ಭಾರತದ ಕಾರು ಮಾರುಕಟ್ಟೆಯಲ್ಲಿ ಅಗ್ರಜನಾಗಿರುವ ಮಾರುತಿ ಸುಜುಕಿ ಇದೀಗ ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಿ ಕೇವಲ ಪೆಟ್ರೋಲ್ ಹಾಗೂ CNG ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಲಾಕ್‌ಡೌನ್ ಸಡಿಲಿಕೆ ಅಂತ್ಯವಾದ ಬೆನ್ನಲ್ಲೇ ಮಾರುತಿ ಸುಜುಕಿ CNG ವರ್ಶನ್ ಸೆಲೆರಿಯಾ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ
ನವದೆಹಲಿ(ಜೂ.12): ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಮಾರುತಿ ಸುಜುಕಿ ನೂತನ BS6 ಎಂಜಿನ್ ಸೆಲೆರಿಯೋ S ವೆರಿಯೆಂಟ್ CNG ಕಾರು ಬಿಡುಗಡೆ ಮಾಡಿದೆ. ಮಾಲಿನ್ಯ ರಹಿತ ಗ್ರೀನ್ ಕಾರು ಉತ್ಪಾದನೆ ಹಾಗೂ ದೇಶದಲ್ಲಿ CNG ಕಾರಿನ ಮೂಲಕ ಕ್ರಾಂತಿಗೆ ಮಾರುತಿ ಸುಜುಕಿ ಮುಂದಾಗಿದೆ. ಸೆಲೆರಿಯೋ S ವೆರಿಯೆಂಟ್ CNG ಕಾರಿನ ಬೆಲೆ 5.36 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).
ಲಾಕ್‌ಡೌನ್ ಅಂತ್ಯದಲ್ಲಿ ದಾಖಲೆ ಬರೆದ ಮಾರುತಿ ಬಲೆನೊ!.
ಸೆಲೆರಿಯೋ S ವೆರಿಯೆಂಟ್ CNG ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮುಂಭಾಗದ ಗ್ರಿಲ್, ಹೆಡ್‌ಲ್ಯಾಂಪ್ಸ್ ಸೇರಿದಂತೆ ಎಲ್ಲಾ ಫೀಚರ್ಸ್ ಪೆಟ್ರೋಲ್ ಸೆಲೆರಿಯೋ ಕಾರಿನದ್ದೆ ಬಳಸಲಾಗಿದೆ. ಸೆಲೆರಿಯೋ ಕಾರು 998 ಸಿಸಿ , 3 ಸಿಲಿಂಡರ್ ಎಂಜಿನ್ ಹೊಂದಿದ್ದು, 58 bhp ಪವರ್ ಹಾಗೂ 78nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಮಾರಾಟ ಹೆಚ್ಚಿಸಲು ಮಾರುತಿ ಸುಜುಕಿ ಸುಲಭ ಸಾಲ; ಗ್ರಾಹಕರಿಗೆ ಸ್ಪೆಷಲ್ ಆಫರ್!
ಮಾರುತಿ ಸುಜುಕಿ AMT(ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್) ಪರಿಚಯಿಸಿದ ಮೊದಲ ಕಾರು ಸೆಲೆರಿಯೋ. ಆದರೆ ಸೆಲೆರಿಯೋ S ವೆರಿಯೆಂಟ್ CNG ಕಾರು ಕೇವಲ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಪ್ರತಿ ಕೆಜಿಗೆ 30.47 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಾರಿನಲ್ಲಿ VXI, VXI(o) ಹಾಗೂ H2 ಟ್ರಿಮ್ಸ್ ವೇರಿಯೆಂಟ್ ಲಭ್ಯವಿದೆ.