ಟ್ರಾಫಿಕ್ ಸಮಸ್ಯೆಗೆ ಹೊಸ ರೂಲ್ಸ್, ಪಾರ್ಕಿಂಗ್ ಸರ್ಟಿಫಿಕೇಟ್ ಕೊಟ್ರೆ ಮಾತ್ರ ಕಾರು ಖರೀದಿಗೆ ಅವಕಾಶ

Published : May 20, 2025, 06:06 PM IST
ಟ್ರಾಫಿಕ್ ಸಮಸ್ಯೆಗೆ ಹೊಸ ರೂಲ್ಸ್, ಪಾರ್ಕಿಂಗ್ ಸರ್ಟಿಫಿಕೇಟ್ ಕೊಟ್ರೆ ಮಾತ್ರ ಕಾರು ಖರೀದಿಗೆ ಅವಕಾಶ

ಸಾರಾಂಶ

ಕಾರ್ಪೋರೇಶನ್‌ನಿಂದ ಪಾರ್ಕಿಂಗ್ ಸರ್ಟಿಫಿಕೇಟ್ ಮಾಡಿಸಿಕೊಂಡು ನೀಡಿದರೆ ಮಾತ್ರ ಹೊಸ ಕಾರಿನ ರಿಜಿಸ್ಟ್ರೇಶನ್ ಆಗಲಿದೆ. ಪಾರ್ಕಿಂಗ್ ಇಲ್ಲಾ ಅಂದರೆ ಹೊಸ ಕಾರು ಖರೀದಿಸಲು ಸಾಧ್ಯವಿಲ್ಲ. ಟ್ರಾಫಿಕ್ ಸಮಸ್ಯೆ, ರಸ್ತೆಯಲ್ಲಿ ಪಾರ್ಕ್ ಮಾಡುವ ಸಮಸ್ಯೆಗೆ ಅಂತ್ಯಹಾಡಲು ಹೊಸ ನಿಯಮ ಜಾರಿಯಾಗುತ್ತಿದೆ.

ಮುಂಬೈ(ಮೇ.20) ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ರಸ್ತೆ ಬದಿಗಳಲ್ಲಿ ಪಾರ್ಕಿಂಗ್‌ನಿಂದ ಪ್ರತಿ ದಿನ ಹಲವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿನ ಈ ಸಮಸ್ಯೆಯಿಂದ ಜನಸಾಮಾನ್ಯರು ಹೆಚ್ಚಿನ ಸಮಯ ರಸ್ತೆಯಲ್ಲೇ ಕಳೆಯಬೇಕಾಗಿದೆ. ದಿನದಿಂದ ದಿನಕ್ಕೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ರಸ್ತೆಗಳು ಕಿರಿದಾಗುತ್ತಿದೆ. ಹೀಗಾಗಿ ಹೊಸ ನಿಯಮಗಳು ಜಾರಿಯಾಗುತ್ತಿದೆ. ಟ್ರಾಫಿಕ್ ಸಮಸ್ಯೆ, ರಸ್ತೆ ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡುವ ಸಮಸ್ಯೆ ತಪ್ಪಿಸಲು ಹೊಸ ಟ್ರಾಫಿಕ್ ನಿಯಮ ಜಾರಿಯಾಗುತ್ತಿದೆ. ಈ ನಿಯಮದ ಪ್ರಕಾರ ಹೊಸ ವಾಹನ ಖರೀದಿಸಲು, ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್  ನೀಡಬೇಕು. ಕಾರ್ಪೋರೇಶನ್‌ನಿಂದ ಅಧಿಕೃತವಾಗಿ ಸರ್ಟಿಫಿಕೇಟ್ ಇದ್ದರೆ ಮಾತ್ರ ಹೊಸ ವಾಹನ ರಿಜಿಸ್ಟ್ರೇಶನ್ ಆಗಲಿದೆ. ಪಾರ್ಕಿಂಗ್ ಇಲ್ಲಾ ಅಂದರೆ ಕಾರು ಖರೀದಿಸಲು ಸಾಧ್ಯವಿಲ್ಲ. ಈ ಹೊಸ ನಿಯಮ ಮುಂಬೈನಲ್ಲಿ ಜಾರಿಗೆ ಬರುತ್ತಿದೆ.

ಪಾರ್ಕಿಂಗ್ ಸರ್ಟಿಫಿಕೇಟ್ ಕಡ್ಡಾಯ
ಮುಂಬೈನಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಟ್ರಾಫಿಕ್ ಸಮಸ್ಯೆ ವಿಪರೀತವಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಈಗಲೇ ಎಚ್ಚೆತ್ತುಕೊಂಡಿದೆ. ಯಾರಿಗೆ ಕಾರು ಪಾರ್ಕಿಂಗ್ ಮಾಡಲು ಸ್ಥಳವಕಾಶವಿದೆಯೋ ಅವರಿಗೆ ಮಾತ್ರ ಹೊಸ ಕಾರು ಖರೀದಿಗೆ ಅವಕಾಶ ನೀಡಲಾಗುತ್ತದೆ. ಬಾಡಿಗೆ ಮನೆ ಅಥವಾ ಸ್ವಂತ ಮನೆ ಯಾವುದೇ ಆದರೂ ಪಾರ್ಕಿಂಗ್ ಇರಬೇಕು. ಪಾರ್ಕಿಂಗ್ ಇದ್ದರೆ ಅದಕ್ಕೆ ಸರ್ಟಿಫಿಕೇಟ್ ಮಾಡಿಸಿಕೊಂಡು ನೀಡಿದರೆ ಮಾತ್ರ ಹೊಸ ಕಾರು ಖರೀದಿಗೆ ಅವಕಾಶ ಸಿಗುತ್ತೆ. 

 ಸಾರಿಗೆ ಸಚಿವರಿಂದ ಘೋಷಣೆ
ಈ ಹೊಸ ನಿಯಮ ಕುರಿತು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸಾರನಾಯ್ಕ್ ಘೋಷಿಸಿದ್ದಾರೆ. ಮುಂಬೈ ಮಹಾನಗರದೊಳಗೆ ಯಾರೇ ಹೊಸ ಕಾರು ಖರೀದಿಸಲು ಪಾರ್ಕಿಂಗ್ ಇರಲಬೇಕು. ಹೊಸ ಕಾರು ಖರೀದಿಸಿ ಬಳಿಕ ರಸ್ತೆ ಬದಿಯಲ್ಲಿ, ಫ್ಲೇ ಓವರ್ ಕಳೆಗ ಪಾರ್ಕ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೋ ಪಾರ್ಕಿಂಗ್ ಕಾರಣದಿಂದ ದುಬಾರಿ ದಂಡ ವಿಧಿಸಿದರೂ ಈ ಸಮಸ್ಯೆ ಪರಿಹಾರವಾಗುತ್ತಿಲ್ಲ. ಹೀಗಾಗಿ ಶಾಶ್ವತ ಪರಿಹಾರ ಮಾಡಲಾಗುತ್ತಿದೆ ಎಂದಿದ್ದಾರೆ. 

ಉನ್ನತ ಮಟ್ಟದ ಸಬೆ ಬಳಿಕ ನಿಯಮ ಜಾರಿ
ಸಾರಿಗೆ ಸಚಿವರು ಈಗಾಗಲೇ ನೀತಿ ಕುರಿತು ಘೋಷಣೆ ಮಾಡಿದ್ದಾರೆ. ಇದೀಗ ಇದೇ ನೀತಿ ಜಾರಿ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ. ಸಾರಿಗೆ ಇಲಾಖೆ, ಟ್ರಾಫಿಕ್ ವಿಭಾಗ, ಮುಖ್ಯಮಂತ್ರಿಗಳನ್ನೊಳಗೊಂಡ ಸಭೆಯಲ್ಲಿ ಈ ಹೊಸ ನೀತಿ ಜಾರಿ, ದಂಡ ಸೇರಿದಂತೆ ಇತರ ಮಾಹಿತಿಗಳನ್ನು ಚರ್ಚಸಲಾಗುತ್ತದೆ ಎಂದಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಕಿಂಗ್ ಕಡ್ಡಾಯ
ಮುಂಬೈನಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಕೇವಲ ಮನೆಯವರಿಗೆ ಮಾತ್ರವಲ್ಲ, ಅವರ ಅತಿಥಿಗಳು, ಇತರರಿಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಬೇಕು. ಅಪಾರ್ಟ್‌ಮೆಂಟ್‌ ಕಾರಣದಿಂದ ಯಾರೂ ಕೂಡ ಹೊರಗಡೆ, ರಸ್ತೆ ಬದಿಯಲ್ಲಿ ಕಾರು ಪಾರ್ಕ್ ಮಾಡುವಂತಿಲ್ಲ. ಹೀಗಾಗಿ ಹೊಸ ಕಟ್ಟಡಗಳು ಈ ನಿಯಮಕ್ಕೆ ಅನುಗುಣವಾಗಿ ಕಟ್ಟಬೇಕು ಎಂದಿದ್ದಾರೆ. 

ಹೊಸ ಪಾರ್ಕಿಂಗ್ ಕಟ್ಟಡ ನಿರ್ಮಾಣ
ಮುಂಬೈನಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಹೊಸ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವರ ಹೇಳಿದ್ದಾರೆ. ಸರ್ಕಾರದಿಂದ ಪ್ರಮುಖ ಕೇಂದ್ರ, ಶಾಪಿಂಗ್ ಸೆಂಟರ್, ಹೊಟೆಲ್,ಪ್ರವಾಸಿ ತಾಣಗಳ ಬಳಿ ಕಾರು ಪಾರ್ಕಿಂಗ್ ಹೊಸ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಯಾರೂ ಕೂಡ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡುವ ಪರಿಸ್ಥಿತಿ ಇರುವುದಿಲ್ಲ ಎಂದಿದ್ದಾರೆ. 
 

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು