ಟಾಟಾ ಅಲ್ಟ್ರೋಜ್ ಕಾರಿಗೆ ಬಂಪರ್ ಆಫರ್, EMI ಕೇವಲ 5,555 ರೂಪಾಯಿ!

By Suvarna News  |  First Published Jun 14, 2020, 3:27 PM IST

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಹುತೇಕ ಆಟೋಮೊಬೈಲ್ ಕಂಪನಿಗಳು ಸುಲಭ ಸಾಲ ಸೇರಿದಂತೆ ಹಲವು ಆಫರ್ ನೀಡುತ್ತಿದೆ. ಟಾಟಾ ಮೋಟಾರ್ಸ್ ವಿಶೇಷ ಆಫರ್ ಘೋಷಿಸಿದೆ. ಇದೀಗ ಟಾಟಾ ಅಲ್ಟ್ರೋಜ್ ಕಾರಿಗೆ EMI ನೀಡಲಾಗಿದೆ. ಈ ಕುರಿತ ವಿವರ ಇಲ್ಲಿದೆ. 


ಮುಂಬೈ(ಜೂ.14): ವರ್ಷದ ಆರಂಭದಲ್ಲಿ ಟಾಟಾ ಮೋಟಾರ್ಸ್ ಪ್ರಿಮೀಯಮ್ ಹ್ಯಾಚ್‌ಬ್ಯಾಕ್ ಕಾರಾದ ಅಲ್ಟ್ರೋಜ್ ಬಿಡುಗಡೆ ಮಾಡಿತು. ಮಾರುತಿ ಬಲೆನೋ, ಹ್ಯುಂಡೈ ಐ20, ಹೊಂಡಾ ಜಾಝ್ ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದ ಈ ಅಲ್ಟ್ರೋಜ್ ಕಾರು ತೀವ್ರ ಪೈಪೋಟಿ ನೀಡಿತು. ಸುರಕ್ಷತೆಯಲ್ಲಿ ಗರಿಷ್ಠ 5 ಸ್ಟಾರ್ ರೇಟಿಂಗ್ ಪಡೆದ ಅಲ್ಟ್ರೋಜ್ ಕಾರು ಇದೀಗ ಮಾರಾಟ ಹೆಚ್ಚಿಸಲು ಮತ್ತೊಂದು ಆಫರ್ ನೀಡುತ್ತಿದೆ.

ಬೆಂಗಳೂರಿಗರಿಗೆ ಟಾಟಾ ಮೋಟಾರ್ಸ್ ಭರ್ಜರಿ ಆಫರ್, ಕಾರು ಖರೀದಿ ಈಗ ಸುಲಭ!

Tap to resize

Latest Videos

undefined

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಕುಂಠಿತಗೊಂಡಿರುವ ಕಾರು ಮಾರಾಟವನ್ನು ಉತ್ತೇಜಿಸಲು ಟಾಟಾ ಮೋಟಾರ್ಸ್ ಅಲ್ಟ್ರೋಜ್ ಕಾರಿಗೆ ವಿಶೇಷ ಆಫರ್ ನೀಡಿದೆ. ಇದೀಗ ಅಲ್ಟ್ರೋಜ್ ಕಾರಿಗೆ ಕೇವಲ 5,555 ರೂಪಾಯಿ ಇಎಂಐ ಆಫರ್ ನೀಡಿದೆ. ಈ ಆಫರ್ ಮೂಲಕ ಗ್ರಾಹಕರು ಸುಲಭವಾಗಿ ಅಲ್ಟ್ರೋಜ್ ಕಾರು ತಮ್ಮದಾಗಿಸಿಕೊಳ್ಳಬಹುದು.

ಲಾಕ್‌ಡೌನ್ ಸಂಕಷ್ಟ; ಗ್ರಾಹಕರಿಗೆ ವಾರಂಟಿ ವಿಸ್ತರಣೆ ಸೇರಿ ಹಲವು ಸೌಲಭ್ಯ ಘೋಷಿಸಿದ ಟಾಟಾ ಮೋಟಾರ್ಸ್!.

ನೂತನ ಟಾಟಾ ಅಲ್ಟ್ರೋಜ್ ಕಾರು ಖರೀದಿಸುವ ಗ್ರಾಹಕರು 5,555 ರೂಪಾಯಿ EMI ಆಫರ್ ಆಯ್ಕೆ ಮಾಡಿಕೊಳ್ಳಬಹುದು. ಈ ಮೂಲಕ ಗ್ರಾಹಕರು ಆರಂಭಿಕ 6 ತಿಂಗಳು 5,555 ರೂಪಾಯಿ(ಪ್ರತಿ ತಿಂಗಳು) ಪಾವತಿಸಿದರೆ ಸಾಕು. ಗರಿಷ್ಠ ಸಾಲದ ಅವದಿ 5 ವರ್ಷವಾಗಿದೆ. ಆರಂಭಿಕ 6 ತಿಂಗಳ ಬಳಿಕ ಸಾಮಾನ್ಯ EMI ಆರಂಭವಾಗಲಿದೆ. 

ಕೊರೋನಾ ವೈರಸ್ ಕಾರಣ ಜನರು ಆರ್ಥಿಕವಾಗಿ ಚೇತರಿಸಿಕೊಳ್ಳಲು ಕನಿಷ್ಠ 6 ತಿಂಗಳು ಬೇಕಿದೆ. ವೇತನ ಕಡಿತ ಸೇರಿದಂತೆ ಹಲವು ಕಾರಣಗಳಿಂದ ತಮ್ಮ ಕಾರು ಖರೀದಿಯನ್ನು ಮುಂದೂಡುವ ಅವಶ್ಯಕತೆ ಇಲ್ಲ. ಈ ಕಾರಣಕ್ಕಾಗಿ ಸುಲಭ EMI ಸೇವೆಯನ್ನು ಟಾಟಾ ನೀಡುತ್ತಿದೆ ಎಂದು ಕಂಪನಿ ಹೇಳಿದೆ.
 

click me!