Tata Altroz Facelift: ಮಾರುತಿ, ಸ್ವಿಫ್ಟ್​ಗೆ ಸೆಡ್ಡು ಹೊಡೆದು ಬಿಡುಗಡೆಯಾಯ್ತು ಅಗ್ಗದ ಕಾರು! ಇದರ ವಿಶೇಷತೆ ನೋಡಿ...

Published : May 22, 2025, 04:52 PM ISTUpdated : May 22, 2025, 04:56 PM IST
Tata Altroz Facelift: ಮಾರುತಿ, ಸ್ವಿಫ್ಟ್​ಗೆ ಸೆಡ್ಡು ಹೊಡೆದು ಬಿಡುಗಡೆಯಾಯ್ತು  ಅಗ್ಗದ ಕಾರು! ಇದರ ವಿಶೇಷತೆ ನೋಡಿ...

ಸಾರಾಂಶ

ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. ಸ್ವಿಫ್ಟ್, ಬಲೆನೊಗೆ ಪೈಪೋಟಿ ನೀಡಲು ಹೊಸ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ರೂ. 6.89 ಲಕ್ಷದಿಂದ ಆರಂಭವಾಗುವ ಬೆಲೆಯಲ್ಲಿ ಲಭ್ಯ. ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360-ಡಿಗ್ರಿ ವೀವ್ ಮುಂತಾದ ಹೊಸ ಸೌಲಭ್ಯಗಳಿವೆ. ಪೆಟ್ರೋಲ್, ಡೀಸೆಲ್, CNG ಆಯ್ಕೆಗಳಲ್ಲಿ ಲಭ್ಯ.

ಒಂದು ಕಾಲದಲ್ಲಿ ಲಕ್ಸುರಿ ಎಂದುಕೊಂಡಿದ್ದ ಕಾರುಗಳು ಇಂದು ಬಹುತೇಕ ಮನೆಗಳಿಗೆ ನೆಸ್ಸಸ್ಸರಿ ಎನ್ನಿಸುವಷ್ಟರ ಮಟ್ಟಿಗೆ ಬೆಳೆದಿದೆ. ಕಾರುಗಳು ಇಲ್ಲದ ಮನೆಗಳು ಅಪರೂಪ ಎನ್ನುವ ಸ್ಥಿತಿ ಇಂದಿನದ್ದು. ಇದೇ ಕಾರಣಕ್ಕೆ, ಕಾರು ತಯಾರಿಕಾ ಕಂಪೆನಿಗಳು ಕೂ ಪೈಪೋಟಿಗೆ ಬಿದ್ದು ಕಡಿಮೆ ಬೆಲೆಯ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ. ಇದೀಗ, ಮಾರುತಿ, ಸ್ವಿಫ್ಟ್​ಗೆ ಸೆಡ್ಡು ಹೊಡೆದು ಟಾಟಾ ಅದಕ್ಕಿಂತಲೂ ಅಗ್ಗದ ಕಾರುಗಳನ್ನು ಇಂದು ಬಿಡುಗಡೆ ಮಾಡಿದೆ. ಇದೇ ಟಾಟಾ ಆಲ್ಟ್ರೋಜ್. , iCNG, ಐಟರ್ಬೊ ಮತ್ತು ರೇಸರ್‌ನಂತಹ ವಿಭಿನ್ನ ಪವರ್‌ಟ್ರೇನ್‌ಗಳೊಂದಿಗೆ ಹೊಸ ರೂಪಾಂತರಗೊಂಡು ಈ ಕಾರು ಬಿಡುಗಡೆಯಾಗಿದೆ.  ಹೊಸ ಮುಂಬರಲಿರುವ ಟಾಟಾ ಆಲ್ಟ್ರೋಜ್ ಅನ್ನು ಸ್ಮಾರ್ಟ್, ಪ್ಯೂರ್, ಪ್ಯೂರ್ ಎಸ್, ಕ್ರಿಯೇಟಿವ್ ಎಸ್, ಅಕಾಂಪ್ಲಿಷ್ಡ್ ಮತ್ತು ಅಕಾಂಪ್ಲಿಷ್ಡ್ ಪ್ಲಸ್ ಎಸ್ ಎಂಬ ಹೊಸ ವೇರಿಯೆಂಟ್‌ಗಳೊಂದಿಗೆ ನೀಡಲಾಗುವುದು. ಗ್ರಾಹಕರಿಗೆ ಹೊಸ ಅನುಭವ ಹಾಗೂ ಫೀಚರ್ಸ್ ವಿಷಯದಲ್ಲಿ ಹೊಸತನವಿರಲಿ ಎಂಬ ಉದ್ದೇಶದಿಂದ ಹಲವು ಟ್ರಿಮ್‌ಗಳನ್ನು ಪರಿಚಯಿಸಲಾಗಿದೆ.


ಮಾರುತಿ ಬಲೆನೊ ಮತ್ತು ಸ್ವಿಫ್ಟ್‌ನಂತಹ ಕಾರುಗಳೊಂದಿಗೆ ಸ್ಪರ್ಧಿಸಲು ಟಾಟಾ ಮೋಟಾರ್ಸ್‌ನ ಆಲ್ಟ್ರೋಜ್‌ ಫೇಸ್‌ಲಿಫ್ಟ್ (Tata Altroz Facelift) ಆವೃತ್ತಿಯ ಟೀಸರ್ ಕಳೆದ ತಿಂಗಳು ರಿಲೀಸ್ ಮಾಡಿದ್ದಾಗ ಇದು ಹವಾ ಸೃಷ್ಟಿಸಿತ್ತು.  ಪ್ರೀಮಿಯಂ ಹ್ಯಾಚ್‌ಬ್ಯಾಕ್ ವರ್ಗದ ಕಾರು ಈಗ ಮಾರುಕಟ್ಟೆಗೆ ಬರಲು ಸಜ್ಜಾಗಿ ನಿಂತಿದೆ.  ಇದಾಗಲೇ  ಈ ಕಾರಿನ ಮೊದಲ ನೋಟ ಇದೀಗ ಬಹಿರಂಗಗೊಂಡಿದ್ದು, ಇಂದು ಅದನ್ನು ಉದ್ಘಾಟನೆ ಮಾಡಲಾಗಿದೆ.  ಜನವರಿ 2020 ರಲ್ಲಿ ಮೊದಲು ಬಿಡುಗಡೆಯಾದ ಈ ಕಾರು ಅಂದಿನಿಂದ ಯಾವುದೇ ದೊಡ್ಡ ಬದಲಾವಣೆಗಳಿಲ್ಲದೆ ಹಾಗೆಯೆ ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಫೇಸ್‌ಲಿಫ್ಟ್ ಆವೃತ್ತಿಯ ಟೀಸರ್‌ನಲ್ಲಿ ಈ ಕಾರಿನಲ್ಲಿ ಅನೇಕ ಬದಲಾವಣೆ ಮಾಡುವ ಮೂಲಕ ಬಿಡುಗಡೆಗೊಳಿಸಲಾಗಿದೆ.  ಟಾಟಾ ಆಲ್ಟ್ರೋಜ್ 2020 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಕಾಲಾನಂತರದಲ್ಲಿ, ಆಲ್ಟ್ರೋಜ್ ಶ್ರೇಣಿಯು 2021 ರಲ್ಲಿ ಡಾರ್ಕ್ ಎಡಿಷನ್, 2022 ರಲ್ಲಿ ಡ್ಯುಯಲ್-ಕ್ಲಚ್ ಡಿಸಿಎ, 2023 ರಲ್ಲಿ ಟ್ವಿನ್-ಸಿಲಿಂಡರ್ ಸಿಎನ್‌ಜಿ ಮತ್ತು 2024 ರಲ್ಲಿ ರೇಸರ್ ಎಡಿಷನ್‌ನೊಂದಿಗೆ ಗ್ರಾಹಕರ ಮನಗೆದ್ದಿದೆ. ಇದೀಗ 2025 ರ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. 

ಐಫೋನ್ 17ಗೆ ಬುಕಿಂಗ್​ಗೆ ಕಾಯ್ತಿದ್ದೀರಾ? ಗುಡ್​ ನ್ಯೂಸ್​ ಇಲ್ಲಿದೆ: ರೇಟು, ಡೇಟು, ವಿಶೇಷತೆ- ಪುಲ್​ ಡಿಟೇಲ್ಸ್​...
 
ಅಂದಹಾಗೆ ಇಂದು ಬಿಡುಗಡೆಯಾಗಿರುವ ಆಲ್ಟ್ರೋಜ್ ಬೆಲೆ  ರೂ. 6.89 ಲಕ್ಷ (ಎಕ್ಸ್-ಶೋರೂಂ). ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡಿರುವ ಹೊಸ ಆಲ್ಟ್ರೋಜ್, ಅದರ ಪೂರ್ವವರ್ತಿಗಿಂತ ಕೆಲವು ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ ಇಂದು ಬಿಡುಗಡೆಗೊಂಡಿದೆ.  ಇನ್ನು ಇದರ ವಿಶೇಷತೆಗಳ ಬಗ್ಗೆ ಹೇಳುವುದಾದರೆ,  ಅಪ್​ಡೇಟ್​ ಆಗಿರುವ  ಟಾಟಾ ಆಲ್ಟ್ರೋಜ್‌, ಒಳಾಂಗಣದಲ್ಲಿ ವಿಭಿನ್ನ ಲುಕ್​ ನೀಡುತ್ತಿದೆ.  ಇದಕ್ಕೆ ನವೀನ ಮಾದರಿಯ ಮತ್ತು ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.  360-ಡಿಗ್ರಿ ವೀವ್ ಸೇರಿದಂತೆ ಸುರಕ್ಷತೆ ಮತ್ತು ಸೌಕರ್ಯಕ್ಕೆ ಸಂಬಂಧಿಸಿದ ಹಲವಾರು ಇತರ ವೈಶಿಷ್ಟ್ಯಗಳೂ ಇದರಲ್ಲಿ ಇವೆ.  
 
ಹೊರಭಾಗವು ಹೊಸ ಗ್ರಿಲ್ ವಿನ್ಯಾಸ ಮತ್ತು ಫ್ಲಶ್ - ಫಿಟ್ಟಿಂಗ್ ಡೋರ್ ಹ್ಯಾಂಡಲ್ ಗಳನ್ನು ಒಳಗೊಂಡಿದ್ದರೆ, 'ಲುಮಿನೇಟ್' ಎಂದು ಕರೆಯಲ್ಪಡುವ ಮುಂಭಾಗದ ಎಲ್ಇಡಿ ಲೈಟ್‌ಗಳನ್ನು ನೀಡಲಾಗಿದೆ. ಹಾಗೆಯೇ ಹಿಂಭಾಗದಲ್ಲಿ ಈಗ ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ. ಯಾಂತ್ರಿಕವಾಗಿ, ವಾಹನ ತಯಾರಕರು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆಲ್ಟ್ರೊಜ್ ಅನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ನೊಂದಿಗೆ ನೀಡಲಾಗುವುದು. ಜೊತೆಗೆ ಮ್ಯಾನುವಲ್‌ನೊಂದಿಗೆ ಸಿಎನ್‌ಜಿ ಆವೃತ್ತಿಯನ್ನು ನೀಡಲಾಗುವುದು. ಹಾಗೆಯೇ 1.5-ಲೀಟರ್ ಡೀಸೆಲ್ ಜೊತೆಗೆ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುವುದು.

ಷೇರುಪೇಟೆಯಲ್ಲಿ ಅಬ್ಬರಿಸಿದ ಗೂಳಿ: ಸೆನ್ಸೆಕ್ಸ್​- ನಿಫ್ಟಿ ದಾಖಲೆ

PREV
Read more Articles on
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ