ಎಲೆಕ್ಟ್ರಿಕ್ ಕಾರು ಚಾರ್ಜಿಂಗ್: ಪ್ರತಿ ಯುನಿಟ್‌ಗೆ ತಗಲುವ ವೆಚ್ಚ ಎಷ್ಟು?

By Suvarna NewsFirst Published Oct 24, 2020, 6:24 PM IST
Highlights

ಕೇಂದ್ರ ಸರ್ಕಾರ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನ ನಿರ್ವಹಣೆ ಸುಲಭ ಹಾಗೂ ವೆಚ್ಚ ಕಡಿಮೆ. ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಲು ಪ್ರತಿ ಯನಿಟ್‌ಗೆ ತಗುಲುವ ವೆಚ್ಚ ಎಷ್ಟು? ಈ ಕುರಿತ ಮಾಹಿತಿ ಇಲ್ಲಿದೆ.
 

ನವದೆಹಲಿ(ಅ.24): ಭಾರತದಲ್ಲೀಗ ಎಲೆಕ್ಟ್ರಿಕ್ ವಾಹನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಬ್ಸಿಡಿ ನೀಡುತ್ತಿದೆ. ವಾಹನ ಖರೀದಿ ಹೆಚ್ಚಿಸಲು ದೆಹಲಿ ಸರ್ಕಾರ ನಗರದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಹೆಚ್ಚಿಸಿದೆ. ಇಷ್ಟೇ ಅಲ್ಲ ಅತ್ಯಂತ ಕಡಿಮೆ ದರದಲ್ಲಿ ಚಾರ್ಜಿಂಗ್ ನೀಡುತ್ತಿದೆ.

ಹೊಸ ಎಲೆಕ್ಟ್ರಿಕ್ ವಾಹನ ನೀತಿ ಜಾರಿ; ರೋಡ್ ಟ್ಯಾಕ್ಸ್ ಸಂಪೂರ್ಣ ಉಚಿತ!

ಇಂಧನ ವಾಹನಕ್ಕಿಂತ ಎಲೆಕ್ಟ್ರಿಕ್ ವಾಹನ ನಿರ್ವಹಣೆ ವೆಚ್ಚ ಕಡಿಮೆ. ಇದೀಗ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಬೆಲೆಯನ್ನೂ ದೆಹಲಿ ಸರ್ಕಾರ ಬಹಿರಂಗ ಪಡಿಸಿದೆ. ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಲು ಪ್ರತಿ ಯುನಿಟ್‌ಗೆ 4.5 ರೂಪಾಯಿ ಹಾಗೂ ಹೈಟೆನ್ಶನ್ ಚಾರ್ಜಿಂಗ್ ಮಾಡಲು ಪ್ರತಿ ಯುನಿಟ್‌ಗೆ 5 ರೂಪಾಯಿ ನಿಗದಿ ಪಡಿಸಲಾಗಿದೆ. ಇದು ದೇಶದಲ್ಲಿರುವ ಅತ್ಯಂತ ಕಡಿಮೆ ಬೆಲೆಯಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.

ಕೈಗೆಟುಕುವ ದರದಲ್ಲಿ ಕ್ವಿಡ್ ರೀತಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾದ ರೆನಾಲ್ಟ್!..

ಎಲ್ಲಾ ರೀತಿಯ ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಲು ದೆಹಲಿ ಸರ್ಕಾರ ಚಾರ್ಜಿಂಗ್ ಸ್ಟೇಶನ್‌ಗಳಲ್ಲಿ ವ್ಯವಸ್ಥೆ ಮಾಡಿದೆ. ದೆಹಲಿಯಲ್ಲಿನ ವಾಯು ಮಾಲಿನ್ಯ ತಗ್ಗಿಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ. ಎಲೆಕ್ಟ್ರಿಕ್  ವಾಹನ ಖರೀದಿದಾರರ ಖಾತೆಗೆ ಸಬ್ಸಡಿ ಹಣ ನೀಡುವ ಯೋಜನೆ ಬೆನ್ನಲ್ಲೇ ಎಲೆಕ್ಟ್ರಿಕ್ ವಾಹನ ರಿಜಿಸ್ಟ್ರೇಶನ್‌ ಫೀ ಉಚಿತ ಮಾಡಲಾಗಿದೆ.
 

click me!