ಎಪ್ರಿಲ್ 2020ರಿಂದ ಭಾರತದಲ್ಲಿ BS6 ಎಮಿಶನ್ ನಿಯಮ ಜಾರಿಯಾಗಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ನಿಯಮ ಕಡ್ಡಾಯಗೊಳಿಸಿದೆ. BS6 ವಾಹನಗಳಿಗೆ ಗ್ರೀನ್ ಸ್ಟಿಕ್ಕರ್ ಕಡ್ಡಾಯ ಮಾಡಿದೆ. ಏನಿದು ಗ್ರೀನ್ ಸ್ಟಿಕ್ಕರ್? ಇಲ್ಲಿದೆ ವಿವರ.
ನವದೆಹಲಿ(ಜೂ.08): ಮಾಲಿನ್ಯ ನಿಯಂತ್ರಣಕ್ಕೆ ಈಗಾಗಲೇ ಭಾರತದಲ್ಲಿ BS6 ಎಮಿಶನ್ ನಿಯಮ ಜಾರಿಗೆ ತಂದಿದೆ. ಎಪ್ರಿಲ್ 1, 2020ರಿಂದ ನೂತನ ನಿಯಮ ಜಾರಿಯಾಗಿದೆ. ಭಾರತದಲ್ಲಿನ ಮಾರಾಟವಾಗುವ ಎಲ್ಲಾ ಹೊಸ ವಾಹನಗಳು BS6 ಎಮಿಶನ್ ಎಂಜಿನ್ ಹೊಂದಿರಬೇಕು. BS4 ಎಂಜಿನ್ ಹೊಸ ವಾಹನಗಳ ಮಾರಾಟಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಮತ್ತೊಂದು ನಿಯಮ ಪಾಲನೆ ಕಡ್ಡಾಯ ಮಾಡಿದೆ
ಜಾವಾ ಮೀಟರ್, ಬೊಲೆರೋ ಕನ್ಸೋಲ್; ಮಹೀಂದ್ರ ವೆಂಟಿಲೇಟರ್ ಹಿಂದಿದೆ ರೋಚಕ ಕತೆ!.
undefined
ಕೇಂದ್ರ ರಸ್ತೆ ಸಾರಿಗೆ ಇಲಾಖೆ ನೂತನ ನಿಯಮದ ಕುರಿತು ಪ್ರಕಟಣೆ ಹೊರಡಿಸಿದೆ. ಅಕ್ಟೋಬರ್ 1, 2020ರಿಂದ BS6 ವಾಹನಗಳು ಗ್ರೀನ್ ಸ್ಟಿಕ್ಕರ್ ಹಾಕಬೇಕು. ಇದು ಕಡ್ಡಾಯವಾಗಿದೆ. ಪರಿಸರ ಸ್ನೇಹಿ ವಾಹನವಾಗಿರುವ ಕಾರಣ 1 cm ಗ್ರೀನ್ ಸ್ಟಿಕ್ಕರ್ ಹಾಕಬೇಕು. ಇದು ರಿಜಿಸ್ಟ್ರೇಶನ್ ನಂಬರ್ ಪ್ಲೇಟ್‌ನಲ್ಲಿ ಹಾಕಿರಬೇಕು. ಈ ಮೂಲಕ BS6 ವಾಹನ ಎಂದು ಪೊಲೀಸರು ಸುಲಭವಾಗಿ ಗುರುತಿಸುವಂತಿರಬೇಕು ಎಂದು ರಸ್ತೆ ಸಾರಿಗೆ ಇಲಾಖೆ ಹೇಳಿದೆ.
2018ರಲ್ಲಿ ತಿದ್ದುಪಡಿ ಮಾಡಲಾದ ಮೋಟಾರ್ ವಾಹನ ಕಾಯ್ದೆಯಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಲಾಗಿತ್ತು. 2019ರ ಎಪ್ರಿಲ್ ತಿಂಗಳಿಂದ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಆದೇಶ ಜಾರಿಗೆ ಬರಬೇಕಿತ್ತು. ಆದರೆ ಹಲವು ಕಾರಣಗಳಿಂದ ಈ ನಿಯಮ ಜಾರಿಯಾಗಿಲ್ಲ. ಈ ತಿದ್ದು ಪಡಿಯಲ್ಲಿ ವಾಹನ ಮೋಟಾರ್ ಅನುಗುಣವಾಗಿ ನಂಬರ್ ಪ್ಲೇಟ್‌ಮೇಲೆ ಕಲರ್ ಕೋಡಿಂಗ್ ಕೂಡ ಮಾಡಬೇಕು. ಎಲೆಕ್ಟ್ರಿಕ್ ವಾಹನಗಳು, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗೆ ಒಂದೊಂದು ಕಲರ್ ಕೋಡಿಂಗ್ ಸೂಚಿಸಿದೆ.
ಇದೀಗ BS6 ವಾಹನಕ್ಕೆ 1cm ಗ್ರೀನ್ ಸ್ಟಿಕ್ಕರ್ ಕಡ್ಡಾಯ ಮಾಡಿದೆ. ಈ ಮೂಲಕ ಮತ್ತೊಂದು ಮಹತ್ದ ಹೆಜ್ಜೆ ಇಟ್ಟಿದೆ.