ಭಾರತದಲ್ಲಿನ ಬೇಡಿಕೆಗೆ ಅನುಗುಣವಾಗಿ ಕಾರುಗಳ ಉತ್ಪಾದನೆಯಾಗುತ್ತಿದೆ. ಕೊರೋನಾ ವೈರಸ್ ಕಾರಣ ತಾತ್ಕಾಲಿಕ ಬ್ರೇಕ್ ಬಿದ್ದಿದ್ದರೂ, SUV ಕಾರುಗಳ ಬೇಡಿಕೆ ಕುಗ್ಗಿಲ್ಲ. ಇದೀಗ ಬಹುತೇಕ ಎಲ್ಲಾ ಆಟೋಮೇಕರ್‌ಗಳು ಭಾರತದಲ್ಲ ಹೊಸ ಹೊಸ ಮಾಡೆಲ್ SUV ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇತ್ತ ಹ್ಯುಂಡೈ ತನ್ನ ಯಶಸ್ವಿ SUV ಕಾರಾದ ಕ್ರೆಟಾವನ್ನು ಹೊಸ ರೂಪಜಲ್ಲಿ ಬಿಡುಗಡೆ ಮಾಡುತ್ತಿದೆ. 7 ಸೀಟಿನ ಕ್ರೆಟಾ ಕಾರಿನ ವಿಶೇಷತೆ ಇಲ್ಲಿದೆ.
ನವದೆಹಲಿ(ಜೂ.13): ಹ್ಯುಂಡೈ ಮೋಟಾರ್ ಇದೀಗ ನೂತನ ಕಾರು ಮಾರುಕಟ್ಟೆ ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದ ಯಶಸ್ವಿ SUV ಕಾರು ಎಂದೇ ಗುರುತಿಸಿಕೊಂಡಿರುವ ಕ್ರೆಟಾ ಇದೀಗ ಮತ್ತೊಂದು ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. 7 ಸೀಟರ್ ಕ್ರೆಟಾ ಕಾರು ಶೀಘ್ರದಲ್ಲೇ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.
ಲಾಕ್‌ಡೌನ್‌ನಲ್ಲೂ ದಾಖಲೆ ಬರೆದ ನ್ಯೂ ಜನರೇಶನ್ ಕ್ರೆಟಾ ಕಾರು!...
undefined
ಈಗಾಗಲೇ ಟಾಟಾ ಮೋಟಾರ್ಸ್ ತಮ್ಮ ಹ್ಯಾರಿಯರ್ ಕಾರನ್ನು 7 ಸೀಟಿನ ಗ್ರಾವಿಟಾಸ್ ಕಾರಾಗಿ ಬಿಡುಗಡೆ ಮಾಡುತ್ತಿದೆ. ಇತ್ತ ಎಂಜಿ ಮೋಟಾರ್ಸ್ ತನ್ನ ಹೆಕ್ಟರ್ ಕಾರನ್ನು ಹೆಕ್ಟರ್ ಪ್ಲಸ್ ರೂಪದಲ್ಲಿ 7 ಸೀಟರ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಇದಕ್ಕೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ 7 ಸೀಟರ್ ಕ್ರೇಟಾ ಕಾರನ್ನು ಬಿಡುಗಡೆ ಮಾಡುತ್ತಿದೆ.
ಟಾಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಕಡಿಮೆ ಬೆಲೆಯ ಹ್ಯುಂಡೈ ಎಲೆಕ್ಟ್ರಿಕ್ ಕಾರು!.
7 ಸೀಟರ್ ಕ್ರೆಟಾ ಕಾರು ಭಾರತದ ರಸ್ತೆಗಳಲ್ಲಿ ಪರೀಕ್ಷೆ ನಡೆಸುತ್ತಿದೆ. ಮುಂದಿನ ಜನರೇಶನ್ ಕ್ರೆಟಾ ಕಾರಿನ ಫೀಚರ್ಸ್‌ಗಳನ್ನೇ 7 ಸೀಟರ್ ಕಾರಿನಲ್ಲೂ ಬಳಸಲಾಗಿದೆ. Y ಸ್ಪೋಕ್ ಅಲೋಯ್ ವೀಲ್, LED ಹೆಡ್ ಲ್ಯಾಂಪ್ಸ್ ಹಾಗೂ ಟೈಲ್ ಲ್ಯಾಂಪ್ಸ್, ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ ಕ್ರೆಟಾ ಕಾರಿನ್ನೇ ಹೋಲುತ್ತಿದೆ.
1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಹಾಗೂ 1.4 ಲೀಟರ್ ಟರ್ಬೋ ಚಾರ್ಜ್ ಎಂಜಿನ್ ಆಯ್ಕೆ ಇರುವ ಸಾಧ್ಯತೆಗಳಿವೆ. ಇನ್ನು ನೂತನ 7 ಸೀಟರ್ ಕಾರಿನ ಬೆಲೆ 13 ಲಕ್ಷ ರೂಪಾಯಿಗಳಿಂದ 19 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ಎಂದು ಅಂದಾಜಿಸಲಾಗಿದೆ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್