ಕೆಸರಿನಲ್ಲಿ ಸಿಲುಕಿದ ಮಹೀಂದ್ರಾ ಥಾರ್ ಗಾಡಿ ಮೇಲೆಳೆದ ಟಾಟಾ ಹ್ಯಾರಿಯರ್‌ ಇವಿ: ವೀಡಿಯೋ ಭಾರಿ ವೈರಲ್

Published : Jul 24, 2025, 03:30 PM ISTUpdated : Jul 24, 2025, 03:36 PM IST
Tata Harrier EV vs Mahindra Thar

ಸಾರಾಂಶ

Tata Harrier EV ತನ್ನ ಅದ್ಭುತ ಆಫ್-ರೋಡ್ ಸಾಮರ್ಥ್ಯಕ್ಕೆ ಹೆಸರಾಗಿದೆ ಕೆಸರಿನಲ್ಲಿ ಸಿಲುಕಿದ್ದ Mahindra Thar Roxx ಅನ್ನು ಹ್ಯಾರಿಯರ್ ಇವಿ ರಕ್ಷಿಸಿದ ದೃಶ್ಯ  ಈಗ ವೈರಲ್ ಆಗಿದೆ. ಈ ಘಟನೆ ಟಾಟಾ ಹ್ಯಾರಿಯರ್ ಇವಿಯ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ.

ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಮೊದಲ ಅಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಇಲೆಕ್ಟ್ರಿಕ್ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಟಾಟಾ ಹ್ಯಾರಿಯರ್‌ ಇವಿ ಅಂತಹ ವಾಹನಗಳಲ್ಲೊಂದು. ಇದು ಅಲ್ ವ್ಹೀಲ್ ಡ್ರೈವ್‌ ಸಿಸ್ಟಂ(all-wheel-drive system) ಅನ್ನು ಹೊಂದಿರುವ, ಭಾರತದ ಮೊದಲ ಸ್ವದೇಶಿ ನಿರ್ಮಿತ ಇಲೆಕ್ಟಿಕ್‌ ಎಸ್‌ಯುವಿ ಗಾಡಿಯಾಗಿದೆ. ಟಾಟಾದವರು ಇದನ್ನು QWD ಎಂದೂ ಕರೆಯುತ್ತಾರೆ. ಈ ಅರ್ಹತೆಯೂ ಇಲೆಕ್ಟಿಕ್ ವಾಹನಗಳನ್ನು ಆಫ್‌ ರೋಡ್‌ನಲ್ಲೂ ಸಾಮರ್ಥವಾಗಿ ಓಡಾಡುವಂತೆ ಮಾಡುತ್ತವೆ.

ಇತ್ತೀಚೆಗೆ ಟಾಟಾದವರು ತಮ್ಮ ಈ ಬ್ರಾಂಡ್‌ನ ಸಾಮರ್ಥ್ಯದ ಪ್ರದರ್ಶನ ಮಾಡಿದ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಅವರ ಈ ಟಾಟಾ ಹ್ಯಾರಿಯರ್‌ ಇವಿ(Tata Harrier.ev) ಕೇರಳದ ಎಲಿಫೆಂಟ್ ರಾಕನ್ನು ಏರುತ್ತಿರುವ ದೃಶ್ಯ ಇತ್ತು. ಪ್ರಸ್ತುತ ಟಾಟಾದ ಈ ಇಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯಾಗುವುದಕ್ಕೆ ಸಿದ್ಧಗೊಳ್ಳುತ್ತಿದೆ. ಹೀಗಿರುವಾಗ ಟಾಟಾ ಗಾಡಿಯ ಮತ್ತೊಂದು ಶಕ್ತಿ ಪ್ರದರ್ಶನ ಅನಾವರಣವಾಗಿದೆ.

TATA HARRIER ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಕಾಣುವಂತೆ ಟಾಟಾ ಹ್ಯಾರಿಯರ್ ಇವಿ ವಾಹನವೂ ಮಣ್ಣಿನಲ್ಲಿ ಸಿಲುಕಿದ ಥಾರ್ ಮಹೀಂದ್ರಾ ಥಾರ್ ರಾಕ್ಸ್‌ ಗಾಡಿಯನ್ನು(Mahindra Thar Roxx) ಮೇಲೆತ್ತುತ್ತಿರುವ ದೃಶ್ಯ ಇದಾಗಿದೆ. ಮಹೀಂದ್ರಾ ಥಾರ್ ರಾಕ್ಸ್ ಕೂಡ ತನ್ನ ಆಫ್ ರೋಡ್ ಸಾಮರ್ಥ್ಯಕ್ಕೆ(off-road capabilities) ಹೆಸರುವಾಸಿಯಾಗಿದೆ. ಆದರೂ ಅದು ಮಣ್ಣಿನ ರಸ್ತೆಯಲ್ಲಿ ಸಾಗುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ಹೂತು ಹೋಗಿದ್ದು, ಅದರ ಬಂಪರ್ ಮಣ್ಣಿಗೆ ಸಿಲುಕಿದೆ., ಆ ಸ್ಥಳದಿಂದ ಮೇಲೆ ಬರುವುದಕ್ಕೆ ಥಾರ್‌ ಕಷ್ಟಪಡುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಟಾಟಾದವರ ಹ್ಯಾರಿಯರ್ ಇವಿ ಅಲ್ಲಿ ಮಹೀಂದ್ರಾ ಥಾರ್ ಗಾಡಿಯ ಸಹಾಯಕ್ಕೆ ಬಂದಿದ್ದು, ಮಹೀಂದ್ರಾ ಥಾರ್ ರಾಕ್ಸ್ ಗಾಡಿಯನ್ನು ಕೆಸರಿನಿಂದ ಮೇಲೆಳೆಯುವುದನ್ನು ಕಾಣಬಹುದಾಗಿದೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಟಾಟಾ ವಾಹನಗಳ ಶಕ್ತಿ ಸಾಮರ್ಥ್ಯದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಟಾಟಾ ವಾಹನಗಳ ಪವರ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಇವುಗಳೆರಡರ ಮಧ್ಯೆ ಹೋಲಿಕೆ ಸರಿಯಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಈಗ ಭಾರತದಲ್ಲಿ ಲಾಂಚ್ ಆಗಿರುವ ಟಾಟಾ ಹ್ಯಾರಿಯರ್ ಇಲೆಕ್ಟ್ರಿಕ್ ವಾಹನವೂ 65 kWh ಹಾಗೂ 75 kWh ಸಾಮರ್ಥ್ಯದ ಎರಡು ಬ್ಯಾಟರಿಗಳನ್ನು ಹೊಂದಿದೆ. ಇದರ ಡ್ಯುಯಲ್ ಮೋಟಾರ್ ಕಾನ್‌ಫಿಗರೇಷನ್‌ನನಲ್ಲಿ ಮುಂಭಾಗದ ಎಂಜಿನ್ 155.8 ಹೆಚ್‌ಪಿ ಸಾಮರ್ಥ್ಯವನ್ನು ಹೊಂದಿದ್ದು, ಹಿಂಭಾಗದ ಎಂಜಿನಿಯರ್ 234.7 ಹೆಚ್ಪಿ ಪವರ್ ಉತ್ಪಾದನೆ ಮಾಡುತ್ತದೆ.

ಆಫ್ ರೋಡ್ ಸಾಮರ್ಥ್ಯದಲ್ಲಿ ಹ್ಯಾರಿಯರ್ ಇವಿ ಆರು ರೀತಿಯ ಡ್ರೈವಿಂಗ್ ವಿಧಾನಗಳನ್ನು ಹೊಂದಿದೆ. ಮರಳು, ಹಿಮ, ಕಲ್ಲು, ಮಣ್ಣು ಹಾಗೂ ಸಹಜ ಹಾಗೂ ಕಸ್ಟಮ್ ರಸ್ತೆಯಲ್ಲಿ ಇದು ರಸ್ತೆಗೆ ತಕ್ಕಂತಹ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದ್ದು, ಸಹಜವಾಗಿ ಸಾಗಬಲ್ಲದು. ಈ ವಿವಿಧ ರೀತಿಯ ಡ್ರೈವಿಂಗ್ ಮೋಡ್‌ಗಳು ಶಕ್ತಿಯ ವಿತರಣೆ ಹಾಗೂ ಸ್ಥಗಿತದ ಸೆಟ್ಟಿಂಗ್‌ಗಳನ್ನು ಹೊಂದಿವೆ.

 

 

PREV
Read more Articles on
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ