
ಚೆನ್ನೈ(ನ.01): ರಾಯಲ್ ಎನ್‌ಫೀಲ್ಡ್ ಬೈಕ್ ಪ್ರತಿಸ್ಪರ್ಧಿ ಜಾವಾ ಮೋಟಾರ್ ಬೈಕ್ ರಸ್ತೆಗಿಳಿಯೋ ಮುನ್ನವೇ ಎನ್‌ಫೀಲ್ಡ್ ಬಹುದೊಡ್ಡ ಹೊಡೆತ ಬಿದ್ದಿದೆ. ಚೆನ್ನೈ ಘಟಕದಲ್ಲಿ ಕಾರ್ಮಿಕರ ಪ್ರತಿಭಟನೆಯಿಂದ ರಾಯಲ್ ಎನ್‌ಫೀಲ್ಡ್ ಬೈಕ್ ನಿರ್ಮಾಣದಲ್ಲಿ ಹಿನ್ನಡೆ ಅನುಭವಿಸಿದೆ.
ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಕಾರ್ಮಿಕರು ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ಇದರಿಂದ ಕಳೆದರಡು ತಿಂಗಳಲ್ಲಿ 25,000 ಬೈಕ್ ನಿರ್ಮಾಣ ಸ್ಥಗಿತಗೊಂಡಿದೆ.
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಚೆನ್ನೈ ಘಟಕದಲ್ಲಿ 25,000 ರಾಯಲ್ ಎನ್‌ಫೀಲ್ಡ್ ಬೈಕ್ ನಿರ್ಮಾಣ ಮಾಡಬೇಕಿತ್ತು. ಆದರೆ ಪ್ರತಿಭಟನೆಯಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ ಎಂದು ಇಚನ್ ಮೋಟಾರ್ಸ್ ಹೇಳಿದೆ.