ಭಾರತದಲ್ಲಿ ಲ್ಯಾಂಬೋರ್ಗಿನಿಗೆ ಬೇಡಿಕೆ ಕುಂದಿಲ್ಲ; ಕೊರೋನಾ ನಡುವೆ ದುಬಾರಿ ಕಾರುಬಾರು!

By Suvarna NewsFirst Published Jul 5, 2020, 7:55 PM IST
Highlights

ಕೊರೋನಾ ವೈರಸ್ ಹೊಡೆತಕ್ಕೆ ಭಾರತದಲ್ಲಿನ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದೆ. ಮಾರಾಟದಲ್ಲಿ ದಾಖಲೆಯ ಕುಸಿತ ಕಂಡಿದೆ. ಆದರೆ ಭಾರತದಲ್ಲಿ ಲ್ಯಾಂಬೋರ್ಗಿನಿಗೆ ಯಾವುದೇ ಬೇಡಿಕೆ ಕಡಿಮೆಯಾಗಿಲ್ಲ. ಹಲವರು ತಮ್ಮ ನೂತನ ಕಾರು ಡೆಲಿವರಿಯನ್ನು ಶೀಘ್ರದಲ್ಲೇ ಮಾಡುವಂತೆ ಮನವಿ ಕೂಡ ಮಾಡಿದ್ದಾರೆ. ಭಾರತದಲ್ಲಿನ ಲ್ಯಾಂಬೋರ್ಗಿನಿ ಬೇಡಿಕೆ ವಿವರ ಇಲ್ಲಿದೆ.
 

ಬೆಂಗಳೂರು(ಜು.05): ಇಟೆಲಿ ಮೂಲದ ಸ್ಪೋರ್ಟ್ ಕಾರು ಮೇಕರ್ ಲ್ಯಾಂಬೋರ್ಗಿನಿ ವಿಶ್ವದ ಇತರ ದೇಶಗಳಿಗಿಂತ ಹೆಚ್ಚು ಬೇಡಿಕೆ ಇರುವುದು ಭಾರತದಲ್ಲಿ. ಅದರಲ್ಲೂ ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ ಕಾರಿಗೆ ಬಹುಬೇಡಿಕೆ ಇದೆ. ಕೊರೋನಾ ವೈರಸ್ , ಲಾಕ್‌ಡೌನ್‌ಗಳಿಂದ ಸ್ಥಗಿತಗೊಂಡಿದ್ದ ಲ್ಯಾಂಬೋರ್ಗಿನಿ ಕಾರು ಮಾರಾಟ ಹಾಗೂ ಡಿಲೆವರಿ ಆರಂಭಗೊಂಡಿದೆ. 

ದುಬಾರಿ ಲ್ಯಾಂಬೋರ್ಗಿನಿ ಖರೀದಿಸುವವರಲ್ಲಿ ಬೆಂಗ್ಳೂರಿಗರು ವಿಶ್ವದಲ್ಲೇ ಮೊದಲು!.

ಕೊರೋನಾ ವೈರಸ್ ಸಂಕಷ್ಟದ ಸಮಯದಲ್ಲಿ ಭಾರತದಲ್ಲಿ ಬುಕ್ ಆಗಿದ್ದ ಯಾವ  ಲ್ಯಾಂಬೋರ್ಗಿನಿ ಕಾರನ್ನು ಯಾವ ಗ್ರಾಹಕರೂ ಕೂಡ ರದ್ದು ಮಾಡಿಲ್ಲ. ಇಷ್ಟೇ ಅಲ್ಲ ಹಲವರು ಶೀಘ್ರದಲ್ಲೇ ಕಾರು ಡೆಲಿವರಿ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಲ್ಯಾಂಬೋರ್ಗನಿ ಇಂಡಿಯಾ ಹೇಳಿದೆ. 

7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬುಕಿಂಗ್ ಸಂಖ್ಯೆ ಕಡಿಮೆ ಇದೆ. ಆದರೆ ಸಂಕಷ್ಟದ ಪರಿಸ್ಥಿತಿ ಎದುರಾಗಿಲ್ಲ. ಕಳೆದ ವರ್ಷ 52 ಲ್ಯಾಂಬೋರ್ಗಿನಿ ಸೂಪರ್ ಕಾರು ಮಾರಾಟವಾಗಿದೆ. ಈ ವರ್ಷ ಈ ಸಂಖ್ಯೆ ತಲುಪುದು ಕಷ್ಟ. ಆದರೆ ಗಣನೀಯ ಮಾರಾಟ ಕುಸಿತದಿಂದ ಪಾರಾಗಿದ್ದೇವೆ ಎಂದು ಲ್ಯಾಂಬೋರ್ಗಿನಿ ಇಂಡಿಯಾ ಹೇಳಿದೆ.

ಲ್ಯಾಂಬೋರ್ಗಿನಿ ಹುರಾಕ್ಯಾನ್ Evo RWD ಬಿಡುಗಡೆ, ಬೆಂಗ್ಳೂರಲ್ಲಿ ಸಿಗಲಿದೆ ಕಾರು!

ಎಪ್ರಿಲ್, ಮೇ ತಿಂಗಳಲ್ಲಿ ಕೊರೋನಾ ವೈರಸ್ ಕಾರಣ ಸುರಕ್ಷತೆಯಿಂದ ಡೀಲರ್, ಶೋ ರೂಂ ಹಾಗೂ ಘಟಕ ಸ್ಥಗಿತಗೊಂಡಿತ್ತು. ಅನ್‌ಲಾಕ್ 1.0 ಮೂಲಕ ಲ್ಯಾಂಬೋರ್ಗಿನಿ ಇಂಡಿಯಾ ನಿಧಾನವಾಗಿ ಚಟುವಟಿಕೆ ಆರಂಭಿಸಿತು. ಇದೀಗ ಜುಲೈ ತಿಂಗಳಲ್ಲಿ ಮತ್ತಷ್ಟು ವೇಗ ಪಡೆದುಕೊಳ್ಳುವ ವಿಶ್ವಾಸವಿದೆ ಎಂದು ಲ್ಯಾಂಬೋರ್ಗಿನಿ ಇಂಡಿಯಾ ಹೇಳಿದೆ.

click me!