ಟಾಟಾ ಅಲ್ಟ್ರೋಝ್ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಸದ್ಯ ಕಾರಿನ ಬುಕಿಂಗ್ ಆರಂಭಗೊಂಡಿದೆ. ನೂತನ ಕಾರಿನ ಬುಕಿಂಗ್ ಬೆಲೆ, ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ನ.30): ಬಹುನಿರೀಕ್ಷಿತ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆಗ ಸಜ್ಜಾಗಿದೆ. 2020ರ ಜನವರಿಯಲ್ಲಿ ಟಾಟಾ ಅಲ್ಟ್ರೋಝ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಕಾರು ಲಾಂಚ್‌ಗೆ ಇನ್ನೊಂದು ತಿಂಗಳು ಮಾತ್ರ ಬಾಕಿ. ಹೀಗಾಗಿ ಕೆಲ ಡೀಲರ್‌ಗಳು ಈಗಾಗಲೇ ಪ್ರೀ ಬುಕಿಂಗ್ ಆರಂಭಿಸಿದ್ದಾರೆ. 21,000 ರೂಪಾಯಿ ಪಾವತಿಸಿ ನೂತನ ಅಲ್ಟೋಜ್ ಕಾರು ಬುಕ್ ಮಾಡಬಹುದು.
undefined
ಇದನ್ನೂ ಓದಿ: ಟಾಟಾ ಅಲ್ಟ್ರೋಝ್ ಕಾರು ಟೀಸರ್ ಬಿಡುಗಡೆ
ಮುಂಬೈ ಹಾಗೂ ದೆಹಲಿ ಡೀಲರ್‌ಗಳಲ್ಲಿ ಗ್ರಾಹಕರು ಈಗಲೇ ಅಲ್ಟ್ರೋಜ್ ಕಾರು ಪ್ರಿ ಬುಕಿಂಗ್ ಮಾಡಿಕೊಳ್ಳಬಹುದು. ಆದರೆ ಬೆಂಗಳೂರು, ಚೆನ್ನೈ ಸೇರಿದಂತೆ ಇತರ ಕೆಲ ನಗರಗಳಲ್ಲಿ ಡಿಸೆಂಬರ್ 4 ರಿಂದ ಬುಕಿಂಗ್ ಆರಂಭಗೊಳ್ಳಲಿದೆ. 2018ರ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿದ್ದ ಕಾರು ಇದೀಗ 2020ರ ಆರಂಭದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.
ಇದನ್ನೂ ಓದಿ: TATA ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- i20,ಬಲೆನೋಗಿಂತ ಕಡಿಮೆ!
ಮಾರುತಿ ಬಲೆನೋ, ಹ್ಯುಂಡೈ ಐ20 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆಯಾಗುತ್ತಿದೆ. ಪ್ರಿಮೀಯಂ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಟಾಟಾ ಅಲ್ಟ್ರೋಜ್ ಕಾರು ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಕಂಪನಿ ಹೇಳಿದೆ. ನೂತನ ಟಾಟಾ ಅಲ್ಟ್ರೋಜ್ ಕಾರಿನ ಬೆಲೆ 7.5 ರಿಂದ 8.2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಾರಿನ ತಾಂತ್ರಿಕ ಮಾಹಿತಿ ಬಹಿರಂಗವಾಗಿಲ್ಲ. ಟಾಟಾ ಅಲ್ಟ್ರೋಜ್ ಕಾರು 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಎಂದು ನಿರೀಕ್ಷಿಸಲಾಗುತ್ತಿದೆ. bs6 ಎಂಜಿನ್ ಹೊಂದಿರಲಿದೆ. ಆದರೆ ಡೀಸೆಲ್ ಎಂಜಿನ್ ಕಾರು ಬಿಡುಗಡೆ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: