ದೂರದೃಷ್ಟಿಗೆ ಅನುಗುಣವಾಗಿ ಹೋಂಡಾ, ವಿಶಿಷ್ಟ ಬಗೆಯ ‘ಪುಟ್ಟ ರಸ್ತೆ ಮಾರ್ಗದರ್ಶಕರು’ ಉಪಕ್ರಮದ ಮೂಲಕ ದೇಶದಾದ್ಯಂತ ಡಿಜಿಟಲ್ ರಸ್ತೆ ಸುರಕ್ಷತಾ ತಿಳಿವಳಿಕೆ ಮೂಡಿಸುವ ಆಂದೋಲನ ಹಮ್ಮಿಕೊಂಡಿದೆ. 

20 ದಿನದಲ್ಲಿ ದಾಖಲೆ ಬರೆದ ಹೊಂಡಾ H’ness ಬೈಕ್!.

ದೇಶದಾದ್ಯಂತ 6,100+ ಶಾಲೆಗಳ ಚಿಣ್ಣರು ಸುರಕ್ಷಿತ ರಸ್ತೆ ಬಳಕೆಯ ಆರೋಗ್ಯಕರ ಪ್ರವೃತ್ತಿಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ, ಸುರಕ್ಷಿತ ರೀತಿಯಲ್ಲಿ ರಸ್ತೆಗಳನ್ನು ಬಳಸುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುವುದು. ಇದರಿಂದಾಗಿ ಮಕ್ಕಳು ಇಂದಿನ ಸಮಾಜದ ನಿಜವಾದ ರಸ್ತೆ ಸುರಕ್ಷತಾ ರಾಯಭಾರಿಯೂ ಆಗಿರಲಿದ್ದಾರೆ.  ಇಷ್ಟೇ ಅಲ್ಲ,   ಬದುಕಿನ ಉದ್ದಕ್ಕೂ ಮಕ್ಕಳು ಜವಾಬ್ದಾರಿಯುತ ವಾಹನ ಸವಾರರಾಗಿರಲಿದ್ದಾರೆ.

ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು ಬಿಡುಗಡೆಗೆ ಮಾಡಲಿದೆ ಹೊಂಡಾ!.

ಕೋವಿಡ್-19 ಪಿಡುಗಿನ ನಂತರದ ಹೊಸ ಸಹಜ ಬದುಕಿನಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಹೊಸ ವಿಧಾನಗಳನ್ನು ಅಳವಡಿಸಿಕೊಂಡಿರುವ ಹೋಂಡಾ, ತನ್ನ ಡಿಜಿಟಲ್ ರಸ್ತೆ ಸುರಕ್ಷತಾ ಅರಿವು ಮೂಡಿಸುವ ಕಾರ್ಯಕ್ರಮವನ್ನು ‘ಹೋಂಡಾ ರಸ್ತೆ ಸುರಕ್ಷತಾ ಇ-ಗುರುಕುಲ’ ಹೆಸರಿನಡಿ ಜಾರಿಗೊಳಿಸುತ್ತಿದೆ. ಹೋಂಡಾ ರಸ್ತೆ ಸುರಕ್ಷತಾ ಇ-ಗುರುಕುಲ ಹೆಸರಿನಡಿ ಹೋಂಡಾ 4ರಿಂದ 8ನೇ ತರಗತಿಯ 6,100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಪುಟ್ಟ ರಸ್ತೆ ಸುರಕ್ಷತಾ ಮಾರ್ಗದರ್ಶಕರನ್ನಾಗಿ’ ತರಬೇತಿ ನೀಡಲಿದೆ. ಹೋಂಡಾದ ರಸ್ತೆ ಸುರಕ್ಷತಾ ತರಬೇತುದಾರರು ದೇಶದಾದ್ಯಂತ 17 ನಗರಗಳಲ್ಲಿ 3 ದಿನಗಳಲ್ಲಿ 50ಕ್ಕೂ ಹೆಚ್ಚು ಶಾಲೆಗಳಲ್ಲಿ ಈ ತರಬೇತಿ ನೀಡಲಿದ್ದಾರೆ.

‘ಮಕ್ಕಳು ದೇಶದ ನಿಜವಾದ ಶಕ್ತಿಯಾಗಿದ್ದಾರೆ. ಎಳೆ ವಯಸ್ಸಿನವರು ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸುವ ಪ್ರವೃತ್ತಿಯನ್ನು ಚೆನ್ನಾಗಿ ಮೈಗೂಡಿಸಿಕೊಳ್ಳುತ್ತಾರೆ ಎಂದು ಹೋಂಡಾ ಖಚಿತವಾಗಿ ನಂಬಿದೆ. ಮಕ್ಕಳ ದಿನಾಚರಣೆಯ ಶುಭ ಸಂದರ್ಭದಲ್ಲಿ, ಪುಟ್ಟ ರಸ್ತೆ ಮಾರ್ಗದರ್ಶಕರಲ್ಲಿ ರಸ್ತೆ ಸುರಕ್ಷತೆಯ ಮೂಲ ಪಾಠಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅವರು ತಾವು ಕಲಿತಿರುವುದನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜತೆ ಹಂಚಿಕೊಳ್ಳಲು ಅವಕಾಶವನ್ನೂ ಕಲ್ಪಿಸಲಿದೆ. ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಹೋಂಡಾದ ಕೇಂದ್ರಬಿಂದು ಆಗಿರಲಿದ್ದಾರೆ. ಸುರಕ್ಷಿತವಾಗಿ ವಾಹನ ಚಲಾಯಿಸುವುದರ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಹೋಂಡಾ ಬದ್ಧವಾಗಿದೆ ಎಂದು  ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಉಪಾಧ್ಯಕ್ಷ ಪ್ರಭು ನಾಗರಾಜ್ ಹೇಳಿದರು.

ಮಕ್ಕಳ ದಿನಾಚರಣೆ ಸಂದರ್ಭದಲ್ಲಿನ ಹೋಂಡಾದ ಪ್ರಮುಖ ಚಟುವಟಿಕೆ:
ಈ ಗಂಭೀರ ಸ್ವರೂಪದ ವಿಷಯವನ್ನು ರಂಜನೀಯವಾಗಿ ಕಲಿಸುವುದಕ್ಕೆ ಹೋಂಡಾದ ರಸ್ತೆ ಸುರಕ್ಷತಾ ತರಬೇತುದಾರರು ಆದ್ಯತೆ ನೀಡಲಿದ್ದಾರೆ. ರಸ್ತೆ ಸುರಕ್ಷತಾ ನಿಯಮಗಳನ್ನು ಚಿಣ್ಣರು ತಮ್ಮ ದಿನನಿತ್ಯದ  ಬದುಕಿನಲ್ಲಿ ಪ್ರಾಯೋಗಿಕ ಚಟುವಟಿಕೆಗಳೊಂದಿಗೆ  ಅಳವಡಿಸಿಕೊಳ್ಳುವುದರ ಬಗ್ಗೆ ಅವರು ತಿಳಿವಳಿಕೆ ಮೂಡಿಸಲಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಮಕ್ಕಳಲ್ಲಿ ಅರಿವು ಹೆಚ್ಚಿಸಲು ಒಂದು ಗಂಟೆಯ ಪರಸ್ಪರ ಸಂವಾದದ ಡಿಜಿಟಲ್ ತರಬೇತಿಯನ್ನು 3 ಹಂತಗಳಲ್ಲಿ ವಿಂಗಡಿಸಲಾಗಿದೆ. 

ಮಕ್ಕಳು ಸ್ವತಃ ಕಲಿಯುವ ರಸ್ತೆ ಸುರಕ್ಷತಾ ಸಲಹೆಗಳು:  ಮೊದಲ ಹಂತದಲ್ಲಿ ಚಿಣ್ಣರು ಅತ್ಯಂತ ಮಹತ್ವದ ಸಲಹೆಯಾದ ಸುರಕ್ಷಿತವಾಗಿ ರಸ್ತೆ ದಾಟುವುದು ಹೇಗೆ (ಝೀಬ್ರಾ ಕ್ರಾಸಿಂಗ್ ಬಳಸಿ ರಸ್ತೆ ದಾಟುವುದು, ರಸ್ತೆ ಬದಿಯಲ್ಲಿ ಸಾಕಷ್ಟು ಸ್ಥಳಾವಕಾಶ ಇರದಿರುವಾಗ ವಾಹನ ಬರುವ ವಿರುದ್ಧ ದಿಕ್ಕಿನಲ್ಲಿ ನಡೆಯುವುದು ಮುಂತಾದವು), ಸುರಕ್ಷಿತ ಸೈಕಲ್ ಚಾಲನೆ (ಬ್ರೇಕ್, ಗಂಟೆ, ಟೈರ್ ತಪಾಸಣೆ, ಸೈಕಲ್‍ನಲ್ಲಿ ಬೆಳಕಿನ ಪ್ರತಿಫಲಕಗಳು ಮುಂತಾದವು) ರಸ್ತೆ ಚಿಹ್ನೆ ಮತ್ತು ಗುರುತು (ಕಡ್ಡಾಯ ಪಾಲನೆಯ, ಎಚ್ಚರಿಕೆಯ ಮತ್ತು ಮಾಹಿತಿ ಚಿಹ್ನೆಗಳು). ಮಕ್ಕಳು ಶಾಲಾ ವಾಹನವನ್ನು ಸುರಕ್ಷಿತವಾಗಿ ಹೇಗೆ ಬಳಸಬೇಕು ಎನ್ನುವುದರ ಕುರಿತೂ ಮಾರ್ಗದರ್ಶನ ನೀಡಲಾಗುವುದು (ಓಡುವ ಬಸ್‍ನಲ್ಲಿ ಎದ್ದು ನಿಲ್ಲದಿರುವುದು, ಚಾಲಕನ ಗಮನವನ್ನು ಬೇರೆಡೆ ಸೆಳೆಯದಿರುವುದು)

ರಸ್ತೆಗಳಲ್ಲಿ ತಮ್ಮ ಪಾಲಕರು ಮತ್ತು ಸಂಬಂಧಿಕರು ಸುರಕ್ಷಿತವಾಗಿರಲು   ಮಕ್ಕಳು ಹೇಗೆ ಕೊಡುಗೆ ನೀಡಬಹುದು ಎನ್ನುವುದರ ಕಲಿಕೆ: ಎರಡನೇ ಹಂತದಲ್ಲಿ ರಸ್ತೆ ಸುರಕ್ಷತಾ ತರಬೇತುದಾರರು ಮಕ್ಕಳಿಗೆ ರಸ್ತೆ ಸುರಕ್ಷತೆಯ ಹಲವಾರು ಸಲಹೆಗಳನ್ನು ಬೋಧಿಸಲಿದ್ದಾರೆ. ಮಕ್ಕಳು ತಮ್ಮ ಪಾಲಕರು ಅಥವಾ ಸಂಬಂಧಿಕರ ಜತೆ ಪ್ರಯಾಣ ಮಾಡುವಾಗ ಹಿರಿಯರಿಗೆ ಸುರಕ್ಷತಾ ಕ್ರಮಗಳನ್ನು ತಿಳಿ ಹೇಳುವ ಅಥವಾ ಅವುಗಳ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವರು.   ಇದರಲ್ಲಿ ವಾಹನದ ತಪಾಸಣೆ (ಮನೆಯಿಂದ ಹೊರಡುವ ಮೊದಲು ವಾಹನದ ಬ್ರೇಕ್, ಟೈರ್, ಇಂಧನ ಮತ್ತು ದೀಪಗಳ ತಪಾಸಣೆ ನಡೆಸುವುದು), ವಾಹನ ಚಾಲನೆಯ ಗೇರ್ ಮತ್ತು ಸೀಟ್ ಬೆಲ್ಟ್ (ಸೂಕ್ತ ಬಟ್ಟೆ ಧರಿಸುವುದು, ಹೆಲ್ಮೆಟ್ ಧರಿಸುವುದರ ಮತ್ತು ಸೀಟ್ ಬೆಲ್ಟ್ ಬಳಸುವುದರ ಮಹತ್ವ) ವೇಗದ ಪಾತ್ರ (ಗರಿಷ್ಠ ವೇಗ ಮತ್ತು ಕನಿಷ್ಠ ವೇಗ) ಮತ್ತು ಕೆಲ ಸರಳ ಸ್ವರೂಪದ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು (ಕಾರ್ ಒಳಗೆ ಪ್ರವೇಶಿಸುವ, ಹೊರ ಬರುವ, ರಸ್ತೆಯಲ್ಲಿ ಆಕ್ರಮಣಕಾರಿ ಧೋರಣೆ ತಳೆಯದಿರುವುದು)   

ಪ್ರತಿಜ್ಞಾ ಸಮಾರಂಭ: ಕೊನೆಯಲ್ಲಿ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದರ ಮತ್ತು ತಮ್ಮ ಮನೆಯಲ್ಲಿ ರಸ್ತೆ ಸುರಕ್ಷತೆಯ ಮಾರ್ಗದರ್ಶಕರಾಗುವ ಕುರಿತು ಮಕ್ಕಳು ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. 

ರಸ್ತೆ ಸುರಕ್ಷತೆ ಉತ್ತೇಜಿಸುವಲ್ಲಿನ ಹೋಂಡಾದ ಪರಂಪರೆ: 
1970ರಲ್ಲಿ, ಸುರಕ್ಷಿತ ವಾಹನ ಚಾಲನೆಯ ಚಟುವಟಿಕೆಗಳನ್ನು ಉತ್ತೇಜಿಸುವ ಬಗ್ಗೆ ಕಾರ್ಯಪ್ರವೃತ್ತವಾದ ಮೊದಲ ವಾಹನ ತಯಾರಿಕಾ ಸಂಸ್ಥೆ ಇದಾಗಿದೆ. ಅಲ್ಲಿಂದಾಚೆಗಿನ 50 ವರ್ಷಗಳಲ್ಲಿ  ಹೋಂಡಾ, ಸವಾರರಿಗಷ್ಟೇ ಸುರಕ್ಷತಾ ಶಿಕ್ಷಣ ನೀಡಲು ಬದ್ಧವಾಗಿರದೆ, ರಸ್ತೆಗಳನ್ನು ಬಳಸುವ ಪ್ರತಿಯೊಬ್ಬರಿಗೂ ತಿಳಿವಳಿಕೆ ನೀಡುತ್ತಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಜಾಗತಿಕ ಘೋಷಣೆಯಾಗಿರುವ ‘ಪ್ರತಿಯೊಬ್ಬರಿಗೂ ಸುರಕ್ಷತೆ’ಯಡಿ  ಹೋಂಡಾ, ವಿಶ್ವದಾದ್ಯಂತ 41 ದೇಶಗಳಲ್ಲಿ ತನ್ನ ರಸ್ತೆ ಸುರಕ್ಷತೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮವನ್ನು ವಿಸ್ತರಿಸಿದೆ.

ಭಾರತದಲ್ಲಿ ಮೊದಲ ಬಾರಿಗೆ ವಾಹನ ಚಲಾಯಿಸುವವರ ಸಂಖ್ಯೆಯು ಪ್ರತಿ ವರ್ಷ ಹೆಚ್ಚುತ್ತಿದೆ.  ಹೋಂಡಾ 2ವ್ಹೀಲರ್ಸ್ ಇಂಡಿಯಾ, ತನ್ನ ಮೂರು ಆಧಾರ ಸ್ತಂಭಗಳಡಿ, ಸುರಕ್ಷಿತ ಚಾಲನೆಯ ಶಿಕ್ಷಣ ಮತ್ತು ತರಬೇತಿಯನ್ನು  38 ಲಕ್ಷಕ್ಕೂ ಹೆಚ್ಚು ಜನರಿಗೆ ಒದಗಿಸಿದೆ.  ಹೋಂಡಾದ 14 ಸಂಚಾರ ತರಬೇತಿ ಪಾಕ್ರ್ಸ್‍ಗಳು, ಪ್ರತಿ ದಿನವೂ ಮಕ್ಕಳು ಮತ್ತು ವಯಸ್ಕರಿಗೆ ತರಬೇತಿ ಕಾರ್ಯಕ್ರಮ ನಡೆಸುತ್ತಿವೆ.  ಭಾರತದಾದ್ಯಂತ ಇರುವ ಹೋಂಡಾದ 6 ಸುರಕ್ಷತಾ ಚಾಲನಾ ಶಿಕ್ಷಣ ಕೇಂದ್ರಗಳು  ವಾಹನ ಚಾಲನಾ ಕಲಿಕಾರ್ಥಿಗಳಿಗೆ ಮತ್ತು ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿಸುವವರಿಗೆ ತರಬೇತಿ ಒದಗಿಸುತ್ತಿದೆ. ಇದಕ್ಕೆ ಪೂರಕವಾಗಿ, ಹೋಂಡಾ, ತನ್ನ ಡೀಲರಶಿಪ್‍ಗಳಲ್ಲೂ ರಸ್ತೆ ಸುರಕ್ಷತೆ ಶಿಕ್ಷಣ ಉತ್ತೇಜಿಸಲಿದೆ. ಶಾಲೆ, ಕಾಲೇಜ್, ಸಮುದಾಯ ಮತ್ತು ಕಾರ್ಪೊರೇಟ್‍ಗಳಲ್ಲಿ ನಿಯಮಿತವಾಗಿ ಡಿಜಿಟಲ್ ರಸ್ತೆ ಸುರಕ್ಷತಾ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.

click me!