600 ಟಾಟಾ ಮೋಟಾರ್ಸ್ ಮಿಲಿಟರಿ ಟ್ರಕ್ ಖರೀದಿಸಲಿದೆ ಥಾಯ್ಲೆಂಡ್ ಸೇನೆ!

By Suvarna News  |  First Published Sep 14, 2020, 8:28 PM IST

ಭಾರತದ ಹೆಮ್ಮೆಯ ಬ್ರ್ಯಾಂಡ್ ಟಾಟಾ ಮೋಟಾರ್ಸ್  ಇದೀಗ ಕರ್ಮಷಿಯಲ್ ವಾಹನ ಜೊತೆ ಪ್ಯಾಸೆಂಜರ್ ವಾಹನದಲ್ಲಿ ಅಗ್ರಸ್ಥಾನ ಸಂಪಾದಿಸಿದೆ. 5 ಸ್ಟಾರ್ ಸೇಫ್ಟಿ ಕಾರು ಬಿಡುಗಡೆ ಮಾಡಿದ ಹೆಗ್ಗಲಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ. ಇದರ ಜೊತೆಗೆ ಟಾಟಾ ಸೇನಾ ವಾಹನಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ. ಇದೀಗ ಥಾಯ್ಲೆಂಡ್ ಸೇನೆ, 600 ಟಾಟಾ ಮಿಲಿಟರಿ ಟ್ರಕ್ ಖರೀದಿಗೆ ಮುಂದಾಗಿದೆ.


ನವದೆಹಲಿ(ಸೆ.14):  ಟಾಟಾ ಮೋಟಾರ್ಸ್ ಇತ್ತೀಚೆಗೆ ಪ್ಯಾಸೆಂಜರ್ ವಾಹನಗಳತ್ತ ಹೆಚ್ಚಿನ ಗಮನಕೇಂದ್ರೀಕರಿಸಿದೆ. ಹೀಗಾಗಿ ಹ್ಯಾರಿಯರ್, ನೆಕ್ಸಾನ್, ಅಲ್ಟ್ರೋಜ್ ಸೇರಿದಂತೆ ವಿಶ್ವದರ್ಜೆ ಹಾಗೂ ಗ್ರಾಹಕರ ನೆಚ್ಚಿನ ಕಾರುಗಳನ್ನು ಬಿಡುಗಡೆ ಮಾಡಿದೆ. ಹಲವು ದಶಕಗಳಿಂದ ಟಾಟಾ ಮೋಟಾರ್ಸ್ ಕರ್ಮಷಿಯಲ್ ವಾಹನ ಉತ್ಪಾದನೆಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ. ಅದರಲ್ಲೂ ಮಿಲಿಟರಿ ಟ್ರಕ್ ಸೇರಿದಂತೆ ಸೇನಾ ವಾಹನಗಳಲ್ಲಿ ಟಾಟಾ ಇತರ ಎಲ್ಲಾ ಕಂಪನಿಗಳಿಗಿಂತ ಮುಂದಿದೆ.

ಮೇಡ್ ಇನ್ ಇಂಡಿಯಾ ಟಾಟಾ ಹೆಕ್ಸಾ ಈಗ ಬಾಂಗ್ಲಾದೇಶ ಸೇನೆಯ ಅದೀಕೃತ SUV ಕಾರು!

Latest Videos

undefined

ಟಾಟಾ ಮೋಟಾರ್ಸ್ ಭಾರತೀಯ  ಸೇನೆಗೆ ಮಾತ್ರವಲ್ಲ, ಬಾಂಗ್ಲಾದೇಶ ಸೇರಿದಂತೆ ಇತರ ದೇಶದ ಸೇನೆಗೂ ತನ್ನ ವಾಹನ ನೀಡಿದೆ. ಇದೀಗ ಟಾಟಾ ಮೋಟಾರ್ಸ್‌ನಿಂದ 600 ಮಿಲಿಟರಿ ಟ್ರಕ್ ಖರೀದಿಗೆ ಥಾಯ್ಲೆಂಡ್ ಸೇನೆ ಮುಂದಾಗಿದೆ. ಇದಕ್ಕಾಗಿ ಟಾಟಾ ಮೋಟಾರ್ಸ್ ಜೊತೆ ಮಾತುಕತೆ ನಡೆಸಿದೆ.

4×4, 6×6, 8×8, 10×10 ಹಾಗೂ 12×12 ಟ್ರಕ್ ಸೇರಿದಂತ ಹಲವು ವೇರಿಯೆಂಟ್ ಮಿಲಿಟರಿ ಟ್ರಕ್‌ಗಳು ಟಾಟಾ ಮೋಟಾರ್ಸ್ ಉತ್ಪಾದನೆ ಮಾಡುತ್ತಿದೆ.  LPTA 715 4×4 ಮಿಲಿಟರಿ ಟ್ರಕ್ ಖರೀದಿಗೆ ಥಾಯ್ಲೆಂಡ್ ಸೇನೆ ಮಾತುಕತೆ ನಡೆಸಿದೆ. ಈ ವಾಹನ  145 Bhp ಪವರ್ ಹಾಗೂ  500 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಟ್ರಕ್ ಗರಿಷ್ಠ ವೇಗ 100KMPH. ಇನ್ನು ಇಂಧನ ಸಾಮರ್ಥ್ಯ 200 ಲೀಟರ್. ಸೈನಿಕರು, ಶಸ್ತ್ರಾಸ್ತ್ರ ಸೇರಿದಂತೆ ಯುದ್ಧ ಸಾಮಾಗ್ರಿಗಳನ್ನು ಸಾಗಿಸಲು ಈ ಮಿಲಿಟರಿ ಟ್ರಕ್ ಉಪಯುಕ್ತವಾಗಿದೆ. ಇತ್ತೀಚೆಗೆ ಬಾಂಗ್ಲಾದೇಶ ಸೇನೆ ಟಾಟಾ ಮೋಟಾರ್ಸ್ ಸಂಸ್ಥೆ ಹೆಕ್ಸಾ ಕಾರನ್ನು ಬಾಂಗ್ಲೇ ಸೇನೆಯ ಅಧೀಕೃತ ವಾಹನವಾಗಿ ಸೇರಿಸಿಕೊಂಡಿದೆ. ಇದೀಗ ಥಾಯ್ಲೆಂಡ್ ಸರ್ಕಾರ ಕೂಡ ಭಾರತದ ಟಾಟಾ ಮೋಟಾರ್ಸ್ ಖರೀದಿಗೆ ಮುಂದಾಗಿದೆ.
 

click me!