ಭಾರತಕ್ಕೆ ಮತ್ತೆ ಬರುತ್ತಿದೆ ಹೊಂಡಾ ಸಿವಿಕ್ ಕಾರು! ಬೆಲೆ ಎಷ್ಟು?

By Web DeskFirst Published Nov 1, 2018, 8:55 PM IST
Highlights

2013ರಿಂದ ಭಾರತದಿಂದ ಕಣ್ಮರೆಯಾಗಿದ್ದ ಹೊಂಡಾ ಸಿವಿಕ್ ಕಾರು ಮತ್ತೆ ಭಾರತದ ರಸ್ತೆಗಿಳಿಯುತ್ತಿದೆ. ನೂತನ ಹೊಂಡಾ ಸಿವಿಕ್ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

ನವದೆಹಲಿ(ನ.01): ಲಕ್ಸುರಿ ಕಾರು ಎಂದೇ ಹೆಸರುವಾಸಿಯಾಗಿರುವ ಹೊಂಡಾ ಸಿವಿಕ್ ಕಾರು 2013ರಲ್ಲಿ ಭಾರತದಲ್ಲಿ ಮಾರಾಟ ಸ್ಥಗಿತಗೊಳಿಸಿತು. ಹೊಂಡಾ ದಿಢೀರ್ ನಿರ್ಧಾರ ಕಾರು ಪ್ರಿಯರಿಗೆ ಶಾಕ್ ನೀಡಿತ್ತು. ಇದೀಗ 5 ವರ್ಷಗಳ ಬಳಿಕ ಹೊಂಡಾ ಸಿವಿಕ್ ಮತ್ತೆ ಭಾರತದ ರಸ್ತೆಗಿಳಿಯುತ್ತಿದೆ.

 

,
The Halloween haul's complete,
Good night Honda fans, we sure are beat. pic.twitter.com/g6ADOCOzHG

— Honda (@Honda)

 

ನೂತನ ಹೊಂಡಾ ಸಿವಿಕ್ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್ ಲಭ್ಯವಿದೆ.  1.6 ಲೀಟರ್ ಡೀಸೆಲ್ ಎಂಜಿನ್,  120 ಬಿಹೆಚ್‌ಪಿ ಪವರ್ ಹಾಗೂ  300nm ಟಾರ್ಕ್ ಉತ್ವಾದಿಸಲಿದೆ.  ಇನ್ನು 1.8 ಲೀಟರ್ ಪೆಟ್ರೋಲ್ ಎಂಜಿನ್ 140 ಬಿಹೆಚ್‌ಪಿ ಪವರ್ ಹೊಂದಿದೆ.

 

,
Sticks of wheat,
Covered with chocolate and oh, so… delicious.
We ♥️ pic.twitter.com/2kYE2aoeu3

— Honda (@Honda)

 

9 ಸ್ವೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸ್ ನೂತನ ಹೊಂಡಾ ಸಿವಿಕ್ ಕಾರಿನ ವಿಶೇಷ. ಇನ್ನು ಹಳೇ ಕಾರಿಗಿಂತ ಹೆಚ್ಚು ಸ್ಪೇಸ್, 7.0 ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವಿಶೇಷತೆಗಳು ನೂತನ ಹೊಂಡಾ ಸಿವಿಕ್ ಕಾರಿನಲ್ಲಿದೆ.

 

,
Watch the day retreat,
Safe and sound under my sheet.
(Thanks, 👻) pic.twitter.com/2f6XT8cA4m

— Honda (@Honda)

 

2019ರಲ್ಲಿ ನೂತನ ಹೊಂಡಾ ಸಿವಿಕ್ ಬಿಡುಗಡೆಯಾಗಲಿದೆ. ಆದರೆ ಇದರ ಬೆಲೆ ಎಷ್ಟು ಅನ್ನೋದನ್ನ ಹೊಂಡಾ ಬಹಿರಂಗ ಪಡಿಸಿಲ್ಲ. 14 ಲಕ್ಷ ರೂಪಾಯಿಯಿಂದ ಬೆಲೆ ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.

click me!