ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ವ್ಯಾನಿಟಿ ವ್ಯಾನ್ ಖರೀದಿಸಿದ್ದಾರೆ. ನೂತನ ವಾಹನದ ಬೆಲೆ 7 ಕೋಟಿ ರೂಪಾಯಿ. ದುಬಾರಿ ಮೊತ್ತದ ವಾಹನದಲ್ಲಿ ಏನಿದೆ? ಇಲ್ಲಿದೆ ಅಲ್ಲು ಅರ್ಜುನ್ ಫಾಲ್ಕನ್ ವಾಹನದ ವಿವರ.
ಹೈದರಾಬಾದ್(ಜು.06): ತೆಲೆಗು ಚಿತ್ರರಂಗ ಸದಾ ಒಂದಲ್ಲೊಂದು ದಾಖಲೆಯ ಚಿತ್ರಗಳ ಮೂಲಕ ದೇಶದ ಗಮನಸೆಳೆದಿದೆ. ಹೊಸತನ, ಅದ್ಭುತ ಕತೆ, ಪ್ರಶಸ್ತಿ ವಿಜೇಯ ನಿರ್ದೇಶಕರು, ಜನಪ್ರಿಯ ನಟ,ನಟಿಯರು ಸೇರಿದಂತೆ ತೆಲುಗು ಚಿತ್ರ ರಂಗ ದೇಶದಲ್ಲೇ ಹೆಸರುಗಳಿಸಿದೆ. ಇದೀಗ ತೆಲುಗು ನಟ ಅಲ್ಲು ಅರ್ಜುುನ್ ವ್ಯಾನಿಟಿ ವ್ಯಾನ್ ದೇಶದಲ್ಲೇ ಸುದ್ದಿಯಾಗಿದೆ.
A post shared by Allu Arjun (@alluarjunonline) on Jul 4, 2019 at 11:21pm PDT
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಹಾವಿನಾಟ- ಒಳಗಿದ್ದವರಿಗೆ ಪ್ರಾಣಸಂಕಟ!
ಚಿತ್ರನಟ ನಟಿಯರು ಶೂಟಿಂಗ್‌ಗಾಗಿ ವಿವಿದೆಡೆ ತೆರಳುತ್ತಾರೆ. ಎಲ್ಲಾ ಕಡೆ ಉತ್ತಮ ಹೊಟೆಲ್, ತಂಗಲು ವ್ಯವಸ್ಥೆಗಳಿರುವುದಿಲ್ಲ. ಹೀಗಾಗಿ ಸ್ಟಾರ್ ಸೆಲೆಬ್ರೆಟಿಗಳು ತಮ್ಮದೇ ವ್ಯಾನಿಟಿ ವ್ಯಾನ್ ಬಳಸುತ್ತಾರೆ. ಈ ವ್ಯಾನಿಟಿ ವ್ಯಾನ್‌ಗಳಲ್ಲಿ ಅತ್ಯುತ್ತಮ ಸೌಲಭ್ಯವಿರುತ್ತೆ. ಮೇಕಪ್ ರೂಂ, ಬೆಡ್ ರೂಂ, ಡೈನಿಂಗ್ ರೂಂ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಯಿಂದ ಕೂಡಿರುತ್ತೆ. ಇದೀಗ ಅಲ್ಲು ಅರ್ಜುನ್ ನೂತನ ವ್ಯಾನಿಟಿ ವ್ಯಾನ್ ಖರೀದಿಸಿದ್ದಾರೆ.
It’s Sexy & I Love it 🖤 #AAFALCON
A post shared by Allu Arjun (@alluarjunonline) on Jul 4, 2019 at 11:39pm PDT
ಇದನ್ನೂ ಓದಿ: ಮಾರಾಟಕ್ಕಿದೆ ಸಲ್ಮಾನ್ ಖಾನ್ ಖರೀದಿಸಿದ BMW 7 ಸೀರಿಸ್ ಕಾರು!
ಅಲ್ಲು ಅರ್ಜುನ್ ನೂತನ ವ್ಯಾನಿಟಿ ವ್ಯಾನ್ ಬೆಲೆ ಬರೊಬ್ಬರಿ 7 ಕೋಟಿ ರೂಪಾಯಿ. ಈ ವಾಹನಕ್ಕೆ ಅಲ್ಲು ಅರ್ಜುನ್ ಫಾಲ್ಕನ್ ಎಂದು ಹೆಸರಿಟ್ಟಿದ್ದಾರೆ. ಸಿನಿ ರಸಿಕರ, ಅಭಿಮಾನಿಗಳ ಪ್ರೀತಿ, ಪ್ರೋತ್ಸಾಹವೇ ಈ ಖರೀದಿಗೆ ಕಾರಣ. ಪ್ರತಿ ಬಾರಿ ನಾನು ಏನೇ ಖರೀದಿಸಿದರೂ ನನ್ನ ಮನಸ್ಸಿಗೆ ಬರುವ ಮೊದಲ ವಿಚಾರ ನಿಮ್ಮ ಪ್ರೀತಿ. ಎಲ್ಲರಿಗೂ ಧನ್ಯವಾದ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ರೆಡ್ಡಿ ಕಸ್ಟಮ್ಸ್ ನೂತನ ವಾಹನವನ್ನು ಡಿಸೈನ್ ಮಾಡಿದೆ.