ನಗರ ಪ್ರದೇಶಗಳಲ್ಲಿ ಹೆಚ್ಚಾಯ್ತು ಸಂಚಾರ ದಟ್ಟಣೆ: ಜನರಿಗಿಂತ ವಾಹನ ಸಂಖ್ಯೆಯೇ ಹೆಚ್ಚು!

By Suvarna News  |  First Published Sep 13, 2020, 9:10 PM IST

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಅನ್‌ಲಾಕ್ ಆದರೂ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮ ನಗರ ಪ್ರದೇಶ ಹಾಗೂ ಹೈವೇಗಳಲ್ಲಿ ವಾಹನದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.


ಬೆಂಗಳೂರು(ಸೆ.13): ಕೊರೋನಾ ವೈರಸ್ ಎಲ್ಲರ ಬದುಕನ್ನೇ ಬದಲಿಸಿದೆ. ಆಹಾರ ಕ್ರಮ, ಜೀವನ ಶೈಲಿ ಸೇರಿದಂತೆ ಎಲ್ಲವೂ ಬದಲಾಗಿದೆ. ಇದರಲ್ಲಿ ಪ್ರಮುಖವಾಗಿ ಸಾರ್ವಜನಿಕ ವಾಹನ ಬಳಕೆ ಮಾಡುತ್ತಿದ್ದವರೆಲ್ಲಾ ಖಾಸಗಿ ವಾಹನದಲ್ಲಿ ಪ್ರಯಾಣಿಸಲು ಇಷ್ಟಪಡುತ್ತಿದ್ದಾರೆ. ಕಾರಣ ಸುರಕ್ಷತೆ. ಕೊರೋನಾ ವೈರಸ್ ಅಪ್ಪಳಿಸುವ ಮುನ್ನ ಖಾಸಗಿ ವಾಹನವಿದ್ದರೂ ಸಾರ್ವಜನಿಕ ವಾಹನದಲ್ಲಿ ಓಡಾಡುವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.

ಡ್ರಿಂಕ್ & ಡ್ರೈವ್‌ಗಿಂತ ಟಚ್ ಸ್ಕ್ರೀನ್ ಬಳಸುವುದು ಅತ್ಯಂತ ಅಪಾಯಕಾರಿ; ಕಾರಣ ಇಲ್ಲಿದೆ!

Latest Videos

undefined

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ನಗರ ಪ್ರದೇಶ, ಹೈವೇ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹಳೇ ವಾಹನ ಖರೀದಿ ಸಂಖ್ಯೆಯೂ ಹೆಚ್ಚಾಗಿದೆ. ರಸ್ತೆಗಳಲ್ಲಿ ಪ್ರತಿ ದಿನ ಓಡಾಡವು ವಾಹನ ಸಂಖ್ಯೆ ದುಪ್ಪಟ್ಟಾಗಿದೆ.  ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನರಿಗಿಂತ ಹೆಚ್ಚು ವಾಹನಗಳೇ ಕಾಣಸಿಗುತ್ತಿದೆ.

ಭಾರತದಲ್ಲಿ ಚೇತರಿಸಿಕೊಂಡ ಆಟೋ ಸೇಲ್ಸ್, ಮಾರುತಿಗೆ ಮೊದಲ ಸ್ಥಾನ!

ಗೋವಾ ಹಾಗೂ ಬೆಂಗಳೂರು ಸಂಪರ್ಕಿಸುವ ಪುಣೆ ಸತಾರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿನ ವಾಹನ ಸಂಖ್ಯೆ ಹೆಚ್ಚಾಗಿದೆ. ಈ ಹೆದ್ದಾರಿಯಲ್ಲಿ ಜುಲೈ ತಿಂಗಳಲ್ಲಿ ಪ್ರತಿ ದಿನ 31,000 ವಾಹನ ಓಡಾಡುತ್ತಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಈ ಸಂಖ್ಯೆ 41,000 ವಾಹನ ಓಡಾಡುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂಕಿ ಅಂಶ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಈ ಸಂಖ್ಯೆ 52,000ಕ್ಕೆ ಏರಿಕೆಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭವಿಷ್ಯ ನುಡಿದಿದೆ. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ನಗರ ಪ್ರದೇಶದಲ್ಲಿ ಜನರು ತಮ್ಮ ಖಾಸಗಿ ವಾಹನಗಳನ್ನೇ ಬಳಕೆ ಮಾಡುತ್ತಿದ್ದಾರೆ. ಇದರಿಂದ ಟ್ರಾಫಿಕ್ ಗಣನೀಯ ಏರಿಕೆಯಾಗಿದೆ.

click me!