ಕಡಿಮೆ ಬೆಲೆಯ ಟಾಟಾ ಮಿನಿ ಟ್ರಕ್ ಬಿಡುಗಡೆ!

By Web Desk  |  First Published May 24, 2019, 9:22 PM IST

ವಾಹನ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ ಟಾಟಾ ಮೋಟಾರ್ಸ್ ಇದೀಗ ನೂತನ ಮಿನಿ ಟ್ರಕ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡಿದೆ.


ನವದೆಹಲಿ(ಮೇ.24): ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ  ಟಾಟಾ ಮೋಟಾರ್ಸ್, ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಅತ್ಯಂತ ಸುರಕ್ಷತೆಯ ಕಾರು, ಸ್ಟೈಲೀಶ್ SUV ಕಾರು ಸೇರಿದಂತೆ ಹಲವು ಕಾರುಗಳು ಟಾಟಾ ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಇದರ ಬೆನ್ನಲ್ಲೇ ಇದೀಗ ಟಾಟಾ ಮೋಟಾರ್ಸ್, ಇಂಟ್ರಾ ಕಾಂಪಾಕ್ಟ್ ಟ್ರಕ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ಮೋದಿ ಹೊಸ ಯೋಜನೆ-2025 ರಿಂದ ಸಿಗಲ್ಲ ಪೆಟ್ರೋಲ್ ದ್ವಿಚಕ್ರವಾಹನ!

Tap to resize

Latest Videos

undefined

ನೂತನ ಟಾಟಾ ಮಿನಿ ಟ್ರಕ್  4316 mm ಉದ್ದ, 1639 mm ಅಗಲ ಹಾಗೂ 1919 mm ಎತ್ತರ ಹೊಂದಿರುವ ಈ ಟ್ರಕ್, ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಏಸ್‌ಗಿಂತ ಬಲಿಷ್ಠ ಹಾಗೂ ದೊಡ್ಡದಾಗಿದೆ. ನೂತನ ಟ್ರಕ್ ಬೆಲೆ 5.35 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ರೋಡ್ ಟೆಸ್ಟ್ ಯಶಸ್ವಿ- ಶೀಘ್ರದಲ್ಲಿ ರೆನಾಲ್ಟ್ ಟ್ರೈಬರ್ ಬಿಡುಗಡೆ!

ನೂತನ ಮಿನಿ ಟ್ರಕ್ ಟಾಟಾ ಏಸ್‌ಗೆ ಬದಲಾಗಿ ಬಿಡುಗಡೆ ಮಾಡಿಲ್ಲ. ಟಾಟಾ ಏಸ್ ಶೀಘ್ರದಲ್ಲೇ BS-VI ಎಮಿಶನ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ಟಾಟಾ ಸ್ಪಷ್ಟಪಡಿಸಿದೆ. ನೂತನ ಟಾಟ್ ಇಂಟ್ರಾ ಕಾಂಪಾಕ್ಟ್ ಟ್ರಕ್ ಭಾರತ ಸ್ಟೇಜ್ VI(BS-6) ಎಂಜಿನ್ ಹೊಂದಿದೆ. 1.4 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್, 1396 CC ಹೊಂದಿದ್ದು,  69 bhp (@ 4000) ಪವರ್ ಹಾಗೂ 140 Nm (@1800-3000 rpm) ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ.  5 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಟ್ರಾನ್ಸ್‌ಮಿಶನ್ ಹೊಂದಿದೆ. 
 

click me!