ಸುಜುಕಿ V Strom 650XT ಎಬಿಎಸ್ ಬೈಕ್ ಬಿಡುಗಡೆ!

Published : Jan 28, 2019, 04:52 PM IST
ಸುಜುಕಿ V Strom 650XT ಎಬಿಎಸ್ ಬೈಕ್ ಬಿಡುಗಡೆ!

ಸಾರಾಂಶ

ಸುಜುಕಿ ಮೋಟಾರ್ ಸಂಸ್ಥೆಯ 650 ಇಂಜಿನ ಸಿಸಿ ಹೊಂದಿರುವ ವಿ ಸ್ಟ್ರೋಮ್ 650 ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್‌ನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

ನವದೆಹಲಿ(ಜ.28):  ಸುಜುಕಿ ಮೋಟಾರ್ ಸಂಸ್ಥೆಯ ನೂತನ ಸುಜುಕಿ ವಿ ಸ್ಟ್ರೋಮ್ 650 XT ABS ಬೈಕ್ ಬಿಡುಗಡೆಯಾಗಿದೆ.  ನೂತನ ಗ್ರಾಫಿಕ್ಸ್, ಹೆಚ್ಚುವರಿ ಫೀಚರ್ಸ್, ಹಾಗೂ ಸುರಕ್ಷತೆ ಪ್ರಮುಖ ಅಂಗ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ನೊಂದಿಗೆ ವಿ ಸ್ಟ್ರೋಮ್ 650 XT ಬಿಡುಗಡೆಯಾಗಿದೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಸುದೀಪ್‌ಗೆ BMW ಬೈಕ್ ಗಿಫ್ಟ್ ನೀಡಿದ ಅಭಿಮಾನಿ!

ನೂತನ ವಿ ಸ್ಟ್ರೋಮ್ 650 ಬೈಕ್ 645 ಸಿಸಿ ಇಂಜಿನ್ ಹೊಂದಿದೆ. ಕವಾಸಕಿ ನಿಂಜಾ 650 ಬೈಕ್‌ಗೆ ಪೈಪೋಟಿಯಾಗಿ ಇದೀಗ ಸುಜುಕಿ ವಿ ಸ್ಟ್ರೋಮ್ 650 ರಸ್ತೆಗಿಳಿದಿದೆ. ಹೀಗಾಗಿ ಪವರ್‌ಫುಲ್ ಇಂಜಿನ್ ಹಾಗೂ ಹಲವು ವಿಶೇಷತೆಗಳೊಂದಿಗೆ ಸುಜುಕಿ ಮತ್ತೆ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ.

ಇದನ್ನೂ ಓದಿ: ಮತ್ತೆ ರಸ್ತೆಗಿಳಿಯುತ್ತಿದೆ ಬಜಾಜ್ ಸ್ಕೂಟರ್!

ನೂತನ ಸುಜುಕಿ ವಿ ಸ್ಟ್ರೋಮ್ 650 ಬೈಕ್ ಬೆಲೆ 7. 46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಲಿಕ್ವಿಡ್ ಕೂಲ್‌ಡ್, 70 ಬಿಹೆಚ್‌ಪಿ ಪವರ್ ಹಾಗೂ 8,800 ಆರ್‌ಪಿಎಂ ಹೊಂದಿದೆ.  ಟ್ವಿನ್ ಇಂಜಿನ್ ನೂತನ ಸುಜುಕಿ ವಿ ಸ್ಟ್ರೋಮ್ 650 ಬೈಕ್ ವಿಶೇಷತೆ.

PREV
click me!

Recommended Stories

ಇದು ಬರೀ ಡಿಸೆಂಬರ್‌ ಅಲ್ಲ, ಕಾರ್‌ ಡಿಸ್ಕೌಂಟ್‌ ಡಿಸೆಂಬರ್‌; ಈ ಐದು ಕಾರ್‌ಗಳಿಗೆ ಇದೆ ಭರ್ಜರಿ ಆಫರ್‌!
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ