ಹೊಸ ದಾಖಲೆ ಬರೆದ ಟಾಟಾ ಮೋಟಾರ್ಸ್, ದೇಶಕ್ಕೆ ಮತ್ತೊಂದು ಹೆಮ್ಮೆ!

By Suvarna News  |  First Published Oct 24, 2020, 7:59 PM IST

ದೇಶದ ಹೆಮ್ಮೆಯ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 1991ರಿಂದ ಪ್ಯಾಸೆಂಜರ್ ವಾಹನದಲ್ಲಿ ಸಂಚಲನ ಮೂಡಿಸಿದ ಟಾಟಾ ಇದೀಗ ದಾಖಲೆ ಬರೆದಿದೆ.


ನವದೆಹಲಿ(ಅ.24): ಭಾರತದಲ್ಲಿ ಟಾಟಾ ಮೋಟಾರ್ಸ್ ವಾಹನ ಮಾರಾಟ ಗಣನೀಯ ಏರಿಕೆ ಕಂಡಿದೆ. ಇದೀಗ ಟಾಟಾ ಮೋಟಾರ್ಸ್ ಬರೋಬ್ಬರಿ 40 ಲಕ್ಷ ವಾಹನ ಮಾರಾಟ ಮೈಲಿಗಲ್ಲು ಸ್ಥಾಪಿಸಿದೆ. 1991ರಲ್ಲಿ ಮೊದಲ ಬಾರಿಗೆ ಪ್ಯಾಸೆಂಜರ್ ವಾಹನ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್, ಹಂತ ಹಂತವಾಗಿ ಯಶಸ್ಸು ಸಾಧಿಸಿದೆ.  ಇದೀಗ ಕಳೆದ 5 ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಅಭೂತಪೂರ್ವ ಯಶಸ್ಸು ಸಾಧಿಸಿದೆ.

ನಮೆಗೆಲ್ಲಾ ನೀಡಿದ ಪ್ರಕೃತಿಗೆ ಸಣ್ಣ ಕೃತಜ್ಞತೆ: ಟಾಟಾ ನೆಕ್ಸಾನ್ EV ಪರಿಸರ ಉಳಿಸಿ ಅಭಿಯಾನ!.

Tap to resize

Latest Videos

undefined

ಟ್ರಕ್,  ಆರ್ಮಿವಾಹನ ಸೇರಿದಂತೆ ಇತರ ಕಮರ್ಷಿಯಲ್ ವಾಹನ ಉತ್ಪಾದನೆಯಲ್ಲಿ ತೊಡಗಿದ್ದ ಟಾಟಾ ಮೋಟಾರ್ಸ್ 1991ರಲ್ಲಿ ಟಾಟಾ ಸಿಯೆರಾ SUV ವಾಹನದೊಂದಿಗೆ ಪ್ಯಾಸೇಂಜರ್ ವಾಹನ ವಿಭಾಗಕ್ಕೆ ಎಂಟ್ರಿಕೊಟ್ಟಿತ್ತು. 2005-6ರ ವೇಳೆ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ 10 ಲಕ್ಷ ಕಾರು ಮಾರಾಟ ಮಾಡಿದ ಸಾಧನೆ ಮಾಡಿತು.

600 ಟಾಟಾ ಮೋಟಾರ್ಸ್ ಮಿಲಿಟರಿ ಟ್ರಕ್ ಖರೀದಿಸಲಿದೆ ಥಾಯ್ಲೆಂಡ್ ಸೇನೆ!

2015ರ ವೇಳೆಗೆ ಈ ಸಂಖ್ಯೆ 30 ಲಕ್ಷ ವಾಹನ ಮಾರಾಟ ಮಾಡಿತ್ತು. 2015ರಿಂದ 2020ರ 5 ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಪ್ಯಾಸೆಂಜ್ ವಾಹನ ಮಾರಾಟ ಒಟ್ಟು 40 ಲಕ್ಷಕ್ಕೆ ಏರಿಕೆಯಾಗಿದೆ.  

ಆರಂಭಿಕ ಹಂತದಲ್ಲಿ ಟಾಟಾ ಸಿಯೆರಾ, ಟಾಟಾ ಎಸ್ಟೇಟ್, ಟಾಟಾ ಸಫಾರಿ, ಇಂಡಿಕಾ, ಇಂಡಿಗೋ, ನ್ಯಾನೋ ಸೇರಿದಂತೆ ಪ್ರಮುಖ ವಾಹನ ಬಿಡುಗಡೆ ಮಾಡಿತ್ತು.   ಕಳೆದ 5 ವರ್ಷಗಳಲ್ಲಿ ಅತ್ಯಂತ ಆಕರ್ಷಕ ಹಾಗೂ ಗರಿಷ್ಠ ಸುರಕ್ಷತೆಯ ವಾಹನ ಬಿಡುಗಡೆ ಮಾಡಿ ಗ್ರಾಹಕರ ಮನ ಗೆದ್ದಿದೆ.

ಟಾಟಾ ನೆಕ್ಸಾನ್ ಮಾರಾಟ ದ್ವಿಗುಣ, ವಿದೇಶಿ ಕಾರುಗಳಿಗಿಲ್ಲ ಬೇಡಿಕೆ!

ಬೋಲ್ಟ್, ಟಿಯಾಗೋ, ಟಿಗೋರ್, ನೆಕ್ಸಾನ್, ಹೆಕ್ಸಾ, ಹ್ಯಾರಿಯರ್, ಅಲ್ಟ್ರೋಜ್ ಸೇರಿದಂತೆ ಅತ್ಯಂತ ಜನಪ್ರಿಯ ವಾಹನ ಬಿಡುಗಡೆ ಮಾಡಿದೆ. ಇನ್ನು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನ ಕೂಡ ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

click me!