ಬಹುನಿರೀಕ್ಷಿತ ಹ್ಯಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗಗೊಂಡಿದೆ. ನೂತನ ಕೋನಾ ಕಾರು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. ಒಂದು ಬಾರಿ ಚಾರ್ಜ್ ಮಾಡಿದೆ ಗರಿಷ್ಠ 482 ಕಿ.ಮೀ ಮೈಲೇಜ್ ರೆಂಜ್ ಹೊಂದಿರುವ ಈ ಕಾರಿನ ವಿಶೇಷತೆ, ಬೆಲೆ ಮಾಹಿತಿ ಇಲ್ಲಿದೆ.
ನವದೆಹಲಿ(ಮೇ.24): ಹ್ಯುಂಡೈ ಕಂಪನಿಯ ಬಹುನಿರೀಕ್ಷಿತ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. 2018ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಕೋನಾ ಎಲೆಕ್ಟ್ರಿಕ್ ಕಾರು ಇದೀಗ ಜುಲೈ 9 ರಂದು ಬಿಡುಗಡೆಯಾಗಲಿದೆ. ಈ ಮೂಲಕ ಭಾರತದ ಮೊಟ್ಟ ಮೊದಲ SUV ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.
ಇದನ್ನೂ ಓದಿ: ಮಾರುತಿ ಬ್ರಿಜಾ ಸ್ಪೋರ್ಟ್ಸ್ ಕಾರು ಬಿಡುಗಡೆ- ಇಲ್ಲಿದೆ ಬೆಲೆ ವಿವರ!
ಹ್ಯುಂಡೈ ಕೋನಾ ಕಾರಿನಲ್ಲಿ 2 ವೇರಿಯೆಂಟ್ ಲಭ್ಯವಿದೆ. 39kW ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 312 kms ಮೈಲೇಜ್ ರೇಂಜ್ ನೀಡಲಿದೆ. ಇನ್ನು 64 kW ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 482 kms ರೇಂಜ್ ನೀಡಲಿದೆ. 39kW ವೇರಿಯೆಂಟ್ ಕಾರು 136 hp ಪವರ್ ಹಾಗೂ 395 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಮಾಲೀಕನ ಹೊಸ ಐಡಿಯಾ-ಟೊಯೊಟಾ ಕಾರಿಗೆ ಸೆಗಣಿ ಪೈಂಟ್!
ಕೋನಾ ಕಾರಿನ ಗರಿಷ್ಠ ವೇಗ 155 KMPH. ಲಿಥಿಯಂ ಐಯಾನ್ ಬ್ಯಾಟರಿಯನ್ನು 100 kW DC ಫಾಸ್ಟಿಂಗ್ ಚಾರ್ಜಿಂಗ್ ಮೂಲಕ 5 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇನ್ನು ಸ್ಟಾಂಡರ್ಡ್ ಚಾರ್ಜ್ ಮೂಲಕ ಸಂಪೂರ್ಣ ಚಾರ್ಜ್‌ಗೆ 6 ಗಂಟೆ 10 ನಿಮಿಷ ತೆಗೆದುಕೊಳ್ಳಲಿದೆ. ನೂತನ ಕೋನಾ ಕಾರಿನ ಬೆಲೆ 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.